Tuesday, February 8, 2011

ಆಧರ ಮಧು ವಧೂನಾಂ ಭಾಗ್ಯವಂತಃ ಪಿಬಂತಿ






ಕಂಡೆ ನಾನು ಹರಯ ಸುಂದರಿ ನಯನ ಮನೋಹರಿ 
ಬಿಟ್ಟ ಕಣ್ಣು ಹಾಗೆ ಇತ್ತು ಮನ ಸೆಳವ  ಕಾಮಿನಿ 
ನೋಡಲವಳ ನನ್ನ ಮನದಿ  ನೂರೊಂದು ಭಾವನೆ 
ಪುರಷತನವು ಕೆಣಕಿ ಒಮ್ಮೆ ಸೋತೆ ಚಲುವೆಗೆ


ಜಡೆಯು ಉದ್ದವಿಹುದು  ಅವಳು ನಾಗವೇಣಿ ಯಲ್ಲವೇ
ತೀಡಿದ  ಹುಬ್ಬು ಅವಳ ಹಣೆಯು ವಿಶಾಲವಾದುದು 
ಬೊಗಸೆ ಕಂಗಳ ಬೆಡಗಿ ಅವಳು ಜಲಜಾಕ್ಷಿ ಎನ್ನಲೇ
ಮೂಗು ಸಂಪಿಗೆ ಗಲ್ಲ ಕೆಂಪಗೆ  ಕಪ್ಪು  ಮಚ್ಚೆ ಅಲ್ಲಿದೆ 


ಜೇನು ತುಟಿಯು ಹೀರು ಎಂಬ  ಕರೆಯ ನೀಡಿದೆ 
ಕಂಠ  ಅದು ಮುತ್ತಿನ ಮಣಿ ಯಿಂದ  ಶೋಭಿತ 
ಕಂಠದಕೆಳಗೆ ಉದಯಿಸುತಿರುವ  ಬಿದಿಗೆ ಚಂದ್ರಮ 
ಸೊಂಟ ಬಳಕಿ ನಡೆಯಲವಳು ಮಧಗಜವ ಹೋಲ್ವಳು 


ಬಳಕುವ ನಡು ನಾಭಿ  ಅಲ್ಲಿ ತೋರುತಿರುವದು 
ಕುಂಭ ನಿತಂಬ ಅದೆಸ್ಟು ಚಂದ ಹೊಲಿಕೆಯು ಎಲ್ಲಿದೆ 
ಮೆಲ್ಲಮೆಲ್ಲನೆ ನಡೆಯತಿರುವ ಹಂಸ ಗಾಮಿನಿ 
ಉಲಿಯಲೋಮ್ಮೆ ಮೆಲ್ಲ ನುಡಿಯ ಹವಳ ರಾಶಿಯು 


ಅವಳ ಮಾದಕ ಸೆಳತಕೊಮ್ಮೆ ಸೋತು ಬಿಟ್ಟೆನು
ವಧುವಿನ ಅಧರದ ಮಧುವ ಹೀರುವದು ಭಾಗ್ಯವಲ್ಲವೇ 
ರತಿಯು ಅವಳು ಸತಿಯು ಆದರೆ ಧನ್ಯ ನಾದೆನು  
ಮಾನಿನಿ ಮಣಿ ಸನಿಹವಿರಲು ಸ್ವರ್ಗ ಮತ್ತೆ  ಇಲ್ಲಿಯೇ  


ಇಂತಹ ಸುಂದರಿ ಸನಿಹ ಬರಲು ನಡುಕ ಮಯ್ಯಿಲಿ 
ಕೂಗಿ ಕೊಂಡ ಅಪ್ಪ ನನ್ನ ಕುಂಭಕರ್ಣ ಎನುತಲಿ 
ಆಗಲೇ ಗೊತ್ತಾದದ್ದು ನಾನು  ಕನ್ಯೆ ನೋಡಿದ್ದು ಕನಸಲಿ 
ಛೆ ....ಕನಸು ಕಾಣುವದಕ್ಕೂ ಬಿತ್ತಲ್ಲ ಅಪ್ಪನಿಂದ ಕತ್ತರಿ 




(ಕ್ಷಮೆ ಇರಲಿ ಸ್ವಲ್ಪ ಅತಿಯಾದ ಕಲ್ಪನೆಗೆ ) 



11 comments:

  1. ನಿಮ್ಮ ಕನಸನ್ನು ನನಸಾಗಿಸಲೇ ನಿಮ್ಮ ಅಪ್ಪ ನಿಮ್ಮನ್ನು ಎಬ್ಬಿಸಿರಬಹುದೆ?

    ReplyDelete
  2. ಮಹಾಬಲರೆ...

    ಸೊಗಸಾಗಿದೆ ನಿಮ್ಮ ಕಾವ್ಯ ಶ್ರಂಗಾರ ಧಾರೆ !!

    ಇಷ್ಟವಾಯಿತು..

    ReplyDelete
  3. @ಸುನಾಥ ಸರ್ --- ಕನಸನ್ನು ನಿಜವಾಗಿಸಲು ನಾನೇ ಅಪ್ಪನನ್ನ ಎಬ್ಬಿಸಬೇಕಿದೆ ಇಲ್ಲ ಅಂದರೆ ಈ ಜನ್ಮದಲ್ಲಿ ನಮ್ಮಪ್ಪ ನನ್ನ ತಲೆಗೆ ಬಾಸಿಂಗ ಕಟ್ಟುವ ಪ್ರಯತ್ನ ಮಾಡಲಾರ.....ಈ ಪ್ರಯತ್ನದಲ್ಲಿ ಯಶಸ್ಸು ನನ್ನದಾಗಲು ನಿಮ್ಮ ಹಾರೈಕೆ ಜೋತೆಗಿದೆ ಅಂದುಕೊಂಡಿದ್ದೇನೆ ........

    @ದಿಗ್ವಾಸ್ ಅಣ್ಣಯ್ಯ ಧನ್ಯವಾದ


    @ಪ್ರಕಾಶಣ್ಣಯ್ಯ ಶೃಂಗಾರಧಾರೆಯೋ ಅಥವಾ ಶೃಂಗಾರಾಭಾಸವೋ ಒಟ್ಟು ಮನಸ್ಸಿಗೆ ಬಂದದ್ದು ಗೀಚುವದು ಅದನ್ನ ಮೆಚಿದ್ದಕ್ಕೆ ಧನ್ಯವಾದ..... ನಿಮ್ಮ ಪ್ರೋತ್ಸಾಹಕ್ಕೆ ಛಿರರುಣಿ ......

    ReplyDelete
  4. ನಿಮ್ಮ ಕವನದ ಸೊಗಸು..ಮೆಚ್ಚಿದೆ.

    ReplyDelete
  5. good i like it!!!![ kannada tantraamsha kai kottide]

    ReplyDelete
  6. @ನಾರಾಯಣ ಭಟ್ ಸರ್ ಧನ್ಯವಾದಗಳು


    @ನಮ್ಮಳಗೊಬ್ಬ ಬಾಲು ಸರ್ ಧನ್ಯವಾದ ನಿಮ್ಮ... ಪ್ರೊತ್ಸಾಹಕ್ಕೆ ಋಣಿ

    ReplyDelete
  7. ಸಂದುಸಂಶಯವಳಿದಖಂಡಜ್ಞಾನವಾಯಿತ್ತೆಂದು
    ಪರಧನ-ಪರಸ್ತ್ರೀಗಳುಪಬಹುದೇ? ಯತ್ರ ಜೀವಸ್ತತ್ರ ಶಿವಃ ಎಂಬ ಅಭಿನ್ನಜ್ಞಾನವಾಯಿತ್ತೆಂದು ಶುನಕು-ಸೂಕರ-ಕುಕ್ಕುಟ-ಮಾರ್ಜಾಲಂಗಳ ಕೂಡಿ ಭುಂಜಿಸಬಹುದೇ? ಭಾವದಲ್ಲಿ ತನ್ನ ನಿಜ ನೆಲೆಯರಿಯನರಿವುತ್ತಿಹುದು
    ಸುಜ್ಞಾನ-ಸತ್ಕ್ರಿಯಾ-ಸುನೀತಿ-ಸುಮಾರ್ಗದಲ್ಲಿ ವರ್ತಿಸುವುದುಹೀಂಗಲ್ಲದೆ ಜ್ಞಾನವಾಯಿತ್ತೆಂದು ತನ್ನ ಮನಕ್ಕೆ ಬಂದ ಹಾಂಗೆ ಮೀರಿ ನುಡಿದು ನಡೆದೊಡೆ
    ಶ್ವಾನಗರ್ಭದಲ್ಲಿ ಹುಟ್ಟಿಸದೆ ಬಿಡುವನೆ

    ReplyDelete