ಈಚೀಚೆಗ್ಯಾಕೋ ಒಬ್ಬನೆ ಮುಸ್ಸಂಜೆ ಹೊತ್ತಿನಲ್ಲಿ ನಡೆಯುವದು ಬೇಜಾರಾಗಿದೆ.ಹಾಗೆ ಅವಳನ್ನ ನನ್ನೊಟ್ಟಿಗೆ ಹೆಜ್ಜೆ ಹಾಕ್ತೀಯಾ ಅಂತ ಕೇಳಬೇಕಾಗಿದೆ. ಕೇಳೋಣ ಅಂದ್ರೆ ಅದ್ಯಾಕೋ ಹೊಟ್ಟೆಯ ಮಾತುಗಳು ಹೊರಗೆ ಬರ್ತಾನೆ ಇಲ್ಲ. ಅದಕ್ಕಾಗಿಯೇ ಹೇಳಿದ್ದು ನಾನು ಹೇಳಲೇ ಬೆಕಾದ್ದು ಉಳಿದು ಹೋಗಿದೆ.
ನಡು ರಾತ್ರಿಯ ಮಗ್ಗುಲಲ್ಲಿ ಬಿಕ್ಕಳಿಕೆ. ತಲೆ ತಟ್ಟಿ ಸ್ವಲ್ಪ ನೀರು ಕುಡಿಸುವವರು ಬೇಕಾಗಿದೆ.ಯಾರಲ್ಲಿ ಹೇಳುವದು...? .ಛೆ.........! ಇದನ್ನೆಲ್ಲ ಅವಳಿಗೆ ಹೇಳಿದರೆ ಅಪಾರ್ಥ ಮಾಡಿಕೊಂಡಾಳು. ಅದಕ್ಕೆ ನಾನೆಂದಿದ್ದು ಹೇಳಲೇ ಬೆಕಾದದ್ದು ಉಳಿದು ಹೋಗಿದೆ.
ಇವತ್ತು ಏನಾಯ್ತು ಗೊತ್ತಾ...? ಬರುವಾಗ ಯಾವದೋ ಗಾಡಿ ಗುದ್ದಿ ಕೈ ಸ್ವಲ್ಪ ತರಚಿಕೊಂಡಿದೆ. ಬ್ಯಾಂಡೇಜು ಸುತ್ತಿಕೊಳ್ಳೋಣ ಅಂದ್ರೆ ಒಬ್ಬನಿಂದಾಗದು. ಅನ್ನ ಕಲಸಿ ತಿನ್ನೋಣ ಅಂದ್ರೆ ಅದೂ ಅಗ್ತಾ ಇಲ್ಲ.ಇಂತಹ ಸಮಯದಲ್ಲಿ ಸ್ವಲ್ಪ ಬ್ಯಾಂಡೇಜ್ ಸುತ್ತಿ, ಒಂದು ತುತ್ತು ಅನ್ನ ಎತ್ತಿ ಕೋಡುವವರು ಬೇಕಾಗಿದೆ. ಹಾಗಂತ ಯಾರಹತ್ತಿರ ಹೇಳುವದು...? ಹೀಗೆಲ್ಲಾ ಯಾರ್ಯಾರ ಹತ್ತಿರವೋ ಡಿಮ್ಯಾಂಡ ಇಟ್ರೆ ಹುಚ್ಚಾ ಅಂತಾರೆ.ಇದೆಲ್ಲವನ್ನ ಅವಳ ಹತ್ತಿರ ಹೇಳಬೇಕಾಗಿದೆ .ಅದಕ್ಕೆ ನಾನು ಹೇಳಿದ್ದು . ಹೇಳಲೇ ಬೆಕಾದದ್ದು ಉಳಿದು ಹೋಗಿದೆ.
ಅಲ್ಲಿ ಮರದ ಕೆಳಗೆ ಆಡುವ ಮಕ್ಕಳನ್ನ ತೋರಿಸಿ ಕಿವಿಯಲ್ಲಿ ಅದೇನೋ ಹೇಳಬೇಕಾಗಿದೆ ...............ಕಿವಿಯಲ್ಲೇ ಹೇಳಬೇಕಾದ ವಿಷಯ ಆದ್ದರಿಂದ ನನ್ನ ಸನಿಹ ಕೂತು ಮಾತಿಗೆ ಕಿವಿಯಾಗುವವರು ಬೇಕಾಗಿದೆ ..!.ಹೂಂ.........! ಕೇಳಿಸಿಕೊಳ್ಳುವವರು ಬೇಕಾಗಿದೆ. ಹಾಗಂತ ಯಾರ್ಯಾರಹತ್ತಿರಾನೋ ಹೇಳೋಕಾಗುತ್ತ .....ಅದಕಾಗಿ ಕೇಳಿಸಿಕೊಳ್ಳುವವರು ಸಿಕ್ಕುವರೆಗೂ.... ಹೇಳಲೇ ಬೇಕಾದ್ದು ನನ್ನಲ್ಲಿ ಉಳಿದು ಹೋಗಿದೆ.
ಪೋಲಿ ನೀನು ಹಾಗ್ಯಾಕೆ ಅವಳ ನೋಡ್ತೀಯಾ ಅನ್ನುವವರು ಬೇಕಾಗಿದೆ.............. ಪೋಲಿ ಅನ್ನುವ ಶಬ್ಧ ಕೇಳಿ ತಿರುಗಿ ಏನೋ ಹೇಳಬೇಕಾಗಿದೆ. ಅದೇನು ಅಂತ ನೀವು ಕೇಳಬೇಡಿ. ಅದು ಅವಳಿಗೆಮಾತ್ರ ಹೇಳುವದಾದ್ದರಿಂದ .....ಆ ಮಾತೂ ಕೂಡ ಇನ್ನೂ ನನ್ನಲ್ಲೇ ಉಳಿದು ಹೋಗಿದೆ.
ಬೋರಾಗ್ತಿದ್ಯಾ ನೇರ ವಿಷ್ಯಕ್ಕೆ ಬರ್ಲಾ....? ಊಹುಂ .....! ವಿಷ್ಯ ಏನಂತ ಹೇಳಿದ್ರೆ ನೀವು ನನ್ನ ಏನಂದುಕೊಳ್ತೀರೋ..? ಅಂತೂ ಇಂತೂ ಹೇಳಲೇ ಬೇಕಾದ್ದು ಇನ್ನೂ ಉಳಿದು ಹೋಗಿದೆ .ಮತ್ತೊಂದಿನ ಹೇಳೋಣ ಅಲ್ವಾ...............?
ನಾನು ಕರಾವಳಿ ತೀರದ ಸುಂದರ ಊರು ಹೊನ್ನಾವರದ ಗುಂಡಿಬೈಲಿನವನು.ಒಂದು ಕಡೆ ಕಡಲ ತೀರವಾದರೆ ಇನ್ನೊಂದು ಕಡೆ ಸಹ್ಯಾದ್ರಿ ಪರ್ವತಗಳ ಸಾಲು ಸಾಲು. ಇಂತಹ ಮನಸೆಳವ ನನ್ನ ಊರನ್ನು ಬಿಟ್ಟು ಉಧರ ನಿಮಿತ್ತ ಬೆಂಗಳೂರಿನಲ್ಲಿ ಸಿಂಗಲ್ ರೂಮಿನಲ್ಲಿ ಸೀಲಿಂಗ್ ಫ್ಯಾನಿನ ಕೆಳಗೆ ಭಾವನೆಗಳ ಹೂಜಿಯಲ್ಲಿ ಮನಸ್ಸನ್ನ ಅದ್ದಿ ಕನಸು ಕಾಣುತ್ತಿರುವವನು, ಓದುವದು, ಮನಸ್ಸಿಗೆ ಬಂದದ್ದನ್ನ ಬರೆಯುವದು ನನ್ನ ಹವ್ಯಾಸ. ಬರೆದಿರುವದರಲ್ಲಿ ಕಾಳಿಗಿಂತ ಜೊಳ್ಳೆ ಹೆಚ್ಚು, ಸ್ವಲ್ಪ ಆಲಸಿಯ ಸ್ವಭಾವದವನಾದ ನಾನು ಒಮ್ಮೊಮ್ಮೆ ಭಾವುಕನೂ, ಶುದ್ಧ ತರಲೆಯೂ,ಅತಿಯಾಗಿ ಸ್ನೇಹಿತರನ್ನ ಪ್ರೀತಿಸುವವನೂ ಅಗಿದ್ದೇನೆ, ಇದು ನನ್ನ ಪರಿಚಯ. ಮತ್ತೆ ಹೇಳಿಕೊಳ್ಳುವಂತಹ ಯಾವ ವಿಶೇಷವೂ ನನ್ನಲ್ಲಿಲ್ಲವಾದ್ದರಿಂದ ಪರಿಚಯ ಭಾಷಣ ಇಲ್ಲಿಗೆ ಕೊನೆಗೊಳ್ಳುತ್ತದೆ. ನಾನು ಬರೆದದ್ದನ್ನ ಹಂಸಕ್ಷೀರ ನ್ಯಾಯದಂತೆ ಏನಾದರೂ ಒಳ್ಳೆಯದಿದ್ದರೆ ಮೆಚ್ಚಿಬಿಡಿ.ವಾಸ್ತವೀಕತೆಗೆ ದೂರವಾದದ್ದನ್ನ ಮತ್ತು ನನ್ನ ಹುಚ್ಚುಮನಸ್ಸಿನ ಕೆಲವೊಂದು ಜೊಳ್ಳು ನುಡಿಗಳನ್ನ ಇಲ್ಲೇ ಬಿಟ್ಟುಬಿಡಿ.....
ಮಹಾಭಲಗಿರಿ ಭಟ್ಟರೆ. ಇದು "ಹೇಳಲೇ ಬೇಕಾದ್ದು ಉಳಿದು ಹೋಗಿದೆ..." ಎನ್ನುವುದಕ್ಕಿಂತ "ಬೇಕಾಗಿದ್ದಾಳೆ ಹುಡುಕಿಕೊಡಿ ...." ಎನ್ನುವಂತಿದೆ...
ReplyDeleteಆದಸ್ಟು ಬೇಗ ನಿಮಗೆ ಇದನ್ನೆಲ್ಲ ಹೇಳುವ ಅವಕಾಶಸಿಗಲಿ ಎನ್ನುವದು ನನ್ನ ಹಾರೈಕೆ....
@ Uday ಧನ್ಯವಾದಗಳು ಗುರುಗಳೆ
ReplyDeleteನಿಮ್ಮ ಅಶೀರ್ವಾದ ಸದಾ ಇರಲಿ
ಧೈರ್ಯ ಮಾಡಿ ಹೇಳಿಯೇ ಬಿಡಿ!
ReplyDeletenanu uday avara comment support madti...:) anyway nice one...
ReplyDeleteಸುನಾಥ್ ಸರ್ ಧನ್ಯವಾದ ........................... ದೈರ್ಯಂ ಸರ್ವತ್ರ ಸಾಧನಂ ಅಂತ ನೀವು ಹೇಳುವದೇನೋ ಖರೆ........ ಅದರೂ ದೈರ್ಯವೇ ಸಾಲದು
ReplyDeleteವಾಣಿ ಅಕ್ಕ
ReplyDeleteಅಕ್ಕನ ಆಶಿರ್ವಾದ ಸದಾ ಇರಲಿ
Ha ha ha...Nice one Bhatre, ALL THE VERY BEST.....
ReplyDeleteಚೆನ್ನಾಗಿದೆ.. ನಿಮ್ಮ ಮಾತುಗಳಿಗೆ ಕಿವಿ ಕೊಡುವವರು ಬೇಗ ಸಿಗಲಿ:)
ReplyDeleteಧನ್ಯವಾದಗಳು @ ashokkodlady & ಪುಟ್ಟಿಯ ಅಮ್ಮ
ReplyDeleteನಿಮ್ಮ ಹಾರೈಕೆ ಸದಾ ಇರಲಿ