Friday, April 8, 2011

ಮೇಘದೂತದ ನೆನಪು




ಮೋಡಗಳ ನೋಡಲ್ಲಿ ಮೇಘದೂತದ ನೆನಪು 
ಕಾಡುತಿರುವದು ಮೇಘ ಮೋಡಿ ಮಾಡಿ 
ಓಡುತಿರುವದು ನೋಡಿ ಅನುಮಾನ ಎನಗಿಲ್ಲಿ 
ಬಿತ್ತಿಹನೆ ಸಂದೇಶ ಮತ್ತೆ  ಕವಿರತ್ನ ಮೋಡದಲ್ಲಿ

ಓಡಾಡೊ ಮೇಘಗಳೆ ಎನ್ನಾಸೆ ಒಂದುಂಟು 
ಹೇಳಲೋ ಬೇಡವೂ ಎಂಬನುಮಾನವುಂಟು
 ನಿನ್ನೋಟ ಹಾದಿಯಲಿ ಸಿಗಬಹುದು ನನ್ನವಳು 
ತಿಳಿಸುವೆಯ ಅವಳಿಗೆ ಎನ್ನ ಪ್ರೀತಿ ಸಾಲು

ಹತ್ತಿಲ್ಲ ಹಲವಿಲ್ಲ ಒಂದುವಾಕ್ಯವೆ ಸಾಕು
ತಿಳಿಸಿಬಿಡು ನಂದಿಲ್ಲಿ  ಒಂಟಿ ಬದುಕು 
ತಿರುಗಿ ಸಂದೇಶವ ಕೊಟ್ಟರೆ ಮನದನ್ನೆ  
ಹೊತ್ತು ತರಬಹುದಲ್ಲ ಪ್ರೀತಿ ಪತ್ರವನ್ನು 



ಚಿತ್ರ ಕೃಪೆ ಇಟ್ಟಿಗೆ ಸಿಮೆಂಟು ಪ್ರಕಾಶ್ ಹೆಗ್ಡೆ

ಈ ಚಿತ್ರಕ್ಕೆ  ಛಾಯಾ ಚಿತ್ತಾರ ಬ್ಲಾಗ್ ನಲ್ಲಿ  ಪರಾಂಜಪೆ ಸರ್,ಆಜಾದ್ ಸರ್, ಮುಂಬೈ ಮಿತ್ರ "ಅಶೋಕ್ ರವರು ಬಹಳ ಸೊಗಸಾದ ಕವನವನ್ನ ಬರೆದಿದ್ದಾರೆ .ಅಲ್ಲದೇ ಅಜಾದ್ ಸರ್ ರವರು ತಮ್ಮ ಭಾವ ಮಂಥನದಲ್ಲಿಯೂ ಕೂಡ ಈ ಚಿತ್ರಕ್ಕೆ ಚಂದದ ಸಾಲುಗಳನ್ನ ಪೋಣಿಸಿದ್ದಾರೆ.ಈ ಎರಡೂ ಲಿಂಕ್ ಗಳನ್ನ ಇಲ್ಲಿ ಕೊಟ್ಟಿದ್ದೇನೆ ಓದಿ 





8 comments:

  1. Tumbaa sundara saalugalu Bhatre....Dhanyavaadagalu...

    ReplyDelete
  2. ಎಷ್ಟು ಸೊಗಸಾಗಿದೆ ಕವನ !!

    ನಾನು ನಿಮ್ಮ ಕವನಗಳ ಅಭಿಮಾನಿಯಾಗಿದ್ದೇನೆ.. !!

    "ಹತ್ತಿಲ್ಲ ಹಲವಿಲ್ಲ ಒಂದುವಾಕ್ಯವೆ ಸಾಕು
    ತಿಳಿಸಿಬಿಡು ನಂದಿಲ್ಲಿ ಒಂಟಿ ಬದುಕು
    ತಿರುಗಿ ಸಂದೇಶವ ಕೊಟ್ಟರೆ ಮನದನ್ನೆ
    ಹೊತ್ತು ತರಬಹುದಲ್ಲ ಪ್ರೀತಿ ಪತ್ರವನ್ನು"

    vaah !
    ನಿಮ್ಮ ಸಾಲುಗಳನ್ನು ಓದಿದರೆ ಆ ಹುಡುಗಿ ಓಡೋಡಿ ನಿಮ್ಮ ಬಳಿ ಬರುವಳು !!

    ReplyDelete
  3. blogin ee railu sandesha endu talupeethu alli? Endu chigureethu preethi? endu moodeethu preethi chiguru? mathelliya moggu, hoovu, hannu?...........

    ReplyDelete
  4. ಸೂಪರ್, ನಿನ್ನವಳಿಗೆ ಮೇಘವು ಸಂದೇಶ ತಿಳಿಸಲೆಂಬ ಹಾರೈಕೆ :)

    ReplyDelete
  5. ಮೇಘ ಸ೦ದೇಶ ಚೆ೦ದವಿದೆ. ಶುಭಾಶಯಗಳು.

    ಅನ೦ತ್

    ReplyDelete
  6. ಎಲ್ಲಿರುವಳು ನಿಮ್ಮವಳು ಮೋಡದ ಮರೆಯಲ್ಲೇ...? ಕಾದು ನೋಡೋಣ ನಿಮ್ಮವಳ ಪ್ರೀತಿಪತ್ರವನ್ನು ಆ ಮೋಡಗಳು ಹೊತ್ತು ತರುವವೋ ಎಂದು....( ಕವನದ ಆಂತರ್ಯ ಸ್ಪಷ್ಟತೆ ಸುಂದರವಾಗಿದೆ. ಇಷ್ಟವಾಯಿತು)

    ReplyDelete