ಮರೀಚಿಕೆ

ಕೈಯೊಡ್ಡುವೆಯೇಕೆ ಆವ ಆಶಯಕೆ?
ಹುಸಿ ಮುತ್ತ ಸುತ್ತ ಹಲಹತ್ತು ಬಯಕೆ
ಗಾಳಿಯಲಿ ತೇಲಿ ನಿಲುವುದು ಕ್ಷಣಕೆ
ಸಿಗದು..ಬೇಡ ಆಸೆ ಹಿಡಿಯ ಹಿಡಿತಕೆ
ಸಾಬೂನಿನ ಸೆಳೆತ ಗಾಳಿಯ ಬಿಗಿತ
ನಿನ್ನದಾಗಿಸಿಕೊಳ್ಳಬಯಸುವ ತುಡಿತ
ಇದ್ದರೆ ಹಾಗೇ ಇದ್ದಾವು ಗುಳ್ಳೆಗಳು-ಬಿಗಿದು
ನಿನ ಕರ ಸೋಕೆ ಒಡೆದಾವು ಜಿಗಿದು
ಇದ್ದಷ್ಟು ಸಮಯ ಆನಂದಿಸು ನೋಡಿ
ನಿಸರ್ಗವು ಸ್ವರ್ಗವು ನಡೆಯುತಿರಲಿ ಮೋಡಿ
ಪ್ರೀತಿಯಿಂದ ಅಜಾದ್ ಸರ್ ಬರೆದು ಕೊಟ್ಟಿದ್ದು
ಜೀವನವು ಹಾರುವ ಗುಳ್ಳೆಯಂತೇ ಕ್ಷಣಿಕ
ಗಾಳಿಯಲಿ ತೇಲಿ ದೂರಕ್ಕೆ ಸಾಗಿ ಮಿಂಚಂತೆ ಮಾಯವಾಗಿ
ಹಿಡಿಯ ಹೋದರೆ ಒಡೆದು ಹೋಗುವೆ ಅಸ್ತಿತ್ವ ಇಲ್ಲದಾಗಿ
ಗಗನ ಚುಂಬಿಪ ಬಯಕೆ ಮರೆಯಾಪೆ ದೂರ ಕಳೆದು ಹೋಗಿ
ಕ್ಷಣ ಕಾಲದಾ ಬದುಕು ಗೊತ್ತಿದ್ದು ಹಾರುವೆ ನೀ ಚಂದವಾಗಿ
ಮನುಜ ತಿಳಿ ಜೀವನವು ಹಾರುವ ಗುಳ್ಳೆಯಂತೇ ಕ್ಷಣಿಕ
ಒಳಗಿರುವ ಜೀವವಾಯುವ ದೇಹ ಹಿಡಿದಿಡುವ ತನಕ
ಸ್ವಚ್ಚಂದ ಹಾರಾಡು ದೇಹದಲಿ ಉಸಿರು ಹರಿಯುವವರೆಗೆ
ಜೋಪಾನ ಜತನ ಕಾಳಜಿ ಎಷ್ಟು ವಹಿಸಿದರೂ ಕಡಿಮೆ
ಚಿತ್ರ ಕೃಪೆ ಕಲಾವಿದ ಗಣಪತಿ ಹೆಗ್ಡೆ ಮಹಾಬಲಗಿರಿ ಭಟ್
ಹೀಗೊಂದು ಕಲ್ಪನೆ ತಂಗಿ ನಾಗಶ್ರೀ ಉಪಾಧ್ಯಾಯಳಿಂದ
ಕಣ್ಣ ಮುಚ್ಚಾಲೆ
ಮನಸೆಂಬ ಮುಗಿಲಿನ
ಮಾಯದ ನಲಿವಿನ ಮಿಂಚಂತೆ
ಕಂಡೆ ನೀನು ಜಲಪಾತದ
ಬೋರ್ಗರೆವ ತೆರೆಯಲ್ಲಿನ ನೀರಿನ ಗುಳ್ಳೆಯಂತೆ..
ಅಲೆಯೋಳಗಿನ ಕಣ್ಣ ಮುಚ್ಚಾಲೆಯ
ನಿನ್ನ ಆಟವ ಕಂಡು ಮನಸೋತೆ
ನಿನ್ನೊಳಗೆ ಕೂತು ನಿನ್ನುಸಿರಾಗಿ
ನಿನ್ನ ಪರಿಧಿಯಲಿ ಸುಖವಾಗಿ ಕುಳಿತೆ
ನೀರಿನ ರಭಸಕ್ಕೆ ನುಸುಳಿ
ಕಲ್ಲಿನ ಸುಳಿಯಲ್ಲಿ ಸಿಲುಕಿ ನಿನೊಡೆದರೆ
ನಶ್ವರವಾಗೋ ಉಸಿರು
ನಿನ್ನೊಡಲ ಒಡತಿ ನನ್ನದೆನ್ನುವುದನ್ನ ಮರೆಯದಿರು.
ಮಾಯದ ನಲಿವಿನ ಮಿಂಚಂತೆ
ಕಂಡೆ ನೀನು ಜಲಪಾತದ
ಬೋರ್ಗರೆವ ತೆರೆಯಲ್ಲಿನ ನೀರಿನ ಗುಳ್ಳೆಯಂತೆ..
ಅಲೆಯೋಳಗಿನ ಕಣ್ಣ ಮುಚ್ಚಾಲೆಯ
ನಿನ್ನ ಆಟವ ಕಂಡು ಮನಸೋತೆ
ನಿನ್ನೊಳಗೆ ಕೂತು ನಿನ್ನುಸಿರಾಗಿ
ನಿನ್ನ ಪರಿಧಿಯಲಿ ಸುಖವಾಗಿ ಕುಳಿತೆ
ನೀರಿನ ರಭಸಕ್ಕೆ ನುಸುಳಿ
ಕಲ್ಲಿನ ಸುಳಿಯಲ್ಲಿ ಸಿಲುಕಿ ನಿನೊಡೆದರೆ
ನಶ್ವರವಾಗೋ ಉಸಿರು
ನಿನ್ನೊಡಲ ಒಡತಿ ನನ್ನದೆನ್ನುವುದನ್ನ ಮರೆಯದಿರು.

all are good
ReplyDeleteAll 3 are good :)
ReplyDeleteಮಹಾಬಲರೇ....ಹಹಹ ಸೂಪರ್ ಚಿತ್ರಕ್ಕೆ ಎರ್ಡು ಸೂಪರ್ ಭಾವಮಿಡಿಯೋ ಕವನಗಳು,,,(ಕಡೆಯೆರಡು)...ಹಹಹ
ReplyDeletesuperbbb photo!
ReplyDeletesuperb lines! All 3 are excellent! liked Azad sir's poem the most!
Chanda iddu....
ReplyDeleteSupper ana.....Gundibaila eleya mareya hoovu ninu...enta kalpane....enta shabda sanyojane....awesome...
ReplyDelete