Thursday, June 9, 2011

ಅಂಕುರ

ಮೊದಲ ಮಳೆ ಬಿದ್ದಿದೆ
ಮಾನ್ಸೂನ್ ಆರಂಭವಾಗಿದೆಯಂತೆ
ಲೆಕ್ಕಾಚಾರದ ಮಾತಿನಲ್ಲಿ ಹೇಳುತ್ತಿದ್ದಾರೆ
ಹವಾಮಾನ ತಜ್ಞರು.

ಘಂ! ಎಂದು ಮಣ್ಣಿನ ವಾಸನೆ
ಗಾಳಿಗೆ ಹಾರಿದ ಬೀಜ ಮೊಳಕೆಯೊಡೆಯ ತೊಡಗಿದೆ
ಸತ್ತೇ ಹೋದ ಹುಲ್ಲು ಚಿಗುರತೊಡಗಿದೆ
ಬಾವಿಯ ನೀರು ಮೇಲೆ ಬರತೊಡಗಿದೆ

ಅಪ್ಪ ಮಡಿಸಿಟ್ಟ ಕೊಡೆಯನ್ನ ಬಿಚ್ಚಿ ನೋಡಿದ್ದಾನೆ
ಕಟ್ಟಿಗೆಮನೆಯಲ್ಲಿ ಸೋರುತ್ತಿದೆಯೋ ನೋಡಿ ಬಂದಿದ್ದಾನೆ
ನೀರ ಹರಿಯುವ ಕಾಲುವೆಯನ್ನ ಬಿಡಿಸಿಕೊಬೇಕೆಂದಿದ್ದಾನೆ
ಮಾಡಿನಿಂದ ಜಾರಿದ ನೀರು ಅಂಗಳಕ್ಕೆ ಬಿದ್ದು ರಾಡಿಯಾಗಿದೆ

ಪುಟ್ಟಕ್ಕನಿಗೆ ಈಗ ಬಾವಿಗೆ ಹೋಗಬೇಕಿಲ್ಲ
ಮಾಡಿನಿಂದ ಬಿದ್ದ ನೀರನ್ನೇ ಕೊಡದಲ್ಲಿ ಹಿಡಿದುಕೊಳ್ಳುತ್ತಾಳೆ
ಮಾಡಿಟ್ಟ ಉಪ್ಪಿನಕಾಯಿ ಹಪ್ಪಳವನ್ನ
ಬೆಚ್ಚಗೆ ಕಟ್ಟಿಡಬೇಕು ಇಲ್ಲ ಮಳೆಗೆ ಹಾಳಾದೀತು


ಬಿದ್ದ ಮಳೆ ಎಲ್ಲಾ ಕಾರ್ಯಗಳಿಗೆ ಆರಂಭ ಹಾಡಿದೆ
ಮನಸು ಲೆಕ್ಕಾಚಾರ ಹಾಕುತ್ತಿದೆ
ಕಳೆದದ್ದು ಎಷ್ಟನೇ ಮಳೆಗಾಲವೆಂದು
ಉಹೂಂ..!  ಲೆಕ್ಕ ಸಿಕ್ಕುತ್ತಿಲ್ಲ,
ಆದರೂ ಬಿದ್ದ ಮಳೆಗೆ ಅಂಕುರಗೊಳ್ಳುತ್ತದೆ ಹೊಸ ಆಸೆ

5 comments:

  1. ಚೆನ್ನಾಗಿದೆ....

    ReplyDelete
  2. maneya mundin kere tubide biddu misadbeku anta aasse.

    Mabla bhatre good kavana.

    ReplyDelete
  3. ಭಟ್ಟರೆ,
    ಮಳೆಗಾಲಕ್ಕೆ ಉತ್ತಮ ಸ್ವಾಗತವನ್ನು ನೀಡಿದ್ದೀರಿ!

    ReplyDelete