Tuesday, November 30, 2010

ಅರೆನಗ್ನ ಹುಡುಗಿಯರ ಯೋಗ ಸಾಧನೆ



ಯುಜ್ಯತೆ ಅನೇನ ಇತಿ ಯೋಗಃ - ಜೀವಾತ್ಮ ಮತ್ತು ಪರಮಾತ್ಮನನ್ನು ಬೆಸೆಯುವದೆ ಯೋಗ. ಯೋಗಃ ಚಿತ್ತವೃತ್ತಿ ನಿರೋಧಃ. ಅಂತ ಪತಂಜಲಿಗಳು ಹೇಳಿದ್ದಾರೆ. ಮನಃ ಪ್ರಶಮನೋಪಾಯಃ ಯೋಗಃ ಇತ್ಯಭಿಧೀಯತೆ ಅಂತ ಯೋಗ ವಾಶಿಷ್ಠದಲ್ಲಿ ಹೇಳಲಾಗಿದೆ. ಭಗವದ್ಗೀತೆಯಲ್ಲಿ ಯೋಗಃ ಕರ್ಮಸು ಕೌಶಲಂ ಅಂತ ಹೇಳಲಾಗಿದೆ. ಅಲ್ಲದೆ ಭಾರತದಲ್ಲಿ ಜನಿಸಿದ ಮಹಾ ಮಹಾ ಮುನಿಗಳೆಲ್ಲ ಯೋಗದ ಬಗ್ಗೆ ತಮ್ಮದೇ ಆದ ವ್ಯಾಖ್ಯಾನವನ್ನ ನಮಗೆ ಕರುಣಿಸಿದ್ದಾರೆ. ರಾಮಕೃಷ್ಣ ಪರಮಹಂಸರಾಧಿಯಾಗಿ ವಿವೇಕಾನಂದ, ಅರಬಿಂದೋ, ಮುಂತಾದವರು ಅದರ ಸಾರವನ್ನ ಜಗತ್ತಿಗೆ ಸಾರಿದ್ದಾರೆ. ಯೋಗವನ್ನ ಆರಂಭಿಸುವಾಗ ನಾವು "ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯಚ ವೈದ್ಯಕೇನ.ಯೋಪಾಕರೋತ್ತಂ ಪ್ರವರಂ ಮುನೀನಾಮ್ ಪತಂಜಲೀಂ ಪ್ರಾಂಜಲಿರಾನತ್ತೋಸ್ಮಿ." ಅಂತ ಪತಂಜಲಿ ಮುನಿಗಳನ್ನ ಈ ಶ್ಲೋಕದ ಮೂಲಕ ಸ್ಮರಿಸುತ್ತೇವೆ. ಸ್ಮರಿಸಿ ಯೋಗವನ್ನ ಆರಂಭಿಸುತ್ತೇವೆ. ಯಾವ ಶ್ಲೋಕವನ್ನಾಗಲಿ, ಅಥವಾ ಸೂತ್ರಗಳನ್ನಾಗಲೀ, ನಾವು ನೋಡಿದಾಗ ನಮಗೆ ಕಾಣಸಿಗುವದೇನೆಂದರೆ ಯೋಗದಿಂದ ಚಿತ್ತವು ಶುದ್ಧಿ ಯಾಗುತ್ತದೆ ಅನ್ನುವದು. ಯೋಗವು ದಿನದಿಂದ ದಿನಕ್ಕೆ ಜನಪ್ರೀಯತೆಯನ್ನ ಹೊಂದುತ್ತಿದೆ. ಜಗತ್ತಿನಾದ್ಯಂತ ತನ್ನ ಪ್ರಭಾವವನ್ನ ಬೀರುತ್ತಿದೆ. ಅದು ಉತ್ತಮವಾದ ಬೆಳವಣಿಗೆಯೇ ಸರಿ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವೊಂದು ಟಿ.ವಿ ಚಾನೆಲ್ ಗಳು ಹುಟ್ಟಿಕೊಂಡಿದೆ, ಕೆಲವು ಟಿ.ವಿ ಚಾನೆಲ್ ಗಳು ಇದಕ್ಕಾಗಿ ಬೆಳಗಿನ ಸಮಯವನ್ನ ಮೀಸಲಿಟ್ಟಿದೆ.ಹಾಗೆ ನಗರಗಳಲ್ಲಿ ಯೋಗ ಕಲಿಸುವ ಅನೇಕ ಸಂಸ್ಥೆಗಳು ಹುಟ್ಟಿಕೊಂಡಿವೆ. ನಮ್ಮಲ್ಲಿ ಅಧುನಿಕ ಋಷಿವರೇಣ್ಯರು ಅವತರಿಸುತ್ತಿದ್ದಾರೆ. ಯೋಗದ ಮಹತ್ವವನ್ನ ತಮ್ಮದೇ ಸ್ವತ್ತೆಂದು ಸಾರಿ ಅದರಿಂದ ಬಂದ ಭಾಷಣದ ದುಡ್ಡಲ್ಲೇ ಐಶಾರಾಮಿ ಕೆಲವು ಕುಟೀರಗಳನ್ನ ಕಟ್ಟಲಾಗಿದೆ. ಮಾರುಕಟ್ಟೆಯಲ್ಲಿ ಅನೇಕ ತರಹದ ನೋಡಿ ನಲಿ ಮಾಡಿ ಕಲಿ ಎಂಬಂತಹ ಸಾವಿರಾರು ಸಿಡಿ ಗಳು ಬಿಕರಿಯಾಗುತ್ತದೆ. ಅದರ ಗುಣಮಟ್ಟದ ಬಗ್ಗೆ ನಾವು ಯೋಚಿಸಬೇಕಾಗಿದೆ. ಅನೇಕ ಆನ್ಲೈನ್ ತರಗತಿಗಳು ಹುಟ್ಟಿಕೊಂಡಿವೆ. ಅಲ್ಲದೆ ನಿಜವಾಗಿ ಜ್ಞಾನಾರ್ಥಿಯಾಗಿ ಬಂದ ವದೇಶಿಯರಿಗೆ ಯೋಗದ ಹೆಸರಿನಲ್ಲಿ ಅವರನ್ನ ಲೈಂಗಿಕವಾಗಿ ಹಾದಿತಪ್ಪಿಸಲಾಗುತ್ತಿದೆ(?) ಅಲ್ಲದೆ ನಮ್ಮಲ್ಲಿ ಕೆಲವು ಸ್ವಾಮಿಗಳು ಲೈಂಗಿಕತೆಗೆ ಯೋಗ ಮಹತ್ವದ್ದು ಅಂತ ಬಿಂಬಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಯೋಗಕ್ಕೂ ಭೋಗಕ್ಕೂ ನಂಟು ಮಾಡುತ್ತಿದ್ದಾರೆ. ಅದರಲ್ಲಿ ನಮ್ಮ ಭಾರತೀಯ ನಾರೀಮಣಿಯರೇನು ಕಡಿಮೆಮಾಡಿಕೊಂಡಿಲ್ಲ .ಅವರು ಸಹ ಅಖಾಡಕ್ಕೆ ಇಳಿದಿದ್ದಾರೆ ಯೋಗಾಸನಕ್ಕಿಂತಲೂ ಹೆಚ್ಚಾಗಿ ತಮ್ಮ ಬಳುಕುವ ದೇಹವನ್ನ ಪ್ರದರ್ಶನಕ್ಕೆ ಇಟ್ಟಿದ್ದಾರೆ .ಹೀಗೆ ಸರ್ವಾಂಗ ಪ್ರದರ್ಶಕ-ಆಸನವನ್ನ ಮಾಡುತ್ತಿದ್ದವರನ್ನ ನೋಡುತ್ತಿದ್ದರೆ, ಪತಂಜಲಿ ಹೇಳಿದ ಯೋಗಃ ಚಿತ್ತವೃತ್ತಿ ನಿರೋಧಃ ಎಂಬ ಮಾತು ಅಸಹಜವಾಗಿ ಕಾಣಬಹುದು. ನೀವು ಒಮ್ಮೆ ಅಂತರ್ಜಾಲ ತಾಣದಲ್ಲಿ ಸುಮ್ಮನೆ ಯೋಗ ಅಂತ ಬರೆದರೆ ಸಾಕು ವಿದೇಶಿ ಸ್ವದೇಶಿ ಮಹಿಳೆಯರು ಅರೆನಗ್ನವಾಗಿ ವಿವಿದಾಸನದಲ್ಲಿ ಯೋಗ ಮಾಡುತ್ತಿರುವದನ್ನ ನೋಡಬಹುದು. ಯೋಗದ ಪ್ರಚಾರಕ್ಕೆ ಅಂಗ ಸೌಷ್ಟವ ಉಳ್ಳ ಹುಡುಗಿಯರನ್ನೇ ಬಳಸಿಕಳ್ಳುತ್ತಿರುವದನ್ನ ಕಾಣಬಹುದು. ಅರೆಬಿರಿದ ಮಂದಹಾಸದ ಜವ್ವನೆಯರು ಕೆಲವೇ ಕೆಲವು ತುಂಡು ಬಟ್ಟೆಗಳಲ್ಲಿ ಯೋಗಸಮಾಧಿಯನ್ನ ಸಾಧಿಸುತ್ತಿದ್ದಾರೆ. ಆದರೆ ಇಂದು ಯೋಗವು ಮೂಲ ಕಾರಣವನ್ನ ಬಿಟ್ಟು ನಮ್ಮ ಅಧುನಿಕ ಯುಗದ ಅವಶ್ಯಕತೆಗೆ ತಕ್ಕಹಾಗೆ ಬದಲಾಗುತ್ತಿದೆಯೇ? ಎಲ್ಲವೂ ಕಮರ್ಷಿಯಲ್ ಆಗಿ ಬದಲಾಗುತ್ತಿದೆಯೇ? ಯೋಗದಿಂದ ಭೋಗದ ಕಡೆಗೆ ಹೋಗುತ್ತಿದ್ದಾರೆ ಅನಿಸುತ್ತಿದೆ ಅಲ್ಲವೇ? ಹಾಗಂದ ಮಾತ್ರಕ್ಕೆ ನಮ್ಮಲ್ಲಿ ಉತ್ತಮವಾದ ಯೋಗವನ್ನ ನಿಸ್ವಾರ್ಥಿಗಳಾಗಿ ಹೇಳಿ ಕೊಡುವರೇ ಇಲ್ಲ ಅಂತ ನನ್ನ ಭಾವನೆ ಅಲ್ಲ. ಅಂತವರ ಸಂಖ್ಯೆ ಹೆಚ್ಚಿರುವದರಿಂದಲೇ ಯೋಗಕ್ಕೆ ಇನ್ನೂ ಮಹತ್ವ ಇರುವದು.







ಚಿತ್ರ ಅಂತರಜಾಲ ಹುಡುಕಾಸನ ಹಾಕಿದಾಗ ಸಿಕ್ಕಿದ್ದು

6 comments:

  1. ಮಹಾಬಲಗಿರಿ ಭಟ್ಟರೇ, ಕಾಗುಣಿತದ ತಪ್ಪುಗಳು ಢಾಳಾಗಿ ಎದ್ದು ಕಾಣುತ್ತವೆ, ಸರಿಪಡಿಸಿ, ಪ್ರಕಟಿಸುವ ಮುನ್ನ ಎರಡೆರಡು ಬಾರಿ ಓದಿ, ತಪ್ಪು ತಿದ್ದಿ ಪ್ರಕಟಿಸಿ. ಸ್ಲೋಕ ಅಂತಾಗಿದೆ, ಅಲ್ಪಪ್ರಾಣ-ಮಹಾಪ್ರಾಣಗಳ ತೊಂದರೆಯಿದೆ. ಮುಂದುವರಿಸಿ, ಶುಭಕೋರುತ್ತೇನೆ

    ReplyDelete
  2. ಭಟ್ಟ ಸರ್ ನೀವೆಂದಿದ್ದು ನನಗೆ ತಪ್ಪುತಿದ್ದಿಕೊಳ್ಳುವದಕ್ಕೆ ಮಾರ್ಗವಾಯಿತು. ಕ್ಷಮೆ ಇರಲಿ ತಪ್ಪು ಬರೆದದ್ದಕ್ಕೆ .ಇನ್ನು ಮುಂದೆ ತಪ್ಪಾಗದಂತೆ ತಿದ್ದಿಕೊಳ್ಳುತ್ತೇನೆ. ನಿಮ್ಮ ಮಾರ್ಗದರ್ಶನ ಸರ್ವತಾ ಇರಲೆಂದು ಆಶಿಸುತ್ತೇನೆ. ಹಾಗೆ ಕಾಗುಣಿತದಲ್ಲೊಂದೆ ಅಲ್ಲ ನನ್ನ ಬಾಲ ಬರಹಗಳು ಹಾದಿತಪ್ಪುತ್ತಿದ್ದರೂ ತಾವು ಎಚ್ಚರಿಸುತ್ತೀರೆಂದು ನಂಬಿದ್ದೇನೆ.

    ReplyDelete
  3. ಯೋಗ ಅನ್ನೂದ್ ಈಗ ಫ್ಯಾಶನ್ ಆಗಿದ್ದು. Marketing gimmickಗಳೇ ಜಾಸ್ತಿ

    ReplyDelete
  4. hm baraha nijavaada vishayada melindu... kannada typing alli kelavu doshagalive...

    ReplyDelete
  5. ಯೋಗಃ ಚಿತ್ತವೃತ್ತಿ ನಿರೋಧಃ || ಎಂಬ ಕೊನೆ ಪದಕ್ಕೂ ಬೇರೆ ಅರ್ಥ ಬಪ್ಪಾಂಗೆ ಮಾಡು ಛಾನ್ಸ ಇದ್ದೋ ತಮಾ !

    ReplyDelete
  6. ಆವ ವಿದ್ಯೆಯ ಕಲಿತಡೇನು ಶವ ವಿದ್ಯೆ ಮಾಣದನ್ನಕ?
    ಅಶನವ ತೊಡೆದಡೇನು? ವ್ಯಸನವ ಮರೆದೆಡೇನು?
    ಉಸಿರಗಿಡಿದರೇನು? ಬಸಿರ ಕಟ್ಟಿದರೇನು?
    ನೆಲದಳವಾರನಾದಡೆ ಕಳ್ಳನೆಲ್ಲಿ ಅಡಗುವ?

    ReplyDelete