Saturday, July 21, 2012

ಮಳೆ ಮುಗಿದ ಮೇಲೆ

ಮಳೆ ಮುಗಿದ ಮೇಲೆ 

ತಿಳಿಯಾಯ್ತು ಬಾನು ಮಳೆ ನಿಂತ ಮೇಲೆ
ಬೆಳಕಾಯ್ತು ಭೂಮಿ ತೆರೆ ಸರಿದ ಮೇಲೆ
ಹಗುರಾಗಿ ಮನವು ನಾ ಬರಿದಾದ ಹಾಗೆ
ಇಷ್ಟೆಲ್ಲಾ ಮಾತು  ನಿನ್ನಲ್ಲಿ ಬಿಚ್ಚಿಟ್ಟ ಮೇಲೆ

ಮಳೆ ನಿಂತ ಮೇಲೆ ಹನಿ ಉಳಿಯುವಂತೆ
ತಂಗಾಳಿ ಬೀಸಿ ಚಳಿ ಕಾಡುವಂತೆ
ನವಿರಾದ  ಕನಸು ನಾ  ಹೇಳಿದಂತೆ
ತಲೆ ತೂಗಿ  ನೀನು ತುಸು ನಾಚಿದಂತೆ

ಎಷ್ಟೆಲ್ಲಾ ಮಾತು ನಾ ಕೂಡಿಟ್ಟ ಒಲವು
ಮಳೆಯಂತೆ ಸುರಿದು ಕಾರ್ಮೋಡ ಸರಿದು
ಹೀಗೊಂದು ಕನಸು ನನಸಾದ ಹಾಗೆ
ಮಳೆ ಮುಗಿದ ಮೇಲೆ ಬೆಳಕಾದ ಹಾಗೆ

 
(ಚಿತ್ರ ಅಂತರ್ಜಾಲ ತಾಣದಿಂದ ಆಯ್ದದ್ದು )


Thursday, July 12, 2012

ಭಾವಾಭರಣ


ಭಾವಾಭರಣ
ಅಕ್ಕಸಾಲಿಗನ ಅಂಗಡಿಯಲ್ಲಿ ಆಭರಣಗಳು  ನಗುತ್ತವೆ
ಗಟ್ಟಿ ಚಿನ್ನ ಕರಗಿ ತಾಮ್ರದ ಜೊತೆ ಬೆರೆತು ಎರಕವಾಗಿ
ಕುಸರಿ ಕಲೆ ಹೊಳಪು ಥಳಥಳಿಸಿ ವಿಧ ವಿಧ  ರೂಪ ತಾಳಿ
ಕನ್ನಡಿಯ ಕಪಾಟಿನಲ್ಲಿ  ಕೂತು ತಮ್ಮಷ್ಟಕ್ಕೆ ತಾವೇ  ನಗುತ್ತವೆ
ಗಿರಾಕಿಗಳ ಮಾತಿಗೆ ಅಲ್ಲ ಅವರ ಹಾವ ಭಾವಕ್ಕೆ
ಕೊಟ್ಟು ಕೊಳ್ಳುವವನ ಮಧ್ಯದ ನಾಟಕಕ್ಕೆ

ಇದು ಶುದ್ಧ ಚಿನ್ನವೇ? ಹಾಗಾದರೆ ಬೆಲೆಯೆಷ್ಟು
ಇದರ ಅಳತೆಯೇನು? ಗ್ರಾಮಿನಲ್ಲಿ ಲೆಕ್ಕವೆಷ್ಟು
ಇದನ್ನ ನನ್ನವಳು ಒಪ್ಪಿಕೊಳ್ಳುತ್ತಾಳೋ ಇಲ್ಲವೋ
ಆದರೂ ಕೊಡಿ ಅವಳಿಗೆ ಬೇಡದಿದ್ದರೆ ಇನ್ನೊಬ್ಬಳಿಗೆ

ಮಗಳ ಮದುವೆ ಎಲ್ಲವನ್ನೂ ನೀವೇ ಮಾಡಿ ಕೊಡಬೇಕು
ಅಳಿಯನಿಗೆ ಉಂಗುರ ಚೈನು ಸಣ್ಣದೊಂದು ಬ್ರಾಸ್ ಲೆಟ್
ಮಗಳಿಗೆ ಕರಿಮಣಿ ಚಿನ್ನದಲ್ಲೇ ಕಟ್ಟಿಸಬೇಕು
ಚಿನ್ನದ ಮೂಗುತಿ ಡಾಲು ಸೊಂಟಪಟ್ಟಿ
ಕಿವಿಯೋಲೆ ವಜ್ರವನ್ನೂ ಒಳಗೊಂಡಿದ್ದರೆ ಚನ್ನ
ಇಷ್ಟು ಸಾಕು ಶಕ್ತಿ ಇಲ್ಲ ಸೋತು ಹೋಗಿಬಿಟ್ಟಿದ್ದೇನೆ
ಕಿರಿಯವಳಿಗೆ ಮಾಡಿಸಿದ್ದು ಇಷ್ಟು ಹೆಚ್ಚು

ಸ್ವಲ್ಪ ಹಳೆ ಚಿನ್ನ ಇದೆ ತೊಳೆಯುವದಕ್ಕೆ
ಮೊನ್ನೆ ಏನಾಯ್ತು ಅಂದ್ರೆ ... ಬೇಡ ಬಿಡಿ
ಅಕ್ಕಸಾಲಿಗರು ಅಕ್ಕನ ಮಕ್ಕಳ .....
ನೀವು ಹಾಗಲ್ಲ ನಂಬಿಕಸ್ತ ಶೆಟ್ಟರು
ಒಂದು ಒಳ್ಳೆ ಸರಮಾಡಿಕೊಡಿ ಚಂದದ್ದು
ನನಗೂ ಸೊಸೆಗೂ ಇಬ್ಬರಿಗೂ ಹೊಂದಬೇಕು

ಇದರ ಡಿಸೈನ್ ಹಳೆಯದು
ಹೊಸ ಡಿಸೈನ್  ಯಾವುದಿದೆ ನಿಮ್ಮಲ್ಲಿ
ಇದು ಬೇಡವೇ ಬೇಡ ಇದರಲ್ಲಿ ಕೆಂಪು ಹರಳಿದೆ
ಹಸಿರು ಹರಳು ಇದ್ದರೆ ಚನ್ನಾಗಿತ್ತು
ಇದು ಬೇಡ ಇದು ನನ್ನ ಮೂಗಿಗೆ  ಒಪ್ಪುವದಿಲ್ಲ
ಮುಂದಿನ ಸರತಿ ಬರ್ತೇನೆ ಈಗ ಯಾವುದು ಬೇಡ

ಎಷ್ಟೆಲ್ಲಾ ಮಾತುಗಳ ವಿನಿಮಯ
ಎಷ್ಟು ಭಾವಗಳ ಅನಾವರಣ
ಕೊಳ್ಳುವರಿಗೆ ಹಲವು ಅಭಿರುಚಿ
ಗಿರಾಕಿಗೆ ತಕ್ಕಂತೆ ಅಕ್ಕಸಾಲಿಗ ಬದಲಾಗುತ್ತಾನೆ
ಸ್ಪಂದಿಸಿದದಿದ್ದರೆ ಆಭರಣಗಳು  ಮಸುಕಾಗುತ್ತದೆ
ಆಭರಣಗಳು  ಕನ್ನಡಿಯ ಕಪಾಟಿನಲ್ಲೆ ಉಳಿದುಬಿಡುತ್ತದೆ 

Monday, July 9, 2012

ಮೇಟಿ ವಿದ್ಯೆಯೇ ಮೇಲು ಅಂದವರು ಯಾರು ?


ಅನ್ನದಾತನು ಭೂಮಿಯ ಹೂಳಿ ಬೆವರು ಹರಿಸಿಹನು
ಉತ್ತಿ ಬಿತ್ತಿ ಹದವ ಮಾಡಿ  ಮಳೆಗೆ ಕಾದಿಹನು
ಮಳೆಯು ಬಂದರೆ ಮಾತ್ರ ಹೊಟ್ಟೆಗೆ ಹಿಟ್ಟು ತಿನ್ನುವದು
ಇಲ್ಲದಿದ್ದರೆ ಕೊರಳ ಪಟ್ಟಿಗೆ ಹಗ್ಗ ಬೀಳುವದು

ಕೋಟಿ ವಿದ್ಯೆಗಳಲಿ ಮೇಟಿ ವಿದ್ಯೆಯೇ ಮೇಲು ಹೇಳಿದವನಾರು
ಹೇಳಿದವನಾ ತಲೆ ಸರಿ ಇದೆ ಅನ್ನಿಸುವದೇನು ?
ಟೆಕ್ಕಿಗಳು  ಕುಂತಲ್ಲೇ ಜಗವ ಆಳುತಿಹರಿಲ್ಲಿ
ರೈತ ವಿದ್ಯೆಗೆ ಸಿಗುವ ಗೌರವ ನಿಮಗೇ  ಗೊತ್ತಲ್ರಿ

ಹಸಿರು ಕ್ರಾಂತಿಯು ದೇಸಿ ತಳಿಗಳು ಪೇಪರುಗಳಲ್ಲಿ
ರೈತನ ಆಳುವವರು ಬೀಜ ಮಾರುವ ಕಂಪಯವರಿಲ್ಲಿ
ರೈತನ ಭೂಮಿ ಸರ್ಕಾರದವರು ಕೊಳ್ಳೆ ಹೊಡೆಯುತಿಹರಲ್ಲ
ಪ್ರತಿಭಟಿಸಲೇ ಬೇಕು ನಾವು ರೈತರ ಮಕ್ಕಳಹುದಲ್ಲ

ಕೃಷಿಕೋ  ನಾಸ್ತಿ ದುರ್ಭಿಕ್ಷಃ  ಎಂಬುದು ಶುಭಾಷಿತದಲ್ಲಿ
ಬರಗಾಲ ಭೂತ ಬೆಲೆಯ ಕುಸಿತ  ಕಾಡುತಿಹುದಿಲ್ಲಿ
ಅನ್ನದಾತೋ ಸುಖೀಭವ  ಎಂದು ಹರಸಿ ಸುಮ್ಮನಿರುವದಲ್ಲ
ಅನ್ನ ದಾತನ ಕೂಗಿಗೂ  ನಾವು ಕೈ ಜೋಡಿಸಬೇಕಲ್ಲ


ಚಿತ್ರ : ದಿಗ್ವಾಸ ಹೆಗ್ಡೆ

Monday, July 2, 2012

ಅತ್ತು ಬಿಡಬೇಕಾಗಿದೆ ನನಗೆ


 
ಅತ್ತು ಬಿಡಬೇಕಾಗಿದೆ ನನಗೆ
ಬರಿ ಬಿಕ್ಕಳಿಕೆಯಲ್ಲ
ಜೋರಾಗಿ ಅತ್ತುಬಿಡಬೇಕು
ಕಣ್ಣೀರು ಹಾಗೆ ಹರಿದು ಹರಿದು
ಒಳಗೆಲ್ಲ ಖಾಲಿಯಾಗಿಬಿಡಬೇಕು
ಘನ ದುಗುಡ ಕರಗಿ ನೀರಾಗಿ
ಹೊರಬಂದು ಹರಿದು ಬಿಡಬೇಕು
ಅತ್ತು ಅತ್ತು ನಾ ಬತ್ತಿ ಹೋಗಬೇಕು

ಉಹುಂ.,..
ಅಳಲಾಗುವದಿಲ್ಲ
ಎಲ್ಲಿಯೋ ಬಚ್ಚಿಟ್ಟ ಅಹಂಕಾರ ಬಿಡುವದಿಲ್ಲ
ಪ್ರತಿಷ್ಠೆ ಛಲ ಹುಂಬತನ
ಪ್ರತಿಸಲವು  ನನ್ನನ್ನ ಅಳಲು ಕೊಡುವದೇ ಇಲ್ಲ

ಗೊತ್ತು ನನಗೆ
ಅಳಲಾರದ ಮನುಷ್ಯ ಮನುಜನಾಗಿ ಬದುಕಲಾರ
ಆದರೂ  ಅಳಲಾಗುವದಿಲ್ಲ
ಜೋರಾಗಿ ಅತ್ತು ಅತ್ತು
ನನ್ನ ದುಗುಡವ ಹೊರಹಾಕಲಾಗುವದಿಲ್ಲ
ಒಳಗೆ ಬಚ್ಚಿಟ್ಟ  ಬೆಂಕಿಯು ಆರಿ
ಆರ್ಧತೆಯ ಭಾವನೆಯ ಹೊಂದಲಾಗುವದಿಲ್ಲ

ಅಳಬೇಕಾಗಿದೆ ನನಗೆ
ಬಿಟ್ಟುಬಿಡಿ ನನ್ನ
ಓ ಪ್ರತಿಷ್ಠೆಗಳೇ
ಅಹಂಕಾರಗಳೇ
ನನನ್ನ ಬಿಟ್ಟುಬಿಡಿ
ನಾನು ಭಾವಜೀವಿ
ನನಗೆ ಅಳಬೇಕಾಗಿದೆ
ಅತ್ತು ಅತ್ತು ಕರಗಬೇಕಾಗಿದೆ
ಕರಗಿ ಕರಗಿ ಹರಿಯಬೇಕಾಗಿದೆ ಮನುಷ್ಯತ್ವದೆಡೆಗೆ

Monday, June 25, 2012

ಹುಟ್ಟು ಸಾವಿನ ಮಧ್ಯೆ


ಹುಟ್ಟು ಸಾವಿನ ಮಧ್ಯೆ
ಹುಟ್ಟು ಸಾವಿನ ಮಧ್ಯೆ ಅದೆಷ್ಟು ಬದಲಾವಣೆಯು
ಹೂವ ಮೊಗ್ಗನು ನೋಡಿ ಇಲ್ಲಿ ತಿಳಿಯಬಹುದು
ದೇಹಕ್ಕೆ ಹೇಗೆ ಬಾಲ ಕೌಮಾರ್ಯ ವಾರ್ಧಿಕ್ಯ ಜರವು
ಮೊಗ್ಗಾಗಿ ಹೂವಾಗಿ ನಲಿದು ದಿನಕಳೆಯೇ ಸಾವು

ನಿನ್ನೆ ಇರಲಿಲ್ಲ ನಾಳೆ ತಿಳಿದವನೇ ಇಲ್ಲ
ಮಧ್ಯೆ ಬದುಕುವ ಜೀವ ಅದುಮಾತ್ರ ಬಲ್ಲ
ನಡುವೆ ಬದಲಾವಣೆಯು ನಿರಂತರ ನಿತ್ಯ
ಹುಟ್ಟುಸಾವಿನ ಮಧ್ಯೆ ಅದೆಷ್ಟು ವಿಚಿತ್ರ

ಬಿರಿದರಳಿ ಮಕರಂದ ಸೂಸುವದೆ ಗುರಿಯೊ
ಪ್ರಕೃತಿ ನಿಯಮವೇ ಹಾಗೆ ನಡೆಯುವದೆ ಹೀಗೊ
ಹೆತ್ತು ಹೊತ್ತು ಬೆಳೆದು ಅನುಭವಿಸಿ ಸಾಗುವದೆ ಜಗವೊ
ಮೂಲ ಆಶಯವೇನೋ ದ್ವಂದ್ವ ತಿಳಿಯುವದು ಹೇಗೊ ?
ಚಿತ್ರ ಕೃಪೆ
ಶ್ರೀವಿದ್ಯಾ.ಕೆ (http://www.facebook.com/shrividya.k.9)

Sunday, August 14, 2011

ಮುಂದೆ ಆ ದಿನ ಕೂಡ ಬರುತ್ತದೆ.....

ಗೆಳೆಯರೇ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ಧಿಕ ಶುಭಾಶಯಗಳು

ಗೆಳೆಯ ವಿನಯ ಭಟ್ ರವರು ಚಂದದ ಲೇಖನವನ್ನ ಕಳುಹಿಸಿಕೊಟ್ಟಿದ್ದಾರೆ. ವಿನಯ ಭಟ್ ಅವರು ಎಲೆಮರೆಯ ಪ್ರತಿಭೆ. ಬೆಂಗಳೂರಿನ ಪ್ರತಿಷ್ಠಿತ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಇದ್ದು. ಅನೇಕ ಕವಿತೆಗಳನ್ನ, ಕಥೆಗಳನ್ನ, ಲೇಖನವನ್ನ ಬರೆದಿದ್ದಾರೆ. ಸಾಹಿತ್ಯ, ಕಲೆ, ಸಂಗೀತದಲ್ಲಿ, ಸಮಾನ ಅಭಿರುಚಿ ಉಳ್ಳವರಾಗಿದ್ದಾರೆ. ಇದು ಅವರ ಕಿರು ಪರಿಚಯ. ಮುಂದೆ ಅವರು ಬರೆದಂತಹ ಅನೇಕ ಕವನ, ಲೇಖನ, ಕಥೆ ಮುಂತಾದ ಸಾಹಿತ್ಯ ಹೂರಣವನ್ನ ನಿಮ್ಮಮುಂದೆ ಕರಾವಳಿ ರೈಲಿನಲ್ಲಿ ಪ್ರಕಟಿಸಲಿದ್ದೇನೆ.


ಧನ್ಯವಾದಗಳು

ನಿಮ್ಮವ ಮಹಾಬಲಗಿರಿ ಭಟ್




ªÀÄÄAzÉ D ¢£À PÀÆqÀ §gÀÄvÉÛ......
PÀ©ü ªÉÇà ¢£ï D0iÉÄÃUÁ, d¨ï DgÀhiÁzï ºÀªÀiï ºÉÆÃAUÉ/ 0iÉÄà C¥À¤Ã » d«ÄÃ£ï ºÉÆÃUÁ C¥À£Á D¸ÀªÀiÁ£ï ºÉÆÃUÁ/ ±À»ÃzÉÆ PÉ avÁªÉÇà ¥Àgï ºÀgï §gÀ¸ï ®UÉÃAUÉ ªÉÄïÉ/ ªÀvÀ£ï ¥Àgï ªÀÄgÀ£ÉªÁ¯ÉÆAPÁ 0iÀĻà £ÁªÀiï ¤±Á£ï ºÉÆÃUÁ...
ªÀÄÄAzÉ D ¢£À PÀÆqÀ §gÀÄvÉÛ. £ÀªÀÄäzÉà DzÀ ¨sÀÆ«Ä, DPÁ±À EgÀÄvÉÛ, ºÀÄvÁvÀägÀ ¸ÀªÀiÁ¢ü0iÀÄ ªÉÄÃ¯É ¥Àæw ªÀgÀĵÀ eÁvÉæ £ÀqÉ0iÀÄÄvÉÛ. zÉñÀPÁÌV ¥ÁætvÁåUÀ ªÀiÁrzÀªÀjUÉ EzÉà ¸À£Áä£ÀªÁUÀ°zÉ. »ÃUÉAzÀÄ ¸ÁévÀAvÀæ÷åzÀ PÀ£À¸ÀÄ PÀnÖPÉÆAqÀÄ PÉÆ£É ¢£ÀUÀ¼À°è eÉʰ£À°è0iÉÄà PÀ«vÉ gÀa¹, £ÉÃtÄUÀA§ªÉÃjzÀÄÝ ¨sÀUÀvï¹AUï. vÁªÀÅ £ÉÃtÄUÀA§ªÉÃj MAzÀÄ ªÁgÀzÉÆ¼ÀUÉ zÉÆqÀØ PÁæAw0iÀiÁV zÉñÀPÉÌ ¸ÁévÀAvÀæ÷å zÉÆgÉ0iÀÄÄvÀÛzÉ. DUÀ £ÀªÀÄä zÉñÀªÁ¹UÀ¼ÀÄ £ÁªÀÅ ªÀiÁrzÀ vÁåUÀ §°zÁ£ÀUÀ¼À£ÀÄß £É£ÉzÀÄ ¥ÀæwªÀgÀĵÀ eÁvÉæ ¸ÀªÀiÁgÀA¨sÀUÀ¼À£ÀÄß ªÀiÁqÀÄvÁÛgÉ. £ÀªÀÄä vÁåUÀ §°zÁ£ÀPÉÌ CzÉà ¸À£Áä£À J£ÀÄߪÀÅzÀÄ ºÀÄvÁvÀä ¨sÀUÀvï ¹AUï CªÀgÀ C¤¹PÉ0iÀiÁVvÀÄÛ. DzÀgÉ FUÀ DUÀÄwÛgÀĪÀÅzÉãÀÄ?
¸ÀévÀAvÀæ ¨sÁgÀvÀzÀ £É®ªÁzÀ PÁ²äÃgÀzÀ°è wæªÀtð zsÀédªÀ£ÀÄß ºÁj¸À®Ä ºÉzÀgÀĪÀ, GUÀægÀÄ ClÖºÁ¸À £ÀqɸÀÄwÛzÀÝgÀÆ CzÀ£ÀÄß vÀqÉUÀlÖ¯ÁUÀzÀ, ¸ÉgɹPÀÌ GUÀægÀ£ÀÄß UÀ°èUÉÃj¸À¯ÁUÀzÀ ¨sÀæµÀÖ ªÀåªÀ¸ÉÜ, £ÀÆgÁgÀÄ ºÀUÀgÀtUÀ¼ÀÄ EªÉà PÀtÂÚUÉ gÁZÀÄwÛgÀĪÀÅzÀÄ. ªÀåªÀ¸ÉÜ UÀ¨ÉâzÀÄÝ ºÉÆÃVzÀÝgÀÆ CzÀ£ÀÄß £ÉÆÃr0iÀÄÆ vÀªÀÄäzÀ®èªÀAvÉ ªÀwð¸ÀÄwÛgÀĪÀ ¥ÀæeÁvÀAvÀæ ªÀåªÀ¸ÉÜ. EzÉAvÀºÀ «¥À0iÀiÁð¸À ! UÁA¢üÃf, ¸ÀĨsÁ¸ï, gÁdUÀÄgÀÄ, ¸ÀÄRzÉêï, ¯Á¯ï, ¨Á¯ï, ¥Á¯ï ªÀÄÄAvÁzÀ zÉñÀ¨sÀPÀÛgÀ gÀPÀÛ ºÀj0iÀÄÄwÛgÀĪÀ £ÀªÀÄä zÉúÀzÀ°è eÁqÀåvÉ0iÀÄ «µÀ ¨ÉgÉwzÁÝzÀgÀÆ ºÉÃUÉ? ¸ÀvÀå ºÀj±ÀÑAzÀæ, gÁªÀÄ, PÀȵÀÚ, zsÀªÀÄðgÁAiÀÄ EAvÀºÀ ªÀĺÁ£ï ªÀåQÛUÀ¼À vÁwéPÀ ªÀiË®åUÀ¼À ªÉÄÃ¯É ¤AvÀ £ÀªÀÄä ¸ÀA¸ÁÌgÀ PÀ®Ä¶vÀUÉÆAqÀzÁÝzÀgÀÆ ºÉÃUÉ?..... EAvÀºÀ ¥Àæ±ÉßUÀ¼ÀÄ ¸ÀºÀdªÁV ªÀÄÆqÀÄvÀÛzÉ.
EzÀPÉÌ PÁgÀtªÀ£ÀÄß ºÀÄqÀÄPÀÄvÀÛ ¸ÁVzÀgÉ £ÀªÀÄUÉ PÁt¸ÀĪÀ ¸ÁªÀiÁ£Àå ¸ÀAUÀw0iÉÄAzÀgÉ  £ÀªÀÄä gÁdQÃ0iÀÄ ªÀÄÄRAqÀgÀ C¢üPÁgÀ ¯Á®¸É. EzÀPÁÌV Erà zÉñÀªÀ£Éßà czÀæUÉÆ½¸ÀºÉÆgÀnzÁÝgÉ. eÁw, ªÀÄvÀ, ¨sÁµÉ0iÀÄ DzsÁgÀzÀ ªÉÄÃ¯É ªÉÇÃmï¨ÁåAPï gÁdQÃ0iÀÄ ªÀiÁr vÀªÀÄä zÀÄgÁ¸É0iÀÄ£ÀÄß FqÉÃj¹PÉÆ¼ÀÄîwÛzÁÝgÉ. zÉñÀ¥ÉæÃªÀĪÀ£ÀÄß gÀPÀÛzÀ PÀtPÀtzÀ®Æè ¸ÀÄàj¸ÀĪÀ gÁµÀÖç¨sÀPÀÛgÀ£ÀÄß zÉñÀzÉÆæÃ»UÀ¼ÁV ©A©¸ÀÄwÛzÁÝgÉ. zÉñÀzÀ ªÀÄÄUÀÝ d£ÀgÀ£ÀÄß ºÀvÉåUÉÊzÀ £ÀgÀ¦¥Á¸ÀÄ GUÀægÀ£ÀÄß ¸ÉgɪÀÄ£É0iÀÄ°è ¥ÀAZÀvÁgÁ ¸Ë®¨sÀå¢AzÀ £ÉÆÃrPÉÆ¼ÀÄîwÛzÁÝgÉ. EªÉ®èªÀÇ ªÉÇÃnUÁV..
F zÉñÀzÀ £É®, d®zÀ §UÉÎ QAavÀÆÛ C©üªÀiÁ£À«®èzÀ ªÀåQÛUÀ¼ÀÄ zÉñÀzÀ ¤0iÀÄAvÀæPÀgÁVzÁÝgÉ. ªÀÄ£É0iÀÄ ªÀÄÄA¢£À VqÀPÉÌ ¤ÃgÀÄ ºÁPÀzÀ ªÀåQÛ ¨ÉÃgÉ0iÀĪÀgÀ ºÉÆ®zÀ°è ªÀÄtÚ£ÀÄß ºÉÆgÀÄwÛzÁÝgÉ. ¸Éß»vÀgÉà F zÉñÀzÀ §UÉÎ £ÉÊd PÁ¼Àf0iÀÄ£ÀÄß  £ÁªÀÅ ¨É¼É¹PÉÆAqÀÄ, EAvÀºÀ ¸ÉÆÃUÀ¯ÁrvÀ£ÀzÀ gÁdPÁgÀtÂUÀ¼À£ÀÄß £ÀªÀÄä ªÀåªÀ¸ÉܬÄAzÀ  zÀÆgÀUÉÆ½¹ ¸ÀéZÀÒ ¸ÀÄAzÀgÀ ¨sÁgÀvÀªÀ£ÀÄß ¤«Äð¸À¨ÉÃPÁVzÉ. EzÀPÉÌ ºÉÆÃgÁqÀÄwÛgÀĪÀ CuÁÚ ºÀeÁgÉAiÀĪÀgÀAvÀºÀ zÉñÀ¨sÀPÀÛjUÉ £ÀªÀÄä ¨ÉA§®ªÀ£ÀÄß ¤Ãr ¨sÀæµÀÖgÀ£ÀÄß zÀªÀÄ£À ªÀiÁqÀ¨ÉÃPÁVzÉ.
ºËzÀÄ.. EzÀgÀ eÉÆvÉUÉ ¨sÁgÀvÀzÀ ¨sÀ«µÀåªÁzÀ £Á£ÉƧ⠧zÀ¯ÁUÀÄvÉÛãÉ. ¸ÁzsÀåªÁzÀgÉ, M§â£À£ÀÄß §zÀ¯Á¬Ä¸ÀÄvÉÛãÉA§ ¥ÀæweÉÕ0iÀÄ£ÀÄß £ÁªÉ®ègÀÆ vÉUÉzÀÄPÉÆAqÀgÉ..... ¥Àæw0iÉÆ§â ¨sÁgÀwÃAiÀÄ vÁ0iÀÄA¢gÀÄ vÀ£Àß ªÀÄUÀĪÀ£ÀÄß ²ªÁf, UÀÄgÀÄUÉÆÃ«AzÀ¹AUï, gÁuÁ¥ÀævÁ¥ï, «Ãgï ¸ÁªÀPÀðgï, «PÀæA ¨sÁvÁæ, ¸ÀA¢Ã¥ï G¤ßPÀñµÀÚ£ï, ºÉêÀÄAvï PÀPÀðgÉ CªÀgÀAxÀ «ÃgÀ PÀ°UÀ¼ÁV ¨É¼É¹zÀgÉ.....  ¸ÀªÀð¸ÀévÀAvÀæ; eÁÕ£À, ¸ÀA¸ÀÌöÈw, DyðPÀvÉ, ªÉÊeÁÕ¤PÀvÉ, »ÃUÉ J®è PÉëÃvÀæUÀ¼À°è ¥ÀæPÁ²¸ÀĪÀAvÀ ¨sÁgÀvÀzÀ GzÀ0iÀĪÁUÀ®Ä ¸ÁzsÀå...
ªÉÇà ¢£ï D0iÉÄUÁ.....   G¸ï ¢£ï ªÉÄÃgÁ ¨sÁgÀvï ªÀĺÁ£ï ºÉÆÃUÁ .....
JA§ ¸ÀzÁ±À0iÀÄzÉÆA¢UÉ.....
ವಿನಯ ಭಟ್



Tuesday, July 26, 2011

ನಡೆಯುತಿದೆ ಕನಕಾಭಿಷೇಕ




ಪರಾಂಜಪೆ  ಸರ್ ರವರು ಪ್ರೀತಿಯಿಂದ ಕೆಳಗಿನ  ಕವನವನ್ನ ಬರೆದು ಕೊಟ್ಟಿದ್ದಾರೆ 

-----------   ಹೇಮಜ್ಯೋತಿ ಚೆಲ್ಲಿದೆ  ---------------

ನೊರೆಯುಕ್ಕಿ ಮೈಮರೆತು ಮೊರೆಯುತಿಹಳು ವಾರಿಧಿ
ನಿಶಾಲೋಕದತ್ತ ಹೊರಟ ಮನೋರಥದ ಸಾರಥಿ
ಬಾನುಭುವಿಯ ಸಾ೦ಗತ್ಯಕೆ ಕಳಸವಿಟ್ಟ ಕು೦ದಣ
ರವಿಯ ಹೊನ್ನಬಣ್ಣದಲ್ಲಿ ಲಕಳಕಿಸುತಿದೆ ಬಾ೦ದಳ

ಹಿತವಾಗಿಹ ಸಂಜೆ ಬಿಸಿಲು ನೀಡಿದೆ ಮುದ ಮನಕೆ
ಮಿ೦ದು ನೆ೦ದು ಜಳಕವಾಡಿ ಹಗುರವಾಗೋ ಬಯಕೆ
ನೇಸರನು ನೇಪಥ್ಯಕ್ಕೆ ಸರಿವ ಗಳಿಗೆ ಬ೦ದಿದೆ
ದಿವಸ್ಪತಿಯ ದಿವ್ಯಪಥದಲಿ ಹೇಮಜ್ಯೋತಿ ಚೆಲ್ಲಿದೆ

ಪರಾಂಜಪೆ ಕೆ.ಏನ್
(ಚಿತ್ರದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ನೋಡಬಹುದು)