Friday, July 2, 2010

ನಿದ್ರಾ ದೇವಿ ನಮೋಸ್ತುತೇನಿದ್ರೆಗೂ ಬಸ್ಸಿಗೂ ಏನು ಸಂಬಂಧವೋ ಆ ದೇವರೇ ಬಲ್ಲ! ಬಸ್ಸಿನ ಆ ಆಸನವೂ, ಅದರ ಆ ಮಧುರ ದ್ವನಿಯೂ, ಅದು ಚಲಿಸುವ ನಿಧಾನವೂ, ನಿದ್ರೆಗೆ ವಾಹಕವೇ? ಹೌದೆನ್ನುತ್ತದೆ ನನ್ನ ಮನ. ಮನೆಯಲ್ಲಿ ದಪ್ಪನೆಯ ಹಾಸಿಗೆಯ ಮೇಲೆ ಬಾರದ ನಿದ್ರೆ ಬಸ್ಸಿನ ಆಸನದ ಮೇಲೆ ಕುಳಿತುಕೊಂಡ ಕೂಡಲೆ ಅದೆಲ್ಲಿಂದ ವಕ್ಕರಿಸುವದೋ ನಾನು ತಿಳಿಯೆ. ಅಂತಹ ನಿದ್ರೆ ಒಂದೊಂದು ದಿನ ಕಿರಿ ಕಿರಿ ಅಗುವದೂ ಉಂಟು. ಒಲಿದು ಸಂತಸ ಈಯುವ ದಿನಗಳೂ ಉಂಟು. ಅಲ್ಲದೆ ಮತ್ತೇನು? ಮಡದಿಯು ನಾಲ್ಕು ಘಂಟೆಗೆ ಹಾಡುವ ಸುಪ್ರಭಾತವು ನನ್ನ ಅಲ್ಪಾವಧಿ ನಿದ್ರೆಗೂ ಕತ್ತರಿ ಹಕಿದಂತೆ. ಮಹಾಸಿಡುಕಿ ನನ್ನವಳ ಆ ಸುಪ್ರಭಾತಕ್ಕೆ ಎದ್ದನೇ ಸರಿ ಇಲ್ಲದಿದ್ದರೆ ಅಡುಗೆಮನೆಯ ಪಾತ್ರೆಗಳೆಲ್ಲವು ತನ್ನ ಮೂಲ ಆಕಾರವನ್ನ ಕಳೆದುಕೊಂಡು, ಆ ಪಾತ್ರೆಯ ಕರ್ಕಶ ಧ್ವನಿಯು ಇಡೀ ವಾತವರಣವನ್ನ ವ್ಯಾಪಿಸೀತು.ಉಸ್ಸಪ್ಪಾ ಎಂದು ಹಾಸಿಗೆಯಿಂದ ಎದ್ದರೆ,ಇನ್ನು ಹಸೆ ನೋಡುವದು ರಾತ್ರಿ ಹನ್ನೊಂದುವರೆಗೇ ಸರಿ. ಹೀಗೆ ನಿದ್ರಾ ವಿರಹದಲ್ಲಿ ನನ್ನವಳ ಮನೆ ಕೆಲಸದಲ್ಲಿ ನೆರವಾಗುವದು ನಿತ್ಯ ಕಾಯಕ. ಇನ್ನು ಸರಿಯಾಗಿ ಎಂಟುಘಂಟೆಗೆ ಆಫೀಸಿಗೆ ಹೊರೆಟೆನೆಂದರೆ ಅಡುಗೆ ಮನೆಯಿಂದಲೇ ನನ್ನವಳ ಬೀಳ್ಕೊಡುಗೆಯ ಮಾತು, ,,, ಅವಳು ಅಲ್ಲಿಂದಲೇ ಕೂಗಿ ಹೇಳುವ ಅಂದಿನ ದಿನಸಿ ಪಟ್ಟಿಯೇ ನನಗವಳಾಶುಭ ಹಾರೈಕೆ . "ರೀ ಇಂದು ತರಕಾರಿ ಮರಿಬೇಡಿ " ಯೆಂಬ ಇನಿಯಳ ಕೊನೆಯ ಮಾತನ್ನ ಶಿರಸಾ ವಹಿಸಿ ಆಫೀಸಿಗೆ ಹೊರಡುತ್ತೇನೆ.ಬಸ್ ಸ್ಟಾಂಡಿನಲ್ಲಿ ನನಗಾಗಿಯೇ ಕಾದಿರುವಂತೆ ಇನ್ನೇನು ಹೊರಡಲಿರುವ ಬಸ್ಸು ... ಬಸ್ಸನ್ನ ಹತ್ತಿ ಕೂತನೆಂದರೆ ಸಾಕು, ಅದೇನು ಅಲೌಕಿಕ ಆನಂದವೋ ? ಅಂತಹ ಆನಂದವೂ, ಬಸ್ಸಿನ ಇಂಪಾದ ಧ್ವನಿಯೂ, ಕಿಟಕಿಯಿಂದ ತೂರಿಬರುವತಂಗಾಳಿಯೂ, ಮಿಲಿತವಾಗಿ ನನ್ನನ್ನ ನಿದ್ರೆಗೆ ಶರಣುಮಾಡುತ್ತದೆ. ಕಂಡಾಕ್ಟರ್ ಬಂದು ಮೈಮ್ಮುಟ್ಟಿ ಎಬ್ಬಿಸಿ "ಎಲ್ಲಿಗೆ ಸ್ವಾಮೀ " ಎಂದಾಗಲೇ ಕಣ್ಣುಬಿಟ್ಟು ತಡಕಾಡುವದು, .........ತೂ..... ವಾಚಾಳಿ ಕಂಡಾಕ್ಟರ್....... ನಿದ್ರಾಒಡೆಯ ನನಗೂ, ನಿದ್ರೆಗೂ ಬೈಯುತ್ತಾ ಟಿಕೇಟನ್ನ ಕೊಟ್ಟದ್ದನ್ನ ನೋಡಿ ಜನ ಗುಳ್ಳೆಂದು ನಕ್ಕ ಶಬ್ಧಕ್ಕೆ ನಾನು ಬೆಸ್ತುಬೀಳಬೇಕಯಿತು,ಮಾರನೆಯ ದಿನ ಹಿಂದಿನ ದಿನದ ಕಹಿ ನೆನಪಲ್ಲಿಯೇ ಬಸ್ಸು ಹತ್ತಿ ವಿರಾಜಮಾನಾದೆ. ಆದರೆ ಇಂದು ನನ್ನ ನಿದ್ರೆಗೆ ಮದ್ಯದಲ್ಲಿ ಭಂಗ ಬರಕೂಡದೆಂದು ಯೋಚಿಸಿ ಟಿಕೇಟ್ ಆದ ಮೇಲೆಯೇ ನಿದ್ರೆಗೆ ಜಾರಿದೆ. "ಸ್ವಾಮೀ ಲಾಸ್ಟ್ ಸ್ಟಾಫ್ ಇನ್ನೂ ನಿದ್ರೆ ಮಾಡ್ತಾ ಇದ್ದೀರಲ್ರೀ " ಎಂದು ಹೇಳಿದಗಲೇ ಎಚ್ಚರವಾದದ್ದು. ಇಳಿಯುವ ಜಾಗಕ್ಕಿಂತ ಹತ್ತು ಕಿಲೊಮೀಟರ್ ಮುಂದೆ ಬಂದುಬಿಟ್ಟಿದ್ದೇನೆಂದು ತಿಳಿದಾಗಲೇ ನಾನು ಬೆಸ್ತು.ಹಾಗೆ ಇನ್ನುಮುಂದೆ ಬಸ್ಸಿನಲ್ಲಿ ನಿದ್ರೆನೇ ಮಾಡಬಾರದೆಂಬ ಧ್ಯೆಯವನ್ನ ಹೊತ್ತು ಮರುದಿನ ಬಸ್ಸು ಹತ್ತಿದೆ. ಆದರೆ ಆ ಸುಕೋಮಲವಾದ ನಿದ್ರೆಯನ್ನೆಸ್ಟು ಹೊತ್ತು ನನ್ನ ಕಣ್ಣು ಗುಡ್ಡೆ ಗಳ ಹಿಂದೆ ಬಚ್ಚಿಡಲಿ ? ನನ್ನನ್ನ ಯಾವಾಗ ನಿದ್ರಾ ದೇವಿ ಅವರಿಸಿದಳೊ ನಾನೇ ತಿಳಿಯೆ. ಘಾಡವಾದ ನಿದ್ರೆ ಆವರಿಸಿಯೇ ಬಿಟ್ಟಿತು. ಆದರೆ ಆದಿನದ ಕಂಡಾಕ್ಟರ್ ನಿದ್ರಾ ವಿರೋಧಿ ಆಗಿರಲಿಲ್ಲ. ನಿಶ್ಚಿಂತೆಯಿಂದ ನಿದ್ರಿಸುತ್ತಿರುವ ನನ್ನನ್ನ ಕಂಡು ಪಾಸಿನವನಿರಬೇಕೆಂದು ತರ್ಕಿಸಿದ. ನಿದ್ರೆಗೆ ಶರಣಾದ ನನ್ನನ್ನ ಎಬ್ಬಿಸಿದ ಚಕಿಂಗ್ ಆಫಿಸರ್‍್ "ಸ್ವಾಮೀ ನಿಮ್ಮ ಟಿಕೆಟ್ ತೋರಿಸಿ "ಎಂದಾಗಲೆ ಎಚ್ಚರವಾದದ್ದು. ಟಿಕೆಟ್ ರಹಿತ ಪ್ರಯಾಣಕ್ಕೆ ನಿದ್ರೆಯ ಕಾರಣ ಕೊಟ್ಟರೂ 150 ರೂಪಾಯಿ ದಂಡ ಕಟ್ಟಬೇಕೆನ್ನುವದನ್ನ ಕೇಳಿ ನಾನು ಸುಸ್ತಾಗಿ ಪೆಚ್ಚು ಮೋರೆ ಮಾಡಬೇಕಾಯಿತು.ಚಕಿಂಗ್ ಆಫೀಸರ್ ಕಂಡಾಕ್ಟರನಿಗೆ ಬೇಜವಾಬ್ದರಿಯ ಕಾರಣ ದಂಡ ಹಾಕಿದ್ದೂ,ಅವನು ನನಗೆ ಉಗಿದದ್ದು ಆ ನಿದ್ರಾದೇವಿಯ ಕೄಪಾ ಕಟಾಕ್ಷದಿಂದಲೇ ಅಲ್ಲವೇ ?ಇಸ್ಟೆಲ್ಲಾ ಅವಾಂತರ ಆದರೂ ಬಸ್ಸು ಹತ್ತಿದ ಮೇಲೆ ಯಾವಗಲೂ ನನ್ನನ್ನ ತನ್ನೆಡೆಗೆ ಸೆಳೆದು ನಿದ್ರೆಯೆಂಬ ಸುಮಧುರ ಜೇನನ್ನ ಹನಿ ಹನಿಯಾಗಿ ಉಣಿಸುವ ನಿದ್ರಾದೇವಿಗೊಂದು ಉದ್ದಂಡ ನಮಸ್ಕಾರವಿರಲಿ.


No comments:

Post a Comment