Wednesday, July 7, 2010

ಹುಲಿಯಪ್ಪನ ಕಟ್ಟೆ

ದೊಂದು ರಾತ್ರಿ ಅದ್ಯಾಕೋ ನೆನಪಾಯಿತು ಅಪ್ಪ ಹೇಳಿದ ಕಥೆ . ಸಣ್ಣಗೆ ಸುರಿಯುವ ಮಳೆ, ನಿಧಾನ ಬೀಸುವ ಗಾಳಿ, ಸುಮಾರುಹತ್ತುವರೆ ಘಂಟೆ ರಾತ್ರಿ ಇರಬಹುದು, ಹುಲಿಯಪ್ಪನ ಕಟ್ಟೆಯ ಬಸ್ ಸ್ಟ್ಯಾಂಡಿನಲ್ಲಿ ಒಬ್ಬನೇನಿಂತಿದ್ದೆ. ಬೆಂಗಳೂರಿಗೆ ಹೋರಡುವಬಸ್ಸು ಇನ್ನೇನು ಕೆಲವು ನಿಮಿಷಗಳಲ್ಲಿ ಬರಬೇಕು, ಮಳೆಗಾಲದ ಆರಂಭದ ರಾತ್ರಿಯಗಳಲ್ಲಿ ಎಂತಹುದೋ ಮೌನ ವಿರುತ್ತದೆ. ಬೇಸಿಗೆಯ ಬಿಸಿಲಿಗೆ ಒಣಗಿದ ಭೂಮಿ, ತೇವವನ್ನ ತನ್ನ ಒಡಲಲ್ಲಿ ಹೀರಿಕೊಂಡು ಹಸಿರಾಗುವ ಕಾಲ. ರಾತ್ರಿಯ ಸಮಯದಲ್ಲಿ ಕಿರ್ ರ್ಎಂಬ ಶಬ್ಧ ಮೊರೆಯುತ್ತಿತ್ತು.. ಉಹೂಂ.. ಅದೇನು ಕೇಳದೇ ಇರುವ ಶಬ್ಧವಲ್ಲ. ಅದು ಮಳೆಗಾಲದ ಆರಂಭದಲ್ಲಿ ಕೂಗುವ ಮಳೆಜಿರಲೆ. ಲೈಟಿನ ಕಂಬದ ಸುತ್ತಲೂ ಪೈಪೋಟೀಯಲ್ಲಿ ಹಾರುತ್ತಿರುವ ರೆಕ್ಕೆ ಬಂದ ಗೆದ್ದಲು, ನೀರವ ಮೌನ.ಎಲ್ಲಿಂದಲೋ ಕೇಳುವ ಗಟ್ಟಹತ್ತುವ ಬಸ್ಸಿನ ದ್ವನಿ. .

ಅದು ಊರ ಹೊರಗಿನ ಗುಡ್ಡ. ದೊಡ್ಡದಾದ ರಸ್ತೆಯು ಗುಡ್ಡವನ್ನ ಮಧ್ಯದಲ್ಲಿ ಚೇದಿಸುತ್ತದೆ. ಎಷ್ಟೊವರ್ಷಗಳಿಂದ ಗುಡ್ಡದಮೇಲೊಂದು ಹುಲಿಯ ಪ್ರತಿಮೆ ಇದೆ. ಅದಕ್ಕೆ ಎತ್ತರ ಕಟ್ಟೆಯಮೇಲೆ ಒಂದು ಗೂಡನ್ನೂ ಕಟ್ಟಲಾಗಿದೆ. ಹುಲಿಯ ಕಟ್ಟೆಯದೆಸೆಯಿಂದಲೇ ಸ್ಥಳಕ್ಕೆ ಹುಲಿಯಪ್ಪನ ಕಟ್ಟೆಯೆಂಬ ಹೆಸರು ಬಂದಿದೆ. ನಾನು ಚಿಕ್ಕವನಾಗಿರುವಾಗಿಂದ ನೋಡಿದ್ದು, ಅಲ್ಲಿಯಬರಿಯ ಹುಲಿಯ ಗೂಡುನ್ನು ಮತ್ರ . ಆಗ ಅಲ್ಲಿ ಲೈಟು,ಅಂಗಡಿ, ಏನೂ ಇರಲಿಲ್ಲ. ಕರೆಂಟು ಕಂಬವಿತ್ತಾದರು ಲೈಟುಗಳಿರಲಿಲ್ಲ.ಆದರೆಈಗ ಅಲ್ಲಿ ದಾರಿಯ ಅಂಚಿನಿಂದ ಕೇರಿಯ ತನಕವೂ ಲೈಟು ಕಂಬಗಳಿವೆ .ದೇವಸ್ಥಾನಕ್ಕೆ ಬರುವ ಭಕ್ತರನ್ನ ಗುರಿಯಾಗಿಸಿ ಈಗ ಅಲ್ಲಿಒಂದಲ್ಲ ಮೂರು ಅಂಗಡಿಗಳು ತಲೆಯೆತ್ತಿ ನಿಂತಿವೆ,ಮಳೆಗಾಲವಾದ್ದರಿಂದ ವಾತಾವರಣ ತುಂಬಾ ನೀರವವಾಗಿತ್ತು, ಜನರಓಡಾಟಾವಿರಲಿಅಲ್ಲ, ಜನರಿಗಾದರು ಮಳೆಗಲದಲ್ಲಿ ರಾತ್ರಿ ಹತ್ತುವರೆ ಘಂಟೆಯ ಮೇಲೆ ಏನು ಕೆಲಸವಿರುತ್ತದೆ?.ಅಂಗಡಿಗಳೆಲ್ಲವನ್ನಎಂಟುಘಂಟೆಗೇ ಮುಚ್ಚಿಯಾಗಿತ್ತು , ಸುಂಯ್ ಎಂಬ ಮುಂಗಾರು ಗಾಳಿ ನಿಧಾನಕ್ಕೆ ಬೀಸುತ್ತಲಿತ್ತು. ಅಂಗಡಿಯ ಸೂರಿನಲ್ಲಿನಿಂತನಾನು ಲೈಟು ಕಂಬದ ಬೆಳಕಿನ ಕಡೆಗೆ ಬಂದು ನಿಂತೆ.ಬಗ್ಗಿ ಒಂಮ್ಮೆ ಕಾಲುಗಳನ್ನ ನೋಡಿ ಕೊಂಡೆ.ಮಳೇಗಾಲದಕೆಸರುಗಳೇನಾದರು ಕಾಲುಗಳಿಗೆ ಮೆತ್ತಿಕೊಂಡಿದೆಯೋ ಎಂದು.ನೆನಪಿನ ಸುರಳಿ ಅಪ್ಪನ ಕಥೆಯತ್ತ ವಾಲಿತು. ಹುಲಿಯಪ್ಪನ ಕಟ್ಟೆಎಂದರೆ ಅದು ದೆವ್ವದ ವಾಸಸ್ಥಾನವಾಗಿತ್ತಂತೆ. ತಲೆತಲಾಂತರದಿಂದಲೂ ಅಲ್ಲಿ ಒಮ್ಮಲತಿ ಎಂಬ ದೆವ್ವ ವಾಸವಿದೆಯಂತೆ.

ಒಮ್ಮಲತಿ ಎಂದರೆ, ಹೇಗೆ ಒಂದೇ ಕಣ್ಣಿದ್ದವನು, ಒಕ್ಕಣ್ಣನಾಗುತ್ತಾನೋ,, ಹಾಗೆ ಒಂದೇ ದೊಡ್ಡದಾದ ಮೊಲೆಯನ್ನ ಹೊಂದಿದವಳಿಗೆ ಒಮ್ಮಲತಿಯಂತ ಹೆಸರು, ಆವಳು ರತ್ರಿ ಚರಳು. ರಾತ್ರಿಯಲ್ಲಿ ಬರುವ ಜನರನ್ನ ಅಡ್ದಗಟ್ಟುತ್ತಿದ್ದಳಂತೆ, ಕಾಲದಲ್ಲಿ ಈಗಿನಂತೆವಿಶಾಲ ದಾಂಬರು ರಸ್ತೆ ಇರಲಿಲ್ಲ. ಅದು ಎತ್ತಿನ ಗಾಡಿಗಳು ಓಡಾಡುವ ಕಿರು ದಾರಿ ಯಾಗಿತ್ತು, ದಾರಿಯಲ್ಲಿ ಬರುವ ಜನರನ್ನಮಾತನಾಡಿಸಿ ಕವಳವನ್ನ(ತಾಂಬೂಲ) ಕೇಳುತ್ತಿತ್ತು,ಸಾಧರಣವಾಗಿ ಆಗ ಓಡಾಡುವ ಜನರು ಕವಳದ ಸಂಚಿಯನ್ನ ಇಟ್ಟುಕೊಂಡೇತಿರುಗುತ್ತಿದ್ದರು,ಪಾಪ ದಾರಿ ಹೋಕರಿಗೇನು ಗೊತ್ತು ಇವಳು ಒಮ್ಮಲತಿ ದೆವ್ವವೆಂದು , ಅವರು ವೀಳ್ಯದೆಲೆಯ ತುದಿಗೆ ಸುಣ್ಣವನ್ನವರೆಸಿ ಎರಡು ಅಡಿಕೆ ಹೋಳನ್ನಿರಿಸಿ ಸ್ವಲ್ಪ ನೆನೆಸಿದ ಭಾಂದರಿ ತಂಭಾಕನ್ನಿರಿಸಿ,ಮೇಲಿನಿಂದ ಬೊಗಸೆಗೆ ಹಾಕಿದ ತಕ್ಷಣ ಕೆಳಕ್ಕೆಬೀಳಿಸುತ್ತಿದ್ದಳಂತೆ.ಹಾಗೆ ಬೀಳಿಸಿಕೊಂಡು ಮೆಲಕ್ಕೆ ಎತ್ತಿಕೊಡುವಂತೆ ಹೆಳುತ್ತಿದ್ದಳಂತೆ, ಪಾಪ ಅವರು ಹೆಕ್ಕಿಕೊಡಲೆಂದು ಬಗ್ಗಿದತಕ್ಷಣ ಅವರ ಮೇಲೆ ತನ್ನ ಮೊಲೆಗಳನ್ನ ಹೇರಿ ಸಾಯಿಸಿ ಬಿಡುತ್ತಿದ್ದಳಂತೆ, ವ್ಯಕ್ತಿ ಅಲ್ಲೆ ರಕ್ತ ಕಾರಿಕೊಂಡು ಸತ್ತುಹೋಗುತ್ತಿದ್ದ.ಎಂತಹ ವಿಚಿತ್ರ ಭಯಾನಕವೆನಿಸಿತ್ತು ಆಗ ಅಪ್ಪ ಹೇಳುವ ಕಥೆ.ಚಿಕ್ಕವನಿರುವಾಗ ನಾನೂಕೂಡಹುಲಿಯಪ್ಪನಕಟ್ಟೆಗೆ ಹೋಗಲು ಹೆದರುತ್ತಿದ್ದೆ.ಈಗ ಅಪ್ಪ ಹೇಳಿದ ಕಥೆಯಲ್ಲೇನಾದರು ಹುರುಳಿರಬಹುದೇ ಏಂದು ಯೋಚನೆಗೆ ಬಿದ್ದೆ,

ದೂರದಲ್ಲೆಲ್ಲೋ ಕಿರುಚಿಕೊಂಡ ಶಬ್ಧ, ಚಕ್ಕನೆ ನಿಂತುಹೋಯಿತು,ಅಲ್ಲಿ ಭಯದ ವಾತಾವರಣ ವ್ಯಾಪಿಸತೊಡಗಿತು.ಪಟ್ ಅಂತದಾರಿ ದೀಪ ಆರಿಯೇ ಹೋಯಿತು.ಎಲ್ಲೆಲ್ಲೂ ಕತ್ತಲೆ . ನನಗೆ ನಾನೇ ದೈರ್ಯ ಹೇಳಿಕೊಂಡು ಲೈಟಿನ ಕಂಬದಡಿಯಲ್ಲೇನಿಂತೆ.ದೂರದಲ್ಲಿ ಚೀರಿದ ಶಬ್ಧ, ಯಾವುದೋ ಹಾವು ಕಪ್ಪೆಯನ್ನೋ ಇಲಿಯನ್ನೋ ,ಮತ್ತಾವುದೋಪ್ರಾಣಿಯನ್ನೋ,ಹಿಡಿದಿರಬೇಕೆಂದು ತರ್ಕಿಸಿದೆ, ಕೆಲವು ಗಳಿಗೆಗಳು ಕಳೆದವು, ನಿರ್ಜನ ಮೌನ,ಘಾಡವಾದ ಕಾರ್ಗತ್ತಲು, ಒಂದೇಸವನೆ ಗಾಳಿಯ ಸುಂಯ್ ಗುಡುವ ಶಬ್ದ, ತಲೆಯಲ್ಲಿ ಸುಳಿಯುತ್ತಿರುವ ಅಪ್ಪ ಹೇಳಿದ ಒಮ್ಮಲತಿಯ ಕಥೆ,ಎಲ್ಲವೂಸೇರಿ ನನ್ನಮನಸ್ಸು ಎಲ್ಲೆಲ್ಲಿಯೋ ಓಡುತ್ತಲಿತ್ತು .ಕತ್ತಲೆಯನ್ನ ಸೀಳಲಾಗದ ನನ್ನ ನಿಸ್ಸಹಾಯಕ ಕಣ್ಣುಗಳು ಅತ್ತಿಂದತ್ತ ಇತ್ತಿಂದತ್ತತಿರುಗುತ್ತಿದ್ದವು, ಹೀಗೆ ಕೆಲವು ಸಮಯ ಕತ್ತಲೆಯಲ್ಲಿ ಯೋಚಿಸುತ್ತಿರುವ ಸಮಯ ನಿಧಾನವಾಗಿ ಮಗುವೊಂದು ಹಿ ಹಿ ಹಿ ಹಿ ಹೀಎಂದು ನಗೆಯಾಡುವ ಶಬ್ಧ ಗಾಳಿಯಲ್ಲಿ ತೇಲಿ ಬಂದು ವಾತಾವರಣವನ್ನ ವ್ಯಾಪಿಸಿಬಿಟ್ಟಿತು.....ಧಸ್ ಎಂದು ನಿಟ್ಟುಸಿರ ಎಳೆದುಕೊಂಡು ಪಟ್ಟನೆ ಪ್ಯಾಂಟಿನ ಕಿಸೆಯಲ್ಲಿರುವ ಮೋಬೈಲ್ ಸ್ವಿಚ್ ಅದುಮಿ ಕರೆಯನ್ನ ತುಂಡರಿಸಿದೆ.........

No comments:

Post a Comment