Friday, September 17, 2010

ಕಿಸೆಗೂ ಕಿಸ್ಸಿಗೂ ನಂಟು



ಮಾತನಾಡಲು ನನ್ನ ಹುಡುಗಿ ಉದುರುವದು ಮುತ್ತು
ಮುತ್ತಿಡಲು ಹೋದರವಳ ಅಧರದಲ್ಲಿ ಸಿಹಿ ಇತ್ತು
ಮುಂದುವರೆದು ತುಟಿಯ ಒತ್ತಿ ಹೀರಬೇಕೆನ್ನುವ ಹೊತ್ತು
ಕುಸರಿಕೊಂಡು ದೂರಸರಿದು ಕೇಳಿದಳು ನಿನಗೇನು ಹುಚ್ಚು ?



ಹೌದು ನನಗೆ ಮುತ್ತೆಂದರೆ ಬಹಳ ಮೆಚ್ಚು
ದೊರಸರಿಯೇ ಸಹಿಸಲಾರೆ ನಾನು ಹೆಚ್ಚುಹೊತ್ತು
ಕೇಳಬೇಡ ಬರಿಯ ಪ್ರಶ್ನೆ ಮುತ್ತ ಕೊಡುವ ಹೊತ್ತು
ಸವಿದರೆ ಗೊತ್ತಾಗುವದು ನಿನಗೆ ಅದರ ಗಮ್ಮತ್ತು



ಹಾಗಾದರೆ ಕೊಡಬಹುದು ಎಷ್ಟು ಬೇಕಾದರೂ ಮುತ್ತು
ಅಳಿಸಬೇಡ ಮುತ್ತು ಹೀರುವ ಬರದಲ್ಲಿ ಲಿಫ್ಟಿಕ್ಕು
ಮುತ್ತು ಕೊಟ್ಟು ಸುಮ್ಮನಿರಿಸಲಾಗದು ನನ್ನ ಹೆಚ್ಚು ಹೊತ್ತು
ಬೇಕಿಂದಿರುವದನೆಲ್ಲ ಕೊಡಿಸಬೇಕು ಇವತ್ತು


ಕೊಡಿಸುವದಕೆ ನನ್ನಲ್ಲೇನಿದೆ ಆಸ್ತಿ ಅಂತಸ್ತು
ಮುತ್ತಿನಲ್ಲೇ ವೆರೈಟಿಗಳಿದೆ ನಿನಗೆಷ್ಟು ಗೊತ್ತು
ಬೇಕೆಂದರೆ ಕೊಟ್ಟಿಯೇನು ಮುತ್ತೇ ಇನ್ನೊಂದಿಸ್ಟು
ಮುತ್ತುಬಿಟ್ಟು ಕಿಸೆಯಲ್ಲೇನು ಇಲ್ಲ ಇವತ್ತು

4 comments:

  1. ಹೌದಪ್ಪಾ ... ಕಾಸು ಇದ್ರೆ ಮಾತ್ರ ಕೂಸು, ಕಿಸ್ಸು ಎಲ್ಲ.
    but dont miss the chance.. enjoy the kissssss....

    ReplyDelete
  2. Yes ಅಣ್ಣಾ ಕಾಸಿದ್ರೆ ಕೂಸು..... ಕಿಸ್ಸು.... ಅಲ್ಲೇ ಅಂದ್ರೆ ಎಲ್ಲವೂ ಮಿಸ್ಸು

    ReplyDelete
  3. ha ha....., writing kiss bagge tumba chanaagide, kiss andare astondu chanaagirutta adra gammattu nangantu iduvarege anta anubhava illa....?

    ReplyDelete