Tuesday, September 14, 2010

“Some” ಬಂಧ


ಬೆಳಗಿನ ಕನಸು ನಿಜವಾಗುತ್ತದಂತಲ್ಲ! ಅದೆಂತಹ ಕನಸು? ಎಣಿಸಿಕೊಂಡರೆ ಭಯವಾಗುತ್ತದೆ. ದೂರದೆಲ್ಲೆಲ್ಲೋ ಬೆಟ್ಟ. ನೋಡುವದಕ್ಕೆಷ್ಟು ಸುಂದರ. ಬೆಟ್ಟದ ತುದಿಯಿಂದ ಹರಿಯುವ ನೀರು, ಕಾಲುವೆಯ ದಡದಲ್ಲಿ ಅರಳಿರುವ ಹೂವುಗಳು. ಅಹಾ! ಎಂತಹ ಪರಿಸರಕ್ಕೆ ನಾನು ಬಂದೆ ? ಎಲ್ಲೆಲ್ಲೂ ಹೂವುಗಳ ಸುಗಂಧ. ತೇಲಿಬರುವ ತಂಪಾದ ಗಾಳಿ. ಆಹಾ! ನಾನು ಈ ರಮ್ಯವಾದ ಬೆಟ್ಟವನ್ನೊಮ್ಮೆ ಹತ್ತಲೇಬೇಕು. ಅದರ ತುದಿಯಲ್ಲಿ ನಿಂತು ಮುಗಿಲನ್ನ ವೀಕ್ಷಿಸಬೇಕು. ಅಲ್ಲಿ ಎತ್ತರದಲ್ಲಿ ನಿಂತು ರೋಮಾಂಚನವನ್ನ ಅನುಭವಿಸಬೇಕೆಂದುಕೊಂಡೆ. ಕ್ಷಣ ಹೊತ್ತು ನಾನು ಶಿಖರದ ಮೇಲಿದ್ದೆ. ನಾನು ಇಶ್ಚಿಸಿದ ಕಡೆ ಕ್ಷಣಾರ್ಧದಲ್ಲಿ ಆಕಾಶ ಮಾರ್ಗವಾಗಿ ಹೋಗಿಬಿಡುವ ಶಕ್ತಿಯನ್ನ ಹೊಂದಿದ್ದೆ. ಅದೆಂತಹ ರುದ್ರ ರಮಣೀಯ. ಸುತ್ತಲೂ ಕಣ್ಣಿಗೆ ನಿಲುಕದಷ್ಟು ವಿಶಾಲ. ಮಧ್ಯದಲ್ಲಿ ನಾನು ನಿಂತ ಪರ್ವತವೇಎತ್ತರ,ಮತ್ತೆಲ್ಲ ತಗ್ಗು ಎಂಬ ಭಾವ. ದೃಷ್ಟಿಯು ಕೆಲವು ಮೈಲುಗಳಷ್ಟು ಆಚೆ ಚಲಿಸಬಲ್ಲದು. ಆದರೆ ಅದರಾಚೆ ಏನನ್ನೂ ಗುರುತಿಸಲಾಗದು. ಅದರಾಚೆ ಎಲ್ಲವೂ ಆಕಾಶದ ಬಣ್ಣ. ಎಲ್ಲೆಲ್ಲಿಯೂ ಆನಂದವನ್ನೇ ಸ್ಪುರಿಸುವ ವಾತಾವರಣ. ಆದರೆ ಇವೆಲ್ಲವೂ ಕ್ಷಣಮಾತ್ರ. ಎಲ್ಲಿಂದಲೋಮುತ್ತಿಕೊಳ್ಳುತ್ತಿರುವ ಕರಿದಾದ ಮೋಡಗಳು. ತೇಲಿಸಿಕೊಂಡು ಹೋಗುವಷ್ಟು ರಭಸವಾಗಿ ಬೀಸುವ ಗಾಳಿ. ಮನಸ್ಸಿಗೆ ಭಯವು ಆವರಿಸುವ ಸ್ಥಿತಿ. ಎಲ್ಲಿ ನೋಡಿದರೂ ಕತ್ತಲು. ಹೂಂ! ನಾನೀಗ ನನ್ನನ್ನ ರಕ್ಷಿಸಿ ಕೊಳ್ಳಬೇಕೆಂದರೆ ಬೆಟ್ಟದ ತುದಿಯಿಂದ ಇಳಿಯಲೇಬೇಕಾಗಿತ್ತು. ಅದೇನೋ ಕಳೆದುಕೊಂಡ ಭಾವ.ಈಗ ನಾನು ಅತೀಂದ್ರಿಯ ಶಕ್ತಿಯನ್ನ ಕಳೆದು ಕೊಂಡಿದ್ದೇನೆ. ಇದ್ದಕ್ಕಿದಂತೆ ನನ್ನ ಸಹನೆಯನ್ನ ಮತ್ತು ಸಂತೋಷವನ್ನ ಕಳೆದುಕೊಂಡು ಚಡಪಡಿಸುತ್ತಿದ್ದೇನೆ. ನಾನು ಈ ಬಿರುಗಾಳಿ, ಮಳೆ, ಮಿಂಚು, ಸಿಡಿಲು, ಮತ್ತು ಏರಿಬರುವ ಕ್ರೂರ ಮ್ರುಗಗಳಿಂದ ತಪ್ಪಿಸಿಕೊಳ್ಳಬೇಕೆಂದರೆ ಶಿಖರದ ತುದಿಯಿಂದ ಇಳಿಯಲೇಬೇಕು. ಬೆಟ್ಟದ ಮೇಲಿಂದ ಪೋದೆಗಳ ಮಧ್ಯದಿಂದ ದಾರಿಮಾಡಿಕೊಂಡು ಕೆಳಗಿಳಿಯಲು ಆರಂಭಿಸಿದೆ. ಇನ್ನೇನು ನಾನು ಕೆಳಗಿಳಿದು ಬೆಚ್ಚನೆಯ ಜಾಗವನ್ನ ಸೇರುತ್ತೇನೆಂಬ ಸಮಯದಲ್ಲಿ ಎಲ್ಲಿಂದಲೋ ವಿಕಾರವಾಗಿ ಅರಚುತ್ತ ಬಂದ ಕಾಡುಮೃಗವೊಂದು ನನ್ನ ಸೊಂಟವನ್ನ ಬಿಗಿಯಾಗಿ ಹಿಡಿದುಕೊಂಡುಬಿಟ್ಟಿತು. ಮಗ್ಗುಲು ಹೋರಳಿತು."ಘಂಟೆ ಐದಾಯಿತಲ್ಲವೇ ? ನಾನು ಏಳಬೇಕದದ್ದು ಆರಕ್ಕಲ್ಲವೇ? ಎನ್ನೂ ಒಂದು ಘಂಟೆ ಇದೆ. ಮೈಯಲ್ಲ ತೋಯುವಷ್ಟು ಬೆವರು. ಹೌದು ! ಬೆಳಗಿನ ಕನಸು ನಿಜವಾಗುತ್ತದಂತಲ್ಲ? ಛೆ ! ನಿಜವಾಗಲಿಕ್ಕೇನಿದೆ ಆ ಕನಸಿನಲ್ಲಿ? ನಾನೇನಾದರು ಅತೀಂದ್ರಿಯನಾಗಿ ಹಾರಿಕೊಂಡು ಬೆಟ್ಟ ಹತ್ತಿವದೆಂದಾದರು ಸಾಧ್ಯವಿದೆಯೇ ? ಮತ್ತೆ ಬೆಟ್ಟದ ತುದಿಯಲ್ಲಿ ಇದ್ದಕ್ಕಿದ್ದಂತೆ ನನ್ನ ಶಕ್ತಿಯನ್ನ ಕಳೆದು ಕೊಳ್ಳುವದು ಮತ್ತು ಅಲ್ಲಿಂದ ಇಳಿದು ಬರುವದೆಂದರೇನು . ಅದ್ಯಾವ ಕ್ರೂರ ಮೃಗ ನನ್ನನ್ನ ಹಿಂಬಾಲಿಸುತ್ತಿರಬಹುದು.. ಹೀಗೆ ಆಲೋಚನಾ ಸರಣಿ ಹರಿಯತೋಡಗಿತು .
ಹೀಗೆ ಅರ್ದಗಳಿಗೆ ಯೋಚಿಸುವದರಸ್ಟರಲ್ಲಿ ಅವನು ನಿದ್ರೆಗೆ ಜಾರಿಯಾಗಿತ್ತು. ಮತ್ತೆ ಎಚ್ಚರವಾದದ್ದು ಆರುವರೆ ಘಂಟೆಗೆ.
ಛೇ ಏಳಲು ಅರ್ಧ ಘಂಟೆ ತಡವಾಗಿ ಹೋಯಿತು
ಎಂದು ತನ್ನಲ್ಲೇ 'ತಾನು ತನ್ನ ಸಮಯ ಪಾಲನೆಯ ಬಗ್ಗೆ ಬೈದುಕೊಳ್ಳುತ್ತಾ ಹಲ್ಲುಜ್ಜಲು ಬಚ್ಚಲಮನೆಯ ಕಡೆಗೆ ನಡೆದ.ಶೀಗ್ರ ಸ್ನಾನಮಾಡಿ,ಬೇಗ ಬೇಗನೆ ಬಟ್ಟೆಗಳನ್ನ ವಾಶಿಂಗ್ ಮಶಿನಿನ ಬಾಯಿಗೆ ತುರುಕಿ ಕನ್ನಡಿಮುಂದೆ ನಿಂತು ದೆಹಕ್ಕೆ ಸ್ವಲ್ಪ ಪೌಡರ್ ಉದುರಿಸಿ ಪ್ಯಾಂಟು ಬನೀನ್ ಶರಟುಗಳನ್ನ ಏರಿಸಿ. ಒದ್ದೆಯಾದ ಕೂದಲನ್ನ ಮತ್ತೋಮ್ಮೆ ಕೈಗಳಿಂದ ಬಡಿದು ಬಾಚಿಕೊಂಡು , ಕೋಣೆಯಿಂದ ಹೊರಬೀಳುವ ಹೊತ್ತಿಗೆ ಹೊಟ್ಟೆಯು ಹಸಿವಿನಿಂದ ಚುರುಗುಟ್ಟಲು ಆರಂಭಿಸಿತು. ಪ್ರಿಜ್ಜಿನಲ್ಲಿಟ್ಟ ಬ್ರೆಡ್ ತೆಗೆದು ಚಾಕುವುನಿಂದ ಜಾಮ್ ಮೆತ್ತಿ, ತಿಂದು ನೀರು ಕುಡಿದು ವಾಚನ್ನ ಮರೆತೆನೆನ್ನುವದು ನೆನಪಾಗಿ ವಾಚಿಗೆ ಕೈತವಡಿ ರಾತ್ರಿ ಬಿಡಿಸಿಕೋಂಡೇ ಇದ್ದ ಲ್ಯಾಪ್ ಟಾಪನ್ನ ಮಡಚಿ ಬ್ಯಗಿನಲ್ಲಿ ತೂರಿಸಿಕೊಂಡು ಸಾಕ್ಸ್ ಹಾಕಿ ಶೂ ಮೆಟ್ಟಿ ಬಾಗಿಲನ್ನ ಎಳೆದು ಕೊಂಡಕೂಡಲೇ ಜೇಬಿನಲ್ಲಿರುವ ಮೋಬೈಲ್ ರಿಂಗಣಿಸಲು ಆರಂಭಿಸಿತು.ಎತ್ತುಕೊಂಡು ಈ ಕಡೆಯಿಂದ ತಾನು ಹಲೋ ಏನ್ನುವ ಮೋದಲೆ ಕಾಂತಿಯ ಮಾತುಗಳು ಪಟ ಪಟನೆ ಉದುರಲು ಆರಂಭಿಸಿದವು.
ಇವತ್ತು ಬೇಗ ಬರ್ತಿಯಲ್ಲ ಮತ್ತೆ ಎಲ್ಲಿಗೆ ಅಂತ ಕೇಳಬೇಡ ಅದೇಜಾಗ ನಾನು ಕಾಯ್ತಿರ್ತೀನಿ ಕಾಯಿಸ್ ಬೇಡ ಕಾಣೊ ಪ್ಲೀಸ್ ..."
ಉತ್ತರಕ್ಕೂ ಕಾಯದೆ ಆಕಡೆಯ ಧ್ವನಿ ಬೈ ಎಂದಿತು. ಅವನು ಮರುಮಾತಾಡದೆ ಬೈ ಎನ್ನಬೇಕಾಯಿತು.ಅಪಾರ್ಟ್ ಮೆಂಟಿನ ಕೆಳಗೆ ನಡೆದು ಪಾರ್ಕಿಂಗನಲ್ಲಿದ್ದ ತನ್ನ ಕಾರನ್ನ ಸ್ಟಾರ್ಟ್ ಮಾಡಿ ಪ್ಲೇಯರ್ ಒಳಗೆ ಯಾವುದೋ ಘಸಲ್ ಸೀಡಿಯನ್ನ ತುರುಕಿದ...ಘಂಟೆ ಒಂಬತ್ತಾಗುವಷ್ಟರಲ್ಲಿ ಅಫೀಸನ್ನ ತಲುಪಿಕೊಂಡ.
ಅದೆಷ್ಟು ಜವಾಬ್ದಾರಿಗಳನ್ನ ನನ್ನ ತಲೆಗೆ ಕಟ್ಟಿದ್ದಾನೆ ನನ್ನ ಬಾಸ್ ಎನಿಸಿ ಕೊಂಡವನು . ಹೀಗೆ ದುಡಿಯುವ ನನ್ನಂತವರನ್ನ ಎಷ್ಟು ಜನರನ್ನ ಇಟ್ಟು ಕೊಂಡಿಲ್ಲ. ಅವನಿಗೆ ನನ್ನಂತವರನ್ನ ಸಾಕುವ ಕಲೆಯೊಂದು ಆಜನ್ಮದಿಂದಲೇ ಬಂದಂತಿದೆ.ಯಾವ ಸಮಯಕ್ಕೆ ಎಷ್ಟೆಷ್ಟು ಸಂಬಳ ವಸತಿ ಕಾರು ಐಶಾರಮಿ ಜೀವನವನ್ನ ಕೊಟ್ಟು ಅವರಿಂದ ಅದರ ಎರಡು ಪಟ್ಟು ಕೆಲಸ ತೆಗೆಸುವ ಕಾರ್ಯ ಸಿದ್ಧಿಸಿ ಕೊಂಡಿದ್ದಾನೆ.ನಾವೆಲ್ಲಾ ಒಂದುತರಹದ ಮೆಲ್ಜಾತಿಯ ಜೀತದವರಂತೆ ಅಲ್ಲವೇ?
ಅನ್ನುವ ಭಾವನೆಯಲ್ಲಿಯೇ ಕೆಲಸದಲ್ಲಿ ತೋಡಗಿಸಿಕೊಂಡು ಸಮಯವು ಸಂಜೆ ಐದು ಘಂಟೆಯನ್ನು ಮೀರಿತು. ಅವಳು ಕಾಯ್ತಾ ಇರ್ತಾಳೆ ಎಂಬುದು ನೆನಪಾಗಿ ಆಪೀಸಿನಿಂದ ಹೋರಟು ನೇರವಾಗಿ ಅವಳು ಹೇಳಿದ ಜಾಗಕ್ಕೆ ತಲುಪಿಕೊಂಡ . ಮೂರ್ನಾಲ್ಕು ದಿನಗಳ ಬಳಿಕ ಅವಳನ್ನ ಬೇಟಿಯಾಗುತ್ತಿದ್ದಾನೆ .ಹೀಗೆ ಒಮ್ಮೋಮ್ಮೆ ದೀರ್ಘವಾಗಿ ಮತನಾಡಲು ವಿಶಾಲವಾದ ಜಾಗವನ್ನ ಹೊಂದಿದ ಈ ರೆಸ್ಟೋರೆಂಟ್ ಗೆ ಆಗಾಗ ಬರುವದು ಅವರು ರೂಡಿಸಿಕೊಂಡ ಕ್ರಮ . ವಿಶಾಲವಾದ ಜಾಗದಲ್ಲಿ ಮಧುರ ಸಂಗೀತದ್ವನಿಯ ಹಿನ್ನೆಲೆಯೊಟ್ಟಿಗೆ ಹೊರದೇಶದ ವೈನ್ ಊಟ ಎಲ್ಲವೂ ಇಲ್ಲಿ ಲಭ್ಯ .ಮೇಲುಸ್ತರದ ಜನರಿಗಾಗಿಯೇ ರೂಪುಗೊಂಡದ್ದಾದ್ದರಿಂದ ಯಾವುದೆ ಗಂಡು ಯವುದೇ ಹೆಣ್ಣುಟ್ಟಿಗೆ ಬಂದು ಕುಡಿಯುತ್ತಾ ಹರಟುತಿದ್ದರೆ ಯಾರಾದರು ನಮ್ಮನ್ನೇ ದುರುಗುಟ್ಟುಕೊಂಡು ನೋಡುತ್ತಾರೇನೋ ಎಂಬ ಭಯವಿಲ್ಲ. ಅವಳು ತನಗಾಗಿ ಮೋದಲೇ ಕಾಯುತ್ತ ಕುಳಿತಿದ್ದಾಳೆ. ಎಲ್ಲದರಲ್ಲೂ ಹಾಗೆ ನನಗಿಂತ ಮೊದಲು ಅವಳೇ ಆಕ್ರಮಿಸಿ ಕೊಂಡಿರುತ್ತಾಳೆ.ಅವಳ ಎದುರಿಗೆ ಹೋಗಿ ಕುಳಿತುಕೊಂಡ. ಇಬ್ಬರಿಗೂ ಮಾತನ್ನ ಯವುದರಿಂದ ಆರಂಭಿಸಬೇಕೆಂದು ಅರ್ಥವಾಗಲಿಲ್ಲ ಅದಕ್ಕೆ ಎಬ್ಬರೂ ಮೌನಕ್ಕೆ ಶರಣಾದರು. ಕೆಲವು ಸಮಯದ ನಂತರ ಅವಳೇ ಮೌನವನ್ನ ಮುರಿದು
ಏನು ಅರ್ಡರ್ ಮಾಡೊಣ ? ಡ್ರಿಂಕ್ಸ್ ತಗೋತಿಯಾ ನನ್ಗೆ ಖಾಲಿ ಜೂಸ್ ಮತ್ತೆ ಸ್ನೇಕ್ಸ್ ಸಾಕು ನಾನಿವತ್ತು ಡ್ರೀಂಕ್ಸ್ ತಗೊಳ್ಳಲ್ಲ . ನಿನ್ಗೆ?
,ಯಕೋ ಕುಡ್ಯೋ ಮೂಡ್ ಇಲ್ಲ ನನ್ಗೂ ಅದನ್ನೇ ಹೆಳು
ಎಂದ ಅವನು . ... ನಯವಾಗಿ ಅದನ್ನೇ ಅವಳು ಬೆರರ್ ಗೆ ಆರ್ಡರ್ ಮಾಡಿದಳು.. ಮತ್ತೆ ಮೌನ ಅವನಿಗೆ ಮಾತಾಡುವದಕ್ಕಿಂತ ಮೌನವೇ ಇಷ್ಟವಾದಂತೆ ಕುಳಿತ. ಮತ್ತೆ ಅವಳೇ ಮತನ್ನ ಆರಂಭಿಸಿ ಕೇಳಿದಳು.
ಹೇಳು ಏನು ತೀರ್ಮಾನ ಮಾಡಿದೀಯಾ..?
ತೀರ್ಮಾನ ಮಾಡೋಕೇನಿದೆ ನಮ್ಮಿಬ್ಬರಿಗೂ ಸ್ನೆಹವಾಗುವ ಸಮಯದಲ್ಲಿ ಈತರದ ತೀರ್ಮಾನಗಳೇನಿರಲಿಲ್ಲ. ನಮ್ಮಿಬ್ಬರಲ್ಲಿ ಸಂಬದಗಳ ಬಗ್ಗೆ ಕಮೀಟ್ ಮೆಂಟ್ ಗಳಿರಲಿಲ್ಲ. ದೇಹಸಂಪರ್ಕದಾಚೆಗೆ ಮುಂದುವರೆದು ನಿನ್ನನ್ನೇ ಮಧುವೆ ಆಗುವದಕ್ಕೆ ನನಗೆ ನನ್ನದೆ ಆದ ಸಮಸ್ಯೆಗಳಿದೆ . ಮಧುವೆಯಾಗಬೇಕೆನ್ನುವಳ ಬಗ್ಗೆ ನನ್ನದೆ ಆದ ಕೆಲವು ಚೌಕಟ್ಟುಗಳಿದೆ ನಮ್ಮಿಬ್ಬರಿಗೆ ದೆಹಸಂಬಂದವು ಕೂಡಿತೆ ಹೊರತು ಅದರಿಂದಾಚೆಗೆ ಸತಿ ಪತಿಗಳಸಂಬಂದವಲ್ಲ .ಅದನ್ನ ಬಲವಂತವಾಗಿ ಕೂಡಿಸಲು ಹೋದರೆ ಅನಾಹುತ ತಪ್ಪಿದ್ದಲ್ಲ ....ಈಗ ಅಗಿರುವ ತಪ್ಪೇನಿದೆ ಅದು ನನ್ನ ಒಬ್ಬನಿಂದಲೇ ಘಟಿಸಿದ್ದಲ್ಲ ಅದರಲ್ಲಿ ನಿನ್ನದೂ ಸಮಾನ ಪಾಲಿದೆ. ಅದು ಪ್ರಕೃತಿಯ ನಿಯಮ ಮತ್ತು ಕೆಲವು ಸುರಕ್ಷಾ ನಿಯಮವನ್ನ ಮೀರೀದ್ದರ ಫಲ. ಹಾಗೆ ನಮ್ಮಿಬ್ಬರ ತಪ್ಪನ್ನು ಮುಂದಿಟ್ಟೂಕೊಂಡು ನನ್ನೊಬ್ಬನ ತಪ್ಪೆಂದು ಭಾವಿಸುವದು ತರವಲ್ಲ. ನನಗೆ ಇಷ್ಟವಿಲ್ಲದ ಸಂಬದದ ಬಲೆಯಲ್ಲಿ ಕೆಡಹುವುದು ಸರಿಯಲ್ಲ , ಈಗಲಾದರು ನಾಳೆ ಒಬ್ಬ ಡಾಕ್ಟರ್ ರನ್ನು ಕಂಡು ತೆಗೆಸಿಬಿಡುವದು ಉತ್ತಮ .ಈ ಆದುನಿಕ ಕಾಲದಲ್ಲೂ ಮುಂದುವರಿದ ಜನರೇಶನ್ ಆಗಿಯೂ ಕೂಡ ಮದುವೆಗೆ ಮೊದಲು ಹೊಟ್ಟೆಯನ್ನ ತುಂಬಿಕೋಂಡ ಮಾಂಸವನ್ನ ಪೋಶಿಸುವದು ಸರಿಯಲ್ಲ. ಅಷ್ಟಕ್ಕೂ ಮೀರಿ ನಿನ್ನಲ್ಲಿ ಚಿಗುರಿದ ಬ್ರೂಣವನ್ನ ಹೆರಲೇ ಬೆಕೆಂತ ಅಸೆ ಇದ್ದರೆ ಅದಕ್ಕೆ ನಾನು ಜವಾಬ್ದಾರನಲ್ಲ ...
ತನ್ನ ಸ್ಪಷ್ಟ ತೀರ್ಮಾನವನ್ನ ಹೇಳೀ ಉತ್ತರಕ್ಕಾಗಿಯೊ ಏಂಬಂತೆ ಅವಳ ಮುಖವನ್ನೋಮ್ಮೆ ನೋಡಿದ .ಹಾಗೆ ತಂದಿಟ್ಟ ಜೂಸ್ ಗ್ಲಾಸನ್ನ ಕೈಗೆ ತೆಗೆದು ಕೋಂಡು ತುಟಿಯ ಮದ್ಯದಲ್ಲಿ ಸೇರಿಸಿದ.
ಶರವೇಗದಲ್ಲಿ ಮುನ್ನುಗ್ಗಿ ಬಂದ ಅವಳ ಕೈ ಬಲವಾಗಿ ಅವನ ಮುಖಕ್ಕೆ ಬೀಸಿತು . ಕೈಯಲ್ಲಿದ್ದ ಗ್ಲಾಸ್ ತಿಳುಕಿ ಮುಖದ ಮೇಲೆಲ್ಲ ಹಣ್ಣಿನ ರಸವು ರಾಚಿತು ಇದ್ದಕ್ಕಿದ್ದಂತೆ ಬಂದ ಶಬ್ದಕ್ಕೆ ಜನರೆಲ್ಲ ತಿರುಗಿ ನೋಡತೋಡಗಿದರು. ಮಯ್ಯಲ್ಲಿ ಕಂಪನವು ಶುರುವಾಗಿ ಕುಳಿತುಕೊಳ್ಳಲಾಗದೆ ರಭಸವಾಗಿ ಅಲ್ಲಿಂದ ಎದ್ದು ನಿಂತ. ಅವಳೂ ತನ್ನ ಕುರ್ಚಿಯಿಂದ ಎದ್ದು ಥೂ ಭಾಸ್ಟಾರ್ಡ್ ಲೊಫರ್ ನಿನ್ನನ್ನ ಬಿಡೋದಿಲ್ಲ ಕಾಣೊ. ಎಂದು ಆವೇಶದಿಂದ ಕೂಗಾಡುತ್ತ ಅಲ್ಲಿಂದ ಸರಸರನೆ ಹೋರ ನಡೆದಳು .ಕೆಲವು ಕ್ಷಣ ಎನಾಗುತ್ತದೆ ಎಂದು ತೋಚದೆ ತಾನು ಕುರ್ಚೀಯಲ್ಲಿ ಕುಸಿದು ಕುಂತುಕೊಂಡ ನಿಧಾನವಾಗಿ ತಲೆತಗ್ಗಿಸಿಕೊಂಡು ಅಲ್ಲಿಂದ ಹೋರ ಬಂದ
ಛೇ! ಅವಳಿಗೇನಾಗಿದೆ ? ಅವಳ್ಯಾಕೆ ನನ್ನನ್ನ ಹೀಗೆ ಪೀಡಿಸುತ್ತಿದ್ದಾಳೆ?ಅವಳು ನನ್ನನ್ನ ಹೋಡೆಯುವ ಹಂತಕ್ಕೆ ತಲುಪಿದಳೆಂದರೆ ಅವಳಿಗೆ ಎಷ್ಟು ಹತಾಶೆ ಅಗಿರಬಹುದು. ಅವಳು ನಡೆದು ಕೋಂಡ ರೀತಿ ನಾಚಿಕೆಗೆಡಿನದಲ್ಲವೇ? ನನಗಾದರು ಹೀಗೆ ಹೇಳದೆ ಮತ್ತೇನು ಮಾರ್ಗವಿತ್ತು ? ನನ್ನ ನಿರ್ದಾರವನ್ನ ಸ್ಪಷ್ಟವಾಗಿ ಹೇಳಿದ ತೃಪ್ತಿ ನನಗಿದೆ. ಅವಳಿಗೆ ಮೋಸಮಾಡಬೇಕೆಂಬ ಸಂಚು ನನ್ನಲ್ಲಿದ್ದರೆ ಅವಳನ್ನ ಹೇಗಾದರು ಮಾಡಿ ಸಾಗ ಹಾಕಬಹುದಿತ್ತು.ಹೇಗಾದರು ಮಾಡಿ ಅವಳನ್ನ ಪುಸಲಾಯಿಸಿ ಆದ ತಪ್ಪನ್ನ ತೆಗೆಸಿ ಬಿಡಬಹುದಿತ್ತು. ಕೇಲವು ದಿನಗಳ ನಂತರ ಮತ್ಯಾವುದೋ ಕಾರಣ ಹೇಳಿ ಮದುವೆಯ ಭಂದನವನ್ನ ತಪ್ಪಿಸಿಕೊಳ್ಳ ಬಹುದಿತ್ತು. ಆದರೆ ನನ್ನೂಟ್ಟಿಗೆ ಇಷ್ಟು ದಿನ ಅಖಂಡ ಸುಖವನ್ನ ಹಂಚಿಕೊಂಡ ಅವಳಮುಂದೆ ಸುಳ್ಳನ್ನ ಯಾಕೆ ಸೃಸ್ಟಿಸಬೇಕು ಅಂತ ಯೋಚನೆ ಮಾಡಿಯೇ ಅಲ್ಲವೇ ಅವಳಲ್ಲಿ ನಿಜವನ್ನ ಹೇಳಿದ್ದು .ಅವಳೂ ಯತಾರ್ಥವನ್ನ ಒಪ್ಪಬಹುದು ಅಂದು ಕೊಂಡಿದ್ದೆ. ಆದರೆ ಅವಳಿಗೆ ನನ್ನ ಮಾತು ಅಪತ್ಯವಾಯಿತು.. ನಾನಾದರು ಅವಳನ್ನ ಹ್ಯಾಗೆ ಒಪ್ಪಿ ಕೊಳ್ಳಲಿ. ನಾನು ಒಪ್ಪಿದರೂ ಮನೆಯವರನ್ನ ಹ್ಯಾಗೆ ಒಪ್ಪಿಸಲಿ, ಅಪ್ಪ ಅಮ್ಮನು ನಂಬಿದ ಜಾತಿ ಮತವನ್ನ ಬಿಟ್ಟು ಅವರಿಗ್ಯಾಕೆ ನೋವುಂಟುಮಾಡಲಿ.ಅವರಿಗಾದರೂ ಅಷ್ಟೇ ಅಲ್ಲವೇ ನಮ್ಮ ಮಗ ಮದುವೆಯಾಗುವ ಹೆಣ್ಣು ನನ್ನ ಕುಟುಂಬ ನನ್ನ ಮನೆ ನಮ್ಮವರ ಸಂಪ್ರದಾಯಗಳನ್ನ ಪಾಲಿಸುವ ಒಬ್ಬ ಸಂಪ್ರದಾಯಸ್ತಳಾಗಿರಬೇಕೆಂಬ ಆಸೆ ಇರುವದಿಲ್ಲವೇ? ನನ್ನನ್ನೆ ನಂಬಿದ ಹಳ್ಳಿಯ ಅಪ್ಪ ಅಮ್ಮರಿಗೆ ಇವಳನ್ನ ತನ್ನ ಸೊಸೆಯಂಬುದಾಗಿ ಒಪ್ಪಿಕೊಳ್ಳಲು ತುಂಬಾ ಕಷ್ಟವಾಗುವದಿಲ್ಲವೇ.? ದೇಹಸುಖ ಹಂಚಿಕೊಂಡ ಮಾತ್ರಕ್ಕೆ ಅವಳನ್ನೇ ಜೀವನ ಸಂಗಾತಿಯನ್ನಾಗಿ ವರಿಸ ಬೇಕೆಂಬ ನಿಯಮವೇನಿಲ್ಲವಲ್ಲ. ನಮ್ಮಿಬ್ಬರ ಮಧ್ಯೆ ಅಂತಹ ಒಡಂಬಡಿಕೆಯೂ ಇರಲಿಲ್ಲ
ಯಾವುದೋ ಒಂದು ಧೆಲಿಯ ಬ್ಯುಸಿನೆಸ್ಸ್ ಸೆಮಿನಾರಲ್ಲಿ ಪರಿಚಯವಾದಳು .ಪರಿಚಯ ಮಾತಿಗೆ ತಿರುಗಿತು. ತುಂಬಾ ಸೋಶಿಯಲ್ .ಎಷ್ಟೆಂದರೂ ಪ್ಯಾಟೆ ಸಂದಿಗಳಲ್ಲಿ ಬೆಳೆದ ಹುಡುಗಿಯಲ್ಲವೇ? ಯಾವುದೇ ವಿಷಯವಾಗಲಿ ತುಂಬಾ ಬೋಲ್ಡ್ ಅಗಿ ಮಾತನಾಡುತ್ತಿದ್ದೆವು. ನಾವಿಬ್ಬರು ಮಾತನಾಡುತ್ತಿದ್ದರೆ ಒಂದು ಗಂಡಸು ಇನ್ನೊಬ್ಬ ತನ್ನಸ್ನೇಹಿತನೊಟ್ಟಿಗೆ ಯ್ಯಾವ್ಯಾವ ವಿಷಯಗಳನ್ನ ಮುಕ್ತವಾಗಿ ಮಾತನಾಡಬಹುದೋ ಆವೆಲ್ಲಾ ಸಂಭಾಶಣೆಗಳು ನಮ್ಮ ಮಾತಿನಲ್ಲಿರುತ್ತಿದ್ದವು .ಹೀಗೆ ನನಗೂ ಸಹ ಮುಕ್ತವಾಗಿ ಮಾತಡಲು ಯಾವುದೇ ಶರತ್ತಿಗೆ ಒಳಪಡಿಸಬಾರದ ಒಂದು ಸ್ನೇಹಿತೆಯ ಸನಿಹ ಅವಶ್ಯಕತೆ ಎತ್ತು . ಅದ್ಯಾವುದೊ ಗಳಿಗೆಯಲ್ಲಿ ತುಂಬಾ ಸಲೇಸ್ ಆಗಿ ಮುಕ್ತವಾಗಿ ನನ್ನನ್ನ ಬಿಗಿದಪ್ಪಿ ಚುಂಬಿಸಿದಳು. ಬರಬರುತ್ತಾ ಅದು ನಮ್ಮಿಬ್ಬರ ಮಧ್ಯದಲ್ಲಿ ಒಂದು ಅಧಿಕೃತ ಕ್ರಿಯೆಯೇ ಅಗಿಬಿಟ್ಟಿತು. ನಾನೆ ಅವಳನ್ನ ನನ್ನ ಫ್ಲಾಟಿಗೆ ಆಹ್ವಾನಿಸಿದೆ. ಅಷ್ಟೇ ಮುಕ್ತವಾಗಿ ನಡೆದು ಬಂದಳು.ಸ್ವಲ್ಪವೂ ಅಳುಕಿಲ್ಲದೆ ನನ್ನನ್ನ ತೃಪ್ತಿಪಡಿಸಿದಳು . ಅವಳೂ ತೄಪ್ತಿ ಪಡೆದಳು. ಹೀಗೆ ನಾವು ಕೂಡಿದ ದಿನಗಳೆಷ್ಟೊ ಯಾವತ್ತೂ ಅವಳು ನನ್ನನ್ನ ಮಧುವೆ ಅಗ್ತೀಯಾ ನನ್ನ ಲವ್ ಮಾಡ್ತೀಯಾ ಏಂಬುದಾಗಿ ಕೇಳಲೇ ಇಲ್ಲ. ನಾನೂ ಆವಿಷಯವಾಗಿ ಎನೂ ಮಾತನಾಡಲೂ ಇಲ್ಲ . ಆ ದಿನಗಳಲ್ಲಿ ನಮ್ಮಿಬ್ಬರದು ಮುಕ್ತ ಸಾಮ್ರಾಜ್ಯವಗಿತ್ತು. ಹೀಗೆ ಮುಕ್ತವಾಗಿ ನಡೆಯುತ್ತಿದ್ದ ನಮ್ಮ ಸಾಮ್ರಾಜ್ಯದೋಳಗೆ ಕೊಲಾಹಲವು ಕೆಲದಿನದಿಂದೀಚೆಗೆ ಕಾಲಿಟ್ಟಿತು. ಅದ್ಯಾವತ್ತೋ ಮಾತನಾಡುತ್ತಿರುವಾಗ ನಾನು ಬಸುರಿ ಮೂರು ತಿಂಗಳಾಯಿತು ಅಂದಳು. ನಾನು ನಕ್ಕುಬಿಟ್ಟೆ . ಅವಳ ಮಾತಿನಲ್ಲ್ಯಾಕೋ ತಾಯ್ತನವನ್ನ ಹಾಗೆ ಉಳಿಸಿಕೋಳ್ಳುವ ಇರಾದೆ ಕಂಡಿತು.ಗಂಭೀರ‍ವಾಗಿ ಮಾತನಾಡ ತೊಡಗಿದಳು.ಅವಳಿಗೆ ಬಸುರ ಹೊತ್ತು ಹೆರಬೇಕೆಂಬ ಆಸೆ. ನನ್ನನ್ನೇ ಮದುವೆ ಆಗಿ ಗರ್ಭವನ್ನ ಉಳಿಸಿ ಕೊಳ್ಳುವ ಬಗ್ಗೆ ಮಾತನಾಡಿದಳು. ಹೇಗೆ ಮಧುವೆಯೇ ಆಗದೆ ಯಾರಿಂದಲೊ ಮಗುವನ್ನ ಪಡೆದು ಪೋಷಿಸಿ ಸಮಾಜವನ್ನ ಎದುರಿಸುವ ದೈರ್ಯ ನಿನಗಿಲ್ಲವೋ, ಹಾಗೆ ನನಗೂ ಕೂಡ ನಮ್ಮವರ ಮತ್ತು ಮನೆಯವರಿಗೆ ವಿರುಧ್ದವಾಗಿ ನಡೆಯುವ ದೈರ್ಯ ನನಗಿಲ್ಲ.ಇವತ್ತೇ ಡಾಕ್ಟರನ್ನ ಕಂಡು ಅದಕ್ಕೊಂದು ಅಂತ್ಯ ಹಾಡು ಅಂತ ಮಾತು ಮುಗಿಸಿದೆ. ಆದರೆ ಅವಳು ನನ್ನ ಮಾತನ್ನ ಕೇಳುವ ತಾಳ್ಮೆ ಕಳೆದು ಕೊಂಡಿದ್ದಳು. ತಿಳಿಸಿ ಹೇಳೀದರೆ ಸರಿ ಹೋಗಬಹುದೆಂದುಕೊಂಡಿದ್ದೆ ಆದರೆ ಅವಳು ಇಷ್ಟೆಲ್ಲ ರಂಪಾಟ ಮಾಡಬಹುದೆಂದು ಕೊಂಡಿರಲಿಲ್ಲ...
ಹೀಗೆ ಯೋಚಿಸುತ್ತ ಮಲಗಿರುವವನಿಗೆ ಬೆಳಗಿನ ಜಾವದಲ್ಲಾದ ಕನಸು ತಲೆಯಲ್ಲಿ ಸುಳಿಯತೊಡಗಿತು ಹೌದು ನಾನು ಕಂಡ ಕನಸಿಗೂ ನಡೇಯುತ್ತಿರುವ ಘಟನೆಗೂ ಸಂಬಂದ ವಿದೆಯೇ? ಅವಳ ಒಡನಾಟದ ದಿನಗಳಲ್ಲಿ ನಾನು ಸುಖದ ಬೆಟ್ಟವನ್ನೇರುತ್ತಿದ್ದೆ .ಇದ್ದಕ್ಕಿದ್ದಂತೆ ಅವಳ ಮನಸ್ಸಿನಲ್ಲಿ ಮೂಡಿದ ಭಾವನೆಗಳಿಂದ ನಾನು ಸುಖದಿಂದ ವಂಚಿತನಾದೆ. ಅವಳಲ್ಲಿ ಕಟ್ಟಿಕೊಂಡ ಗರ್ಭ ನನ್ನ ಜೀವನವನ್ನ ಕ್ರೂರ ಮೃಗದಂತೆ ಹಿಡಿದುಕೊಂಡು ಬಿಡಬಹುದೇ?
ಮತ್ತೆ ಮತ್ತೆ .....ನಿನ್ನನ್ನ ಬಿಡೋದಿಲ್ಲ ಕಾಣೊ ಅನ್ನುವ ಅವಳ ಆ ಕೊನೆಯ ಮಾತು ಕಿವಿಯಲ್ಲಿ ಮಾರ್ಧನಿಸ ತೊಡಗಿತು.

1 comment: