Friday, October 22, 2010

ಹವಿಕ



ಹವಿಕ ಬ್ಲಾಗ್ ಬಾಂದವರಿಗೆ ವಂದನೆ, ಅದ್ಯಾಕೋ ಗೊತ್ತಿಲ್ಲ ಜನನಿ ಜನ್ಮ ಭೂಮಿಸ್ಚ ಸ್ವರ್ಗಾದಪಿ ಗರೀಯಸಿ ಅಂತ ರಾಮ ಹೇಳಿದ ಮಾತು ಇವತ್ತಿಗೂ ನಿಜ. ಅದ್ಯಾಕೋ ನಮ್ಮವರನ್ನ ನಮಗೆ ಕಂಡರೆ ಅದೇನೋ ಮೋಹ. ಊರನ್ನ ಬಿಟ್ಟು ಕಾಂಕ್ರಿಟ್ ಕಾಡನ್ನ ಸೇರಿದ ನಮಗೆ ನಮ್ಮವರು ಅಂದರೆ ಅದ್ಯೇನೋ ಸೆಳೆತ.ಹಾಗಂದ ಮಾತ್ರಕ್ಕೆ ನಾವು ಹೊರಗಡೆಯವರನ್ನ ಒಳಗೇ ಬಿಟ್ಟು ಕೊಳ್ಳುವದೇ ಇಲ್ಲ ಅಂತ ಅರ್ಥ ಅಲ್ಲ. ಆದರೂ ನಮ್ಮವರು ಸಿಕ್ಕರೆ ನಮ್ಮದೇ ಆದ ಹವ್ಯಕ ಭಾಷೆಯಲ್ಲಿ ಸ್ವಲ್ಪ ಮಾತನಾಡಬಹುದಲ್ಲ ಅಂತ ಕುಶಿ. ಹಾಗಂತ ಹಳ್ಳಿಯಿಂದ ಪ್ಯಾಟೆ ಸೇರಿದ ಹುಡುಗಿಯರು (ಕೂಸುಗಳು )ನಮ್ಮಂತವರನ್ನ( ಮಾಣಿ ದಿಕ್ಕಳನ್ನ ) ಮತನಾಡಿಸಯೇ ಬಿಡ್ತಾರೆ ಅಂತ ಆರ್ಥನೂ ಅಲ್ಲ. ಅದೇಕೊ ಈ ಸಿಟಿಯಲ್ಲಿ ಟ್ರಾಫಿಕ್ ಜಾಮಿನಲ್ಲಿ, ಕಾಡುಗಳೇ ಇಲ್ಲದ ನಾಡಿನಲ್ಲಿ ಮಲೆನಾಡಿನ ತಪ್ಪಲಿವರಾದ ನಮಗೆ ಬೋರ್ ಅನಿಸುವದು ಸಹಜ. ಆದರೇನು ಮಾಡೋಣ ಹೊಟ್ಟೆ ಪಾಡು. ಉದರನಿಮಿತ್ತವಾಗಿ ನಾವು ಕಾಡನ್ನ ಬಿಟ್ಟು ನಾಡು ಸೇರಲೇ ಬೇಕು .ಇಲ್ಲ ಅಂದರೆ ಹೊಟ್ಟೆಗೂ ಇಲ್ಲ ಹೆಣ್ಣು ಕೊಡುವವರು ಮೊದಲೇ ಇಲ್ಲ. ನಾವು ಹಳ್ಳಿ ಚರರು ಪ್ಯಾಟೆ ಚರರಾಗಿದ್ದೇವೆ ಅಂದರೂ ತಪ್ಪಲ್ಲ . ಅದೇನೇ ಇರಲಿ ನಾನು ಹೇಳಲಿಕ್ಕೆ ಹೊರಟಿರುವದು ಅದಲ್ಲ. ಸಿಟಿಗೆ ಬಂದು ಫಾಸ್ಟ್ ಫುಡ್ ಸಂಸ್ಕೃತಿಯನ್ನ ರೂಡಿಸಿ ಕೊಂಡ ನಮಗೆ ಇನ್ನೊಂದಿಷ್ಟು ವರುಷಗಳ ನಂತರ ನಮ್ಮ ಭಾಷೆಯ ಕೆಲವು ಪದಗಳನ್ನ ಅದರ ಆರ್ಥಗಳನ್ನ ಹಳ್ಳಿಗೇ ಹೋಗಿ ತಿಳಿದು ಕೊಳ್ಳುವ ಪ್ರಸಂಗ ಬರಬಹುದು. ಅಡಿಕೆ ತೋಟ ಕೊನೆ ಕೊಯ್ಲು. ಎಲೆ ಕೊಯ್ಲು.ಬ್ಯಾಣ. ಕುಂಬ್ರಿ ,ಜಡ್ಡಿ, ಸಂಕ,ಪಾಗಾರ ,ದೊಣಪೆ, ದಬ್ಬೆ, ಕತ್ತಿ, ಸಪ್ಪು, ದರಕನಕಲ್ಲಿ , ಕತ್ತಿ ಕೊಕ್ಕೆ, ಹಾಳೆ ಟೊಪ್ಪಿ , ಮರಗತ್ತಿ , ಚೂರ್ಗತ್ತಿ,ಅಂಡ್ ಗತ್ತಿ, ಅಂಡಗೊಕ್ಕೆ ಕೊನೆಹಗ್ಗ, ಸೋಗೆ ಅಟ್ಲ, ಜೋಟಿ,ಸಪ್ ಕಂಬಳಿ, ಅಬ್ಬಿ, ಮನೆಕಂಬಳ,ಕಡ್ಕಮಣೆ, ತಳೆ, ಅಟ್ಟಣಿಗೆ, ,ತೊಯ್ಯಳೆ,ಜನ್ತ್ರ,ಹರಣಿ, ನೀರವಳೇ,ಶೂಲಗೆ,ಗಡಗಡೆ.ಕೆರ್ಮಣಿಗೆ,ಮೆಟ್ಟಗತ್ತಿ, ಚೂಳಿ, ಮಾಳ,ಇಂತಹುವುಗಳೇ ಮೊದಲಾದ ಶಬ್ದಗಳು ಮತ್ತು ತೆಳ್ಳೆವ್ವು ,ಹಶಿ ,ಮರ್ಗೆಗೊಜ್ಜು ತಂಬ್ಳಿ,ಅಪ್ಪೆಹುಳಿ, ಸಾಂಬ್ರಾಣಿ,ತೊಡೆದೇವು, ಮೊದಲಾದ ಹವ್ಯಕ ಅಡಿಗೆಯ ಹೆಸರು, (ಕೆಲವು ತಂಡಿ ಹೆಸರು ಮರೆತು ಹೋಗಿದೆ),ಇಂತಹ ಕೆಲವು ಶಬ್ಧಗಳು ಕೆಲವು ವರುಷಗಳ ನಂತರ ಆರ್ಥ ಅಗದೇ ಇರಬಹುದು, ಯಾಕೆಂದರೆ ಇಲ್ಲಿ ನಮಗೆ ಇಂತಹ ಶಬ್ಧಗಳನ್ನ ಉಪಯೋಗಿಸುವ ಅವಕಾಶ ಬರುವದೆ ಇಲ್ಲ, ಮಮ್ಮಿ ಡ್ಯಾಡಿ ಸಂಸ್ಕ್ರುತಿಯಲ್ಲಿ ಅಪ್ಪಯ್ಯ ಆಯಿ ಶಬ್ದಕ್ಕೆ ಹವ್ಯಕ ಕನ್ನಡ ಭಾಷಾ ನಿಘಂಟನ್ನ ಹುಡುಕಬೇಕಾಗ ಬಹುದು. ಹಿಂದೊಮ್ಮೆ ನಮ್ಮಪ್ಪ ಆಯಿ ನಮಗೆ ಮಾಣಿ ಹೇಳಿ ಕರೆಯುತ್ತಿದ್ದರಲ್ಲ, ದೊಡ್ಡವ ಆದರೆ ದೊಡ್ಡಮಾಣಿ ಸಣ್ಣವ ಆದರೆ ಸಣ್ಣ ಮಾಣಿ ಅಂತ ಅಂತಹ ಶಬ್ದಗಳನ್ನ ನಮ್ಮ ಮುಂದಿನ ತಲೆಮಾರಿಗೆ ಉಪಯೋಗಿಸಿದರೆ ಅನರ್ಥವಾದೀತು, ಮುಂದೇ ಯಾವಾಗಲೋ ನಮ್ಮ ಮಕ್ಕಳ ಮುಂದೆ ಹಾಗೊಮ್ಮೆ ಯಾವುದೊ ಸಮಧರ್ಭದಲ್ಲಿ ದೊಣಪೆ ಅಥವಾ ಪಾಗಾರ ಎಂಬರ್ಥದ ಶಬ್ದವನ್ನ ಉಪಯೋಗಿಸಿದೇವು ಅಂತಾದರೆ ತಕ್ಷಣ ಮಕ್ಕಳು what is the meaning of donape and pagara ಅಂತ ಪ್ರಶ್ನೆ ಹಾಕ್ತಾರೆ, ಪಗಾರ ಮತ್ತೆ ದೋಣಪೆಗೆ ಏನ್ ಡೆಫಿನೇಷನ್ ಕೊಡ್ತೀರಿ? ಗೊತ್ತಿಲ್ಲ !

ಅದೇನೇ ಇರಲಿ ಹಳ್ಳಿ ಯಿಂದ ಬಂದ ನಮ್ಮ ಹವ್ಯಕ ಹುಡುಗರು ಮತ್ತು ಹುಡುಗಿಯರು ಅದ್ಯೇನೋ ಇಂಗ್ಲೀಷಿನ ತೆವಲನ್ನ ಹತ್ತಿಸಿಕೊಂಡು ಮಧ್ಯ ಮಧ್ಯ ಟೊಂಯ್,ಪುಸಕ್ ,ಅಂತ ಮಾತಾಡುವವರೇ ಹೆಚ್ಚು, ಇಂತವರಿಗೆ ಒಂದು ಕಿವಿಮಾತು ಹವ್ಯಕ ಕನ್ನಡದ ಮಧ್ಯದಲ್ಲಿ ಇಂಗ್ಲಿಷ್ ಬಳಸಬೇಡಿ.ಆದಷ್ಟು ಮರೆತುಹೊಗುತ್ತಿರುವ ಶಬ್ದಗಳಿಗೆ ಒತ್ತುಕೊಡಿ, ಗ್ರಾಮೀಣ ಸೊಗಡಿನ ಹವ್ಯಕ ಮಾತು ನಿಜಕ್ಕೂ ನಮಗೆ ಕುಶಿಯನ್ನ ಕೊಡುತ್ತದೆ.ಅದನ್ನ ಬಳಸುತ್ತ ಇದ್ದರೆ ಮರೆತು ಹೋಗ ಬಹುದಾದ ಳೆ ಶಬ್ದಗಳು ಚಿತ್ತದಲ್ಲಿ ಉಳಿದುಕೊಳ್ಳುತ್ತದೆ. ಕೊನೆಪಕ್ಷ ಹವ್ಯಕರು ಸಿಕ್ಕಿದಾಗ ಹವ್ಯಕ ಭಾಷೆಯಲ್ಲೇ ಮಾತಾಡಿ ಮಾರಾರ್ಯ . (ಈ ಎಲ್ಲ ಶರತ್ತುಗಳು ಬರೆದವನಿಗೂ ಅನ್ವಯಿಸುತ್ತದೆ ) ಕೆಲವು ಮರೆತು ಹೋಗುತ್ತಿರುವ ಹಳೆ ಶಬ್ದಗಳನ್ನ ಮತ್ತು ಪ್ಯಾಟೆಯಲ್ಲಿ ಚಲಾವಣೆಯಲ್ಲಿರದ ಕೆಲವು ಶಬ್ದಗಳನ್ನ ಚಲಾವಣೆಗೆ ತನ್ನಿ. ಅದು ಎಂತಹ ಕುಶಿ ಕೊಡುತ್ತದೆ ಅಂತ ಅನುಭವಿಸಿ ನೋಡಿ. ಅದ್ಯಾವತ್ತೋ ಯಾವುದೊ ಹವ್ಯಕ ಸಂಸ್ಕೃತ ಭಾಷಾ ಪಂಡಿತರು ಹವಿಕ ಎಂಬ ಶಬ್ಧಕ್ಕೆ ತಮಾಷೆಯಾಗಿ ಶ್ಲೋಕ ರೂಪದಲ್ಲಿ ಆರ್ಥ ಕಟ್ಟು ಕೊಟ್ಟಿದ್ದಾರೆ ಓದಿ ನೋಡಿ,


ಹಕರೋ ಹಳ್ಳಿ ವಾಸಸ್ಚ ವಿಕಾರೋ ವೀಳ್ಯ ಭಕ್ಷಕಹ
ಕಕಾರೋ ಕಂಬಳಿ ಕತ್ತಿಸ್ಚ ತೆ ಹವಿಕ ಲಕ್ಷಣಂ



ಮೆಲಿನ ಮಾಳದ ಚಿತ್ರ ಅಂತರ್ ಜಾಲಪ್ಪನ ಕೄಪೆ

9 comments:

  1. naanu karavaLiyavane.... tumbaa chennaaide nimma baravaNige....

    ReplyDelete
  2. ಅಣ್ಣಾ, ಊರು ಬಿಟ್ಟು ಬಂದ ನಮಗೆ ಎಲ್ಲೋ ನಮ್ಮ ಭಾಷೆ ಮತದವರು ಕಂಡ್ರೆ ಖುಷಿ ಆಗ್ತು ಹೋಗಿ ಮಾತಾಡ್ಸ ಅನಿಸ್ತು... ಬರವಣಿಗೆ ಚೆನ್ನಾಗಿದ್ದು,ನಮ್ಮ ಭಾಷೇಲೆ ಬರೆದ್ರೆ ಇನ್ನು ಚೊಲೋ ಇರ್ತಿತ್ತು ..

    ReplyDelete
  3. ಜೈ ಹವ್ಯಕ.

    ReplyDelete
  4. Cholo idro......Dhanyavaadagalu.......preeti heenge irli......

    Santosh bhat

    ReplyDelete
  5. ನನ್ನ ಬರಹಕ್ಕೆ ಕಾಮೆಂಟಿಸಿದ ಹಿರಿಯರಾದ ದಿನಕರ ಮೊಗೇರ ಮತ್ತು ವಿ.ಆರ್.ಭಟ್ ಅವರಿಗೂ ಹಾಗೆ ಅಣ್ಣಂದಿರಾದ ಉದಯ ಹೆಗಡೆ ರವಿ ಭಟ್ಟ ಮತ್ತು ಸಂತೋಷ ಭಟ್ಟರು ಇವರುಗಳಿಗೆ ನಮನಗಳು

    ReplyDelete
  6. ಲೇಖನ ಚೊಲೊ ಇದ್ದು. ಈಗ ಹವ್ಯಕ ಕೂಸ್‍ಗಳಿಗೆ ಹಳ್ಳಿ ಮಾಣಿಗಳು ಬ್ಯಾಡ್ದಂತೆ. ಪ್ಯಾಟೇಲಿ ಸಣ್ ನೌಕ್ರೀಲ್ ಇದ್ರೂ ಸೈ, ಪ್ಯಾಟೆ ಮಾಣೀನೇ ಬೇಕಂತೆ.

    ReplyDelete
  7. ಭಟ್ರೇ ಲಾಯ್ಕ್ ಇದ್ದು....ಖುಶಿ ಆತು.

    ReplyDelete
  8. ಆಗ್ತಿಲ್ಯೋ ಹೋಗ್ತಿಲ್ಯೋ ಚೈವ ಹೋಪನೋ ಬಪ್ಪನೋ ತಥಾ |
    ಅಕ್ಕು ಬಕ್ಕು ಸಮಾಖ್ಯಾತಮ್ ಏತತ್ ಹವ್ಯಕ ಭಾಷಣಮ್ ||

    ಇಷ್ಟನ್ನೂ ನೀ ಯಂಗಳ ಭಾಷೆಲೆ ಬರ‍್ದ್ರೆ ಇನ್ನೂ ತೂಕ ಬತ್ತಿತ್ತು ತಮ್ಮಾ ~!

    ReplyDelete