Tuesday, November 16, 2010

ಮನಸ್ಯಾಕೆ ಹೀಗೆ ?

ಅದ್ಯಾಕೊ ಮನಸ್ಸು ಕೆಲವು ಬದಲಾವಣೆಯನ್ನ ಒಪ್ಪಿಕೊಳ್ಳುವದೆ ಇಲ್ಲ.ಮೊನ್ನೆ ಹೀಗೆ ಅಯ್ತು ಹುಟ್ಟಿದ ಮಣ್ಣ ಮೆಟ್ಟಲು ಹೋಗಿದ್ದೆ. ನಾನು ಬಾಲ್ಯ ಕಳೆದ ಮನೆ ಯಾಕೋ ಬದಲಾಗಿಬಿಟ್ಟಿದೆ ಅನಿಸ್ತು.ಮನಸ್ಸಿಗ್ಯಾಕೊ ಬೇಜಾರು, ಥೂ ನೆನಪುಗಳಾದರೂ ಯಾಕೆ ನಮ್ಮಲ್ಲಿ ಮನೆ ಮಾಡ್ಕೊಂಡಿರ್ತವೊ, ಅವು ನೀಡುವ ಹಿಂಸೆ ಅಪಾರ.ಮನೆ ಮೆಟ್ಟಿಲನ್ನ ಹತ್ತಿ ಗೋಡೆಗೆ ನೇತು ಹಕಿದ ನಮ್ಮಮ್ಮನ ಫೊಟೊ ನೋಡಿದ್ರೆ ಮತ್ತೆ ಹಿಂದಿನ ನೆನಪೆಲ್ಲವೂ ಮಗಚಿ ಬಿಡುತ್ತದೆ. ವಯಸ್ಸಾದ ಅಪ್ಪನ ಒಂಟಿತನ ನನ್ನನ್ನ ಯೊಚನೆಗೆ ಸಿಕ್ಕಿಸುತ್ತದೆ. ಹಾಗೆ ಊರ ದಾರಿಯಲ್ಲಿ ನೆಡೆಯ ಬೇಕಾದರೆ ಅಂತಹದೇ ನೆನಪು.ಅಲ್ಲಿ ನಾ ಒಂಟಿಯಾಗಿ ಕುಳಿತು ಆಟ ಆಡುವ ಜಾಗ ಅದ್ಯಾವ್ದೊ ಬುಲ್ಡೊಜರ್ ಹಲ್ಲಿಗೆ ಸಿಕ್ಕಿ ಸಮತಟ್ಟಾಗಿ ಗುರ್ತೂ ಸಿಗದಂತೆ ಅಲ್ಲಿ ಇನ್ನೇನೋ ಮರ್ಪಾಡಾಗಿರ್ತವೆ, ನಾವು ಬಾಲ್ಯದಲ್ಲಿ ಕ್ರಿಕೆಟ್ಟ್ ಆಡುವ ಗದ್ದೆ ಬಯಲಿನಲ್ಲಿ ಅಡಿಕೆ ತೋಟ ಎದ್ದು ನಿಂತು ಇಲ್ಲಿ ಮೊದಲು ಆಟ ಆಡುವಂತ ಬಯಲಿತ್ತಾ ಅಂತ ಅನ್ಸಿಬಿಡುತ್ತೆ.ಅದ್ಯಾಕೋ ಬಾಲ್ಯದ ನೆನಪು ಸುತ್ತುಕೊಳ್ಳ ತೊಡಗುತ್ತೆ. ಬೆಜಾರಾಗೊಲ್ವಾ ಹೀಗಾದಾಗ ಮನಸ್ಸಿಗೆ? ಇಲ್ಲಿ ಅಳುವದಕ್ಕೆ ಆಸ್ಪದನೇ ಇಲ್ವೇನೊ ಅನ್ಸುತ್ತೆ . ಬೇಜಾರನ್ನ ಕೂಡ ಯಾಕೆ ಮಾಡ್ಕೋಬೇಕು.ವಾಸ್ತವೀಕತಯೇ ಹಾಗಲ್ಲವೇ? ಪ್ರಪಂಚ ಇರುವದೆ ಹೀಗೆ, ಬದಲಾವಣೆಯೊಂದೆ ಅದರ ಗುರಿ.ಇಲ್ಲಿ ಜೀವನದ ಬದಲಾವಣೆ ಅನಿವಾರ್ಯ ಅದು ಪ್ರಕೃತಿಯ ನಿಯಮ. ಗಮನಿಸಿ ನೋಡಿ ಇಂದು ಅರಳಿದ ಹೂವೊಂದು ಬಿರಿದು ತಂಪು ಮತ್ತು ಕಂಪನ್ನ ಚೆಲ್ಲಿ ಸುರ್ಯಾಸ್ತದೊಂದಿಗೆ ಬಾಡಿ ಹೋಗುತ್ತದೆ. ಮನುಷ್ಯನ ಜೀವನವೂ ಅಸ್ಟೇ. ಅದು ಅರಳುತ್ತದೆ ಬಾಡಿಹೋಗುತ್ತದೆ. ಜೀವನದ ಗೆಳೇಯರು ಬಂಧುಗಳು,ಸಂಗಾತಿಗಳು, ಅನಾಧರಿಸಿದರು, ಬಿಟ್ಟು ಹೋದರು,ಸ್ಥಳಗಳು ಬದಲಾದವು, ಎನ್ನುವದು ದುಖ:ದ ವಿಷಯ ಹೌದಾದರೂ ಕುಲಂಕುಶವಾಗಿ ಪರಿಶೀಲಿಸಿ ನೋಡಿದರೆ ನಮಗೆ ಅದು ಸಹಜವಾಗಿ ಗೋಚರಿಸೀತು.ಬೆಳೆಯುವ ಮಗುವಾಗಿದ್ದಾಗ ಅಪ್ಪ ಅಮ್ಮನ ಮೈಯನ್ನ ಎಷ್ಟು ದಿನಾ ಅಂತ ಅಪ್ಪುವದು. ಅದೂ ಬದಲಾವಣೆಯನ್ನ ಬೇಡುತ್ತದಲ್ಲವೇ? ದಿನಕಳೆದಂತೆ ಸ್ಥಾನವನ್ನ ನಮ್ಮ ತಮ್ಮನೋ ತಂಗಿಯೋ ಅಕ್ರಮಿಸಿರುತ್ತಾರೆ. ಆಡುವ ಜೊತೆಗಾರರು ಬೆಳೆಯುವ ನೆಪದಲ್ಲಿ ದೂರ ಸರಿಯುತ್ತಾರೆ.ಮತ್ತೆ ಆಟದ ಅಂಗಳವ್ಯಾಕೋ ಬದಲಾವಣೆಯನ್ನ ಬಯಸುತ್ತದೆ. ಅಲ್ಲಿ ನಮ್ಮ ತಮ್ಮಂದಿರು ತಂಗಿಯರು ಕುಣಿಯುತ್ತಿರುತ್ತಾರೆ, ಕೋರಳ ಗೆಳತಿಯ ಸನಿಹವನ್ನ ಅವಳ ಗಂಡ ನಮ್ಮಿಂದ ಕಸಿದು ಕೊಂಡಿರುತ್ತಾನೆ. ಹಸಿದ ಜೀವಕ್ಕೆ ತಂಪನೀಯುವ ಗೆಳೆಯನ ಮನೆಯಲ್ಲಿ ಹೊಸ ಗೂಡ ನೇಯುವ ಹಕ್ಕಿಯೊಂದು ಬಂದು ಕುಳಿತಿರುತ್ತದೆ, ನಗೆಯುವ ಕರು ತಾಯಿಯಾಗಿ ತನ್ನ ನಗೆಯುವ ಕರುವಿನ ತಲೆಯನ್ನ ನೆಕ್ಕುತ್ತಿರುತ್ತದೆ.ಮೋಹಕ ಕಪ್ಪು ಕೂದಲು ಇತ್ತೀಚಿನ ದಿನಗಳಲ್ಲಿ ಯಾಕೋ ಬಣ್ಣವನ್ನ ಕೇಳುತ್ತಿರುತ್ತದೆ. ಚಿಗುರುವ ಮೀಸೆಯು ಮೃಧುತ್ವವನ್ನ ಬಿಟ್ಟು ಗಟ್ಟಿಯ ಕೊರಡಾಗುತ್ತದೆ. ಕಾಲವು ಬದಲಾಗುತ್ತದೆ. ಹರಿಯುವ ನದಿ ಸಾಗರವನ್ನ ಸೇರಿ ಮಳೆಯಾಗಿ ಮತ್ತೆ ಹರಿದು ಒಂದಾಗಿ ಮತ್ತೆ ನದಿಯಾಗಿ ಜಲಪಾತವಾಗಿ ಹರಿದು ಸಾಗರದೊಟ್ಟಿಗೆ ಲೀನವಾಗಿ ತನ್ನ ಅಸ್ತಿತ್ವವನ್ನೂ ಗುರುತಿಸಿಕೋಳ್ಳಲಾರದಷ್ಟು ಬದಲಾಗಿರುತ್ತದೆ. ಹೂಂ ಬದಲಾವಣೆಯನ್ನ ಒಪ್ಪಿಕೊಳ್ಳ ಬೇಕೆ ಹೊರತು ಚಿಂತಿಸುವದು ತರವಲ್ಲ.ಆದರೂ ಅದ್ಯಾಕೊ ಮನಸ್ಸು ಕೆಲವು ಬದಲಾವಣೆಯನ್ನ ಒಪ್ಪಿಕೊಳ್ಳುವದೆ ಇಲ್ಲ....


3 comments:

  1. ಅದ್ಯಾಕೆ ಮನಸ್ಸು ಹೀಗೆ..... ನಂಗೂ ಗೊತ್ತಿಲ್ಲ .... ಗೊತ್ತೂ ಆಗಲ್ಲ ಅನ್ಸತ್ತೆ

    ReplyDelete
  2. parivarthane jagada niyama...indu namage ada anubhava,,munde berobbarige namminda aste ...

    ReplyDelete
  3. ಬಾಲ್ಯ ಹಾಗೂ ಮನಸ್ಸು ಊರ ತೊರೆದು ನಗರದಲ್ಲಿದ್ದವರನ್ನು ಹೆಚ್ಚು ಕಾಡುತ್ತದೆಯಲ್ಲವೇ..?? ಕಾಡುವ ಭಾವಗಳ ಬರಹ ರೂಪ ಚೆನ್ನಾಗಿದೆ..
    ಕಾಡಿಸುತ್ತಲೆ ಒಪ್ಪಿಸಿಕೊಳ್ಳುವ ಬದಲಾವಣೆ ನಿರಂತರ, ಕಾಡುವ ಕಾರಣದಿಂದಲೇ ಆಪ್ತವಾಗುವ ಸಂಗತಿಗಳು ಇವು...

    ReplyDelete