Wednesday, December 15, 2010

ಪ್ರೀತಿಸಿ ಕೈಕೊಡುವದಿದ್ದರೆ ಮೊದಲೇ ಹೇಳಿಬಿಡು



ಕಾಡಿಸಿ ಕಾಡಿಸಿ ಕೊಲಬೇಡ ಒಮ್ಮೆ ಹೇಳು ಗೆಳತಿ ನಾ ಇಷ್ಟವೆಂದು
ಮನಸಿನ ಅಂಗಳದಲ್ಲೇ ಬಚ್ಚಿಡಬೇಡ ನಿನ್ನಾಸೆಯ ಒಮ್ಮೆ ಹೇಳಿಬಿಡು
ದೂರಕೆ ದೂರಕೆ ಸರಿಯಬೇಡ ಒಮ್ಮೆ ಹತ್ತಿರ ಬಂದು ಅಪ್ಪಿಬಿಡು
ಇರಲಾಗದು ನಿನ್ನ ಬಿಟ್ಟು ಹೇಳಿದ ನನ್ನ ಒಮ್ಮೆ ಮೆಚ್ಚಿಬಿಡು
ಕತ್ತಲಲ್ಲೂ ಕಯ್ಯಹಿಡಿದು ಬೇಳಕೊಮ್ಮೆ ತೋರಿಬಿಡು
ಉಕ್ಕಿ ಹರಿವ ದುಖ:ಗಳಿಗೆ ಅತ್ತುಬಿಡಲು ನಿನ್ನ ಮಡಿಲನ್ನ ಕೊಟ್ಟುಬಿಡು
ತಂಗಾಳಿಬೀಸೆ ಒಮ್ಮೆ ಚಳಿ ಏರುತಿರಲು ನಿನ್ನ ಸೆರಗೊಮ್ಮೆ ನನಗೆ ಹೊದಿಸಿಬಿಡು
ಉಣ್ಣಲಾರೆನು ತುತ್ತು ಅನ್ನ ನಿನ್ನ ಕೈಯ್ಯಾರೆ ನನಗೆ ಉಣಿಸಿಬಿಡು
ನಡೆಯಲಾರೆ ಮುಂದೆ ನಾನು ಒಮ್ಮೆ ನನ್ನ ಕೈಹಿಡಿದು ನಡೆಸಿಬಿಡು
ಸಹಿಸಲಾರೆ ವಿರಹವೇದನೆ ಬಂದು ಒಮ್ಮೆ ಚುಂಬಿಸಿ ಮುದ್ದಿಸಿ ಬಿಡು
ನಾ ಮರವಾಗಿ ನೀ ಬಳ್ಳಿಯಾಗಿ ಬುಡದಿಂದ ತಲೆಯವರೆಗೂ ಹಬ್ಬಿಬಿಡು
ಹೀಗೆ ಕವನಿಸುತ್ತಿರುವಾಗ ನನ್ನ ಶಬ್ಧಗಳಿಗೆ ಒಮ್ಮೆ ಕಿವಿಯಾಗಿ ಕೇಳಿಬಿಡು
ಆದರೆ ಪ್ರೀತಿಸಿ ಕೈಕೊಡುವದಿದ್ದರೆ ಮೊದಲೇ ಹೇಳಿಬಿಡು.................

3 comments:

  1. Words born like they are breathing.............
    Even I will request her,- pls love him, he is a good poor boy.

    ReplyDelete
  2. ಸೊಗಸಾದ ಸಾಲುಗಳು...!

    ಹೃದಯಾಂತರಾಳದಿಂದ ಬರೆದಂತಿದೆ...

    ReplyDelete