Saturday, December 18, 2010

ಮರ್ಕಟ್" ಅವರಿಂದ ಮರದ ಸಂದರ್ಶನ


ಕುಖ್ಯಾತ ಸಂದರ್ಶಕ ಕರ್ನಾಟಕದ ಕರಣ್ ಥಾಪರ್ "ಮರ್ಕಟ್" ಅವರಿಂದ ಮರದ ಸಂದರ್ಶನ............


ಮರ್ಕಟ್ : ಹೇಗಿದ್ದೀರಿ ನಿಮ್ಮ ಪರಿವಾರದವರು ಹ್ಯಾಗಿದ್ದಾರೆ.........?

ಮರ : ಪರ್ವಾಗಿಲ್ಲ ಸ್ವಾಮಿ ಸೌಖ್ಯವಾಗಿದ್ದೀವಿ ............ಅದ್ಕೆ ಅಲ್ವಾ ನೀವು ಇನ್ನೂ
ಉಸ್ರಾಡ್ತಿರೋದು.
ಮರ್ಕಟ್ : ಇತ್ತೀಚೆಗೆ ನಿಮ್ಮ ಸಂಖ್ಯೆ ಕಡಿಮೆ ಆಗ್ತಿದೆಯಂತಲ್ಲ?

ಮರ : ಹೌದು........ ಇತ್ತೀಚೆಗೆ ನಮ್ಮ ಸಂಖ್ಯೆ ಕಡ್ಮೆ ಆಗ್ತಿದೆ.
ಯೇನ್ ಮಾಡೋಣ ಸ್ವಾಮೀ ನೀವು ನಮ್ಮ ಮೇಲೆ ಸಂತಾನ ಮರಣ
ಕಾನೂನನ್ನ ಜಾರಿಗೊಳಿಸಿದ್ದೀರಲ್ಲ.........

ಮರ್ಕಟ್ : ನೀವು ಒಂದು ಸಂಗ ಮಾಡ್ಕೊಂಡು ಯಾಕೆ ಚಳುವಳಿ ಮಾಡ್ಬಾರ್ದು?

ಮರ : -ಯೇನ್ ಮಾಡೋಣ ಸ್ವಾಮಿ ನಾವು ಸಂಗ ಮಾಡ್ಕೊಂಡು ಚಳುವಳಿ ಆರಂಭಿಸೋಣ
ಅಂತಿದ್ವಿ,ಆದ್ರೆ ಹಾಳಾದ ನೀವ್ಗಳು ನಮ್ಮನ್ನ ಒಗ್ಗಟ್ಟಿಂದ ಇರೋಕೆ ಬಿಟ್ರೆ ತಾನೆ?
ನಾವು ಗುಂಪು ಕೂಡಿದಕೂಡ್ಲೇ ನಮ್ಮನ್ನ ಕತ್ರ್ಸಿ ಹಾಕ್ತೀರಿ.

ಮರ್ಕಟ್ : ನಿಮ್ಮ ಹೆಸ್ರು ಹೇಳ್ಕಂಡು ಯಾರ್ಯಾರೋ ಹೆಸ್ರು ಮಾಡ್ತಿದಾರೆ ?

ಮರ : ಹಾ ಇತ್ತೀಚೆಗೆ ನಮ್ಮ ಹೆಸ್ರು ಹೇಳ್ಕಂಡು ಜನ ಹೆಸ್ರು ಮಾಡ್ತಿದಾರೆ,ಅವ್ರಿಗೆ ನಿಜ್ವಾಗ್ಲು
ಕಳಕಳಿ ಇದ್ರೆ ಭಾಷಣ ಮಾಡೋದ್ಬಿಟ್ಟು ಎರ್ಡು ಗಿಡಾ ನೆಡ್ತಿದ್ರು...............

ಮರ್ಕಟ್ : ನಿಮ್ಮ ಆರೋಗ್ಯದ ಗುಟ್ಟು ?

ಮರ : ನಾವು ಮಣ್ಣು ತಿಂತೀವಿ ಅದ್ಕೆ ಆರೋಗ್ಯ ವಾಗಿರೋದು.
ಮರ್ಕಟ್ : ಹಾಗಾದ್ರೆ ನಮ್ಮ ಮುಖ್ಯಮಂತ್ರಿ ಆದಿಯಾಗಿ ಸಚಿವ ಸಂಪುಟದವ್ರು
ಎಲ್ಲ ಮಣ್ಣು ತಿಂದವ್ರೆ.ಆದ್ರೆ ಅವ್ರಿಗೆ ಡಯಾಬಿಟಿಸ್,ಬಿ.ಪಿ,
ಮುಂತಾದ ಕಾಯ್ಲೆ ಬಂದಿದೆಯಲ್ಲಾ?

ಮರ : ಹಾಗಲ್ಲ ಸ್ವಾಮಿ ನಾವು ಮಣ್ಣು ತಿಂದು ನೀರು ಕುಡಿತೀವಿ. ಆದ್ರೆ ಅವ್ರು ಮಣ್ಣು ತಿಂದು
ಬೀರು ಕುಡಿತಾರೆ ಅದ್ಕೆ ಅವ್ರ ಅರೋಗ್ಯ ಸರಿಯಿಲ್ಲ.

ಮರ್ಕಟ್ : ಆದರೂ ನೀವು ಮಾತಾಡೋದ್ ಕಡ್ಮೇನೆ ಬಿಡಿ............

ಮರ : ಇಲ್ಲ ನಾವು ಮಾತಾಡೋದಿಲ್ಲ.ನಮ್ಮ ಬಗ್ಗೆ ಮಾತಾಡೋಕೆ
ಅಂತಲೇ ಪರಿಸರ ವಾದಿಗಳನ್ನ ಇತ್ಕಂಡಿದೀವಿ ..............

ಮರ್ಕಟ್ : ಜಾತಿ ಒಗ್ಗಟ್ಟು ಇಲ್ವಂತೆ ನಿಮ್ಮಲ್ಲಿ?

ಮರ : ಯಾರು ಹಾಗೆ ಹೇಳಿದ್ದು ನಾವು ಮೊದ್ಲು ಕಾಡಲ್ಲಿ ಒಂದೇ ಅಗಿದ್ವ.ಆದ್ರೆ ಈಗಿತ್ಲಾಗೆ ಜನ
ನಮ್ಮನ್ನ ಜಾತಿ ಅದಾರದಮೇಲೆ ನೆಡೋಕೆ ಶುರು ಮಾಡಿದಾರೆ.

ಮರ್ಕಟ್ : ಮದ್ವೆ ಆಗೋಲ್ವಾ ?

ಮರ : ನಿಮ್ಮಹಾಗೆ ನಮಗ್ಯಾಕೆ ಬೇಕ್ರೀ ಮದ್ವೆ ನಾವು ಮದ್ವೆ ಆಗದೆ
ಮಕ್ಳು ಆಗೋತರ ವರ ಪಡ್ದಿದೀವಿ.............

ಮರ್ಕಟ್ : ಅದ್ರೂ ನಿಮ್ಮ ಮುಂದೆ ಲವ್ವರ್ಸ್ ಕಿಸ್ ಮಾಡುವಾಗ ನಾಚ್ಕೆ ಆಗೋಲ್ವ?

ಮರ : ಯೇನ್ ಮಾಡೋಣ ಸಾರ್ ಲವ್ ಮಾಡೋದು ಮರದ ಕೆಳ್ಗೆ ಆದ್ರೂ ಮದ್ವೆ
ಮಾತ್ರ ಚೌಟ್ರಿಯಲ್ಲಿ ಯಾಕೆ ಆಗ್ತಾರೊ ನಂಗೊತ್ತಿಲ್ಲ!

ಮರ್ಕಟ್ : ಆಗಾಗ ಅಲ್ಲಲ್ಲಿ ಕಾಡಿನಲ್ಲಿ ಬೆಂಕಿ ಬೀಳ್ತಾ ಇರುತ್ತಲ್ಲ?

ಮರ : ಹ.......... ನಮ್ಮವ್ರು ಆಗಾಗ ಬೀಡಿ ಸೇದುವಾಗ ಅನಾಹುತ ಮಾಡ್ಕಾತಾರೆ..........

ಮರ್ಕಟ್ : ಆಣೆಕಟ್ಟಿನಿಂದ ಮುಳುಗಡೆ ಆಗ್ತಿರೋ ನಿಮ್ಮ ಕುಲದವರ ಬಗ್ಗೆ ಕನಿಕರ ಅನ್ಸೊಲ್ವಾ?

ಮರ : ಅನ್ಸೊತ್ತೆ...... ನಮಗ್ಯಾಕೆ ಮುಳ್ಗದವರ ಸುದ್ಧಿ....
ಕರ್ನಾಟಕದಲ್ಲಿ ರಾಜ್ಕೀಯಾನೇ ಮುಳ್ಗಡೆ ಅಗಿದೆ ಜನ ತಲೆ ಕೆಡ್ಸಿಕೊಂಡ್ರಾ?

ಮರ್ಕಟ್ : ಚುಟುಕು ಪ್ರಶ್ನೆ ಕೆಳಲಾ ?

ಮರ : ಕೇಳಿ................ ಆದ್ರೆ ಪ್ರಶ್ನೆ ಕೇಳೋದೆ ಚಟ ಮಾಡ್ಕೋಬೇಡಿ.

ಮರ್ಕಟ್ : ಮುಖ್ಯಮಂತ್ರಿ ಆದ್ರೆ?

ಮರ : ಪ್ರತಿಪಕ್ಷದಲ್ಲಿ ಕಲ್ಲು ಮಣ್ಣು ಗಳಿರ್ತವೆ.

ಮರ್ಕಟ್ : ಆಕೇಸಿಯ ಮರದಬಗ್ಗೆ?

ಮರ : ಅವು ಇಂಡಿಯಾದಲ್ಲಿ MNC ಕಂಪನಿಗಳ ಹಾಗೆ.

ಮರ್ಕಟ್ : ನಿಮಗೆ ನೋವು ತಂದ ವಿಚಾರ?

ಮರ : ಗಂಡನಿಗೆ ಹೊಡಿವಾಗ ಹೆಂಡತಿ ಮರದ ಲಟ್ಟಣಿಗೆ ಬಳಸುವದು.

ಮರ್ಕಟ್ : ಅಭಿಮಾನಿಗಳಿಗೆ ಕೋನೆಯದಾಗಿ ಮಾತು.............

ಮರ : ನನ್ನನ್ನ ಎಲ್ಲರೂ ಎಲ್ಲದರಲ್ಲೂ ಬಳಸಿಕೊಂಡ್ರಿ, ಚಪ್ಲಿನೂ ಮಾಡಿ ಹಾಕೊಂಡ್ರಿ.
ಆದ್ರೆ ನನ್ನ ಚಪ್ಲಿಹಾಕೊಂಡೋರು ಯಾರೂ
ಯಾವ ಪಕ್ಷ ವಹಿಸಿ ಮಾತಾಡಬೇಡಿ .............ಪ್ಲೀಸ್

1 comment:

  1. ಗಿರಿಯವರೇ ತುಂಬಾ ಚೆನ್ನಾಗಿದೆ ಈ ಸಂದರ್ಶನ :-)

    ReplyDelete