Tuesday, January 4, 2011

ಮಾಯದಾ ಕತ್ತಲೆಯಲಿ ನನಗೆ ಬೆಳಕ ಹುಡುಕುವ ಭ್ರಮೆಯು

ಬರಿದೆ ಈ ಜೀವನ ಯಾತ್ರೆ
ಹೊರಟಿದ್ದೆಲ್ಲಿಂದೋ ಗೊತ್ತಿಲ್ಲ
ಮುಂದೇನೆಂದು ತಿಳಿಯದ ಈ ಮೋಹ
ಹಿಂದೇನೆಂಬುದ ತಿಳಿಸದ ಈ ಮಾಯೆ

ನಿನ್ನೆ ಇಲ್ಲದ ನಾಳೆ ಇರದ  ಈ ಜೀವ
ತಾನೇ ತಾನೆಂದು ಓಡುವ
ಗೊತ್ತು ಗುರಿಯಿಲ್ಲದೆ ಅಲೆಯುವ
ಸಾಶ್ವತ  ಭ್ರಮೆಯಲ್ಲಿ ತೇಲುವ
ದಡವಿಲ್ಲಿ ಬುಡವಿಲ್ಲಿ ಆದರೂ ಎಲ್ಲಿಗೋ ಪಯಣ

ಗೊತ್ತಿಲ್ಲಿ ಯಾವುದೂ ಅರ್ಥವಿಲ್ಲದ್ದು 
ಬಂಧ ಪ್ರತಿಬಂಧ ಸಂಬಂಧ ಯಾವುದೂ ಇಲ್ಲ
ಗೊತ್ತಿದ್ದೂ ಗೊತ್ತಿದ್ದೂ ಮತ್ತದೇ ಮರವು
ಆದರೂ ಸುತ್ತಿಕೊಳ್ಳುವ ನಾನು ನನ್ನದು ಬಂಧ ಪ್ರತಿಬಂಧ ಸಂಬಂಧ
ಮಾಯದಾ ಕತ್ತಲೆಯಲಿ ನನಗೆ ಬೆಳಕ ಹುಡುಕುವ ಭ್ರಮೆಯು

No comments:

Post a Comment