Monday, February 14, 2011

ನೀಲ ಸಮಯ ನೀರಿನಲ್ಲಿ ಅಲೆಯು ಎದ್ದಿದೆ

Blue Hour Waves


ನೀಲ ಸಮಯ ನೀರಿನಲ್ಲಿ ಅಲೆಯು ಎದ್ದಿದೆ
ಅಲೆಯು ಎದ್ದು ನೀರಿನಲ್ಲಿ ತರಂಗವಾಗಿದೆ
ಅಂತರಂಗ ಮಸುಕಿನಲ್ಲಿ ಪ್ರಶಾಂತವಾಗಿದೆ
ಅಲೆಯು ಮೆಲ್ಲ ಮೆಲ್ಲ ಕೊಳದಿ ಜಲತರಂಗವಾಗಿದೆ

ಸುತ್ತಿ ಸುತ್ತಿ ದೂರಸರಿವ ಅಲೆಯು ಕೊಳದಲಿ
ಮತ್ತೆ ಮತ್ತೆ ಏರಿಬರುವ ನೆನಪು ಮನದಲಿ
ಪ್ರಶಾಂತದಲ್ಲಿ ಎದ್ದ ಅಲೆಯು ಸುರುಳಿಯಾಗುತ
ಮನಸಿನಲ್ಲಿ ಬರುವ ಚಿತ್ರ ರೂಪತಾಳುತ

ಜೀವನದ ನೆನಪುಗಳಿಗೆ ಅಲೆಯೇ ಮಾದರಿ
ಉಕ್ಕಿ ಬರುವ ಭಾವಲಹರಿ ತೆರೆಯ ತರದಲಿ
ಎದ್ದ ಅಲೆಯು ನೀರಿನಲ್ಲಿ ಲೀನವಾಗಲು
ಬಿಚ್ಚಿಕೊಂಡ ನೆನಪು ಒಮ್ಮೆ ದೂರಸರಿವುದು




ದಿಗ್ವಾಸ್ ಹೆಗಡೆಯವರ ಚಿತ್ರವನ್ನ ನೋಡಿ ಹೀಗೆ ಮನಸ್ಸಿಗೆ ಬಂದದ್ದನ್ನ ನಿಮಗೆ ಹೇಳಿದ್ದೇನೆ 
(ಓತಪ್ರೋತವಾದ ಈ ಕವನನ್ನ ಓದುವ ಕಷ್ಟನಿಮ್ಮದು) 

25 comments:

  1. ಜೀವನದ ನೆನಪುಗಳಿಗೆ ಅಲೆಯೇ ಮಾದರಿ
    ಉಕ್ಕಿ ಬರುವ ಭಾವಲಹರಿ ತೆರೆಯ ತರದಲಿ....
    ಇಷ್ಟವಾಯಿತು

    ReplyDelete
  2. ದಿಗ್ವಾಸ ಹೆಗಡೆಯವರ ಫೋಟೋಗಳನ್ನು ನೋಡಿದಾಗ ಅವರ ವಿಶಿಷ್ಟ ಸಾಮರ್ಥ್ಯವನ್ನು ಕಂಡು ಬೆರಗಾಗುತ್ತೇನೆ. ಅವರ ಚಿತ್ರಕ್ಕೆ ತಕ್ಕ ಕವನವನ್ನು ರಚಿಸಿದ್ದೀರಿ.

    ReplyDelete
  3. va va.... chandada chitrakke.. andada kavana.. istavaytu..

    ReplyDelete
  4. "ಜೀವನದ ನೆನಪುಗಳಿಗೆ ಅಲೆಯೇ ಮಾದರಿ
    ಉಕ್ಕಿ ಬರುವ ಭಾವಲಹರಿ ತೆರೆಯ ತರದಲಿ
    ಎದ್ದ ಅಲೆಯು ನೀರಿನಲ್ಲಿ ಲೀನವಾಗಲು
    ಬಿಚ್ಚಿಕೊಂಡ ನೆನಪು ಒಮ್ಮೆ ದೂರಸರಿವುದು"

    - ಈ ಸಾಲುಗಳು ತುಂಬಾ ಇಷ್ಟವಾದವು :)

    ReplyDelete
  5. ಗದ್ಯದ ಸಾಲುಗಳು ಚಂದ ಉಂಟು ಮಾರಾಯ್ರೇ ...

    ReplyDelete
  6. @ದಿಗ್ವಾಸ್ ಅಣ್ಣಯ್ಯ ಕವನ ಮೆಚ್ಚಿದ್ದಕ್ಕೆ ಧನ್ಯವಾದ. ನೀನು ಮೆಚ್ಚಿದ ಸಾಲು ಹುಟ್ಟಲು ನಿನ್ನ ಚಿತ್ರವೇ ಕಾರಣ. ನಿನ್ನ ಚಿತ್ರ ಸಾವಿರ ಭಾವನೆಗಳ ಮಜಲನ್ನ ಹೆಣೆಯುತ್ತದೆ. ಜೈ ಪರಾಕ್ ನಿನ್ನ ಚಿತ್ರಗಳಿಗೆ. ಹಿಂದಿರುವ ನಿನ್ನ ಕಣ್ಣುಗಳಿಗೆ. ಅಲ್ಲ ನಿನ್ನ ಕೈಗಳಿಗೆ. ಉಹೂಂ ನಿನ್ನ ಅದ್ಭುತ ಕಲೆಗಾರಿಕೆಗೆ.

    ReplyDelete
  7. @ಅಣ್ಣ ಉದಯ.... ಗುರು ನೀನು ......... ಧನ್ಯವಾದವನ್ನ ಹೇಳಲಾರೆ ....... ಜೈ ಗುರುಜಿ

    ReplyDelete
  8. ಕವನ ಚೆನ್ನಾಗಿದೆ ಮಹಾಬಲರವರೆ.. ಅಲೆಗಳಿಗೆ ನೆನಪುಗಳನ್ನು ಹೋಲಿಸಿದ ರೀತಿ ಚೆನ್ನಾಗಿದೆ.

    ReplyDelete
  9. @ಸುನಾಥ್ ಸರ್ ನಿಮಗೆ ಧನ್ಯವಾದ. ದಿಗ್ವಾಸ್ ಹೆಗ್ಡೆಯವರ ಚಿತ್ರ ಮೂಕನನ್ನೂ ಮಾತಾಡುವಂತೆ ಮಾಡುವ ಶಕ್ತಿಯನ್ನ ಹೊಂದಿದೆ ಅಲ್ಲವೇ?ಆದರೆ ನನ್ನ ಬಾಲಿಶ ಮಾತುಗಳನ್ನ ಮೆಚ್ಚಿ ಪ್ರೋತ್ಸಾಹಿಸುತ್ತಿರುವ ನಿಮಗೆ ನೂರು ನಮನಗಳು

    ReplyDelete
  10. @'A-NIL' - ಅನಿಲ್ ಅವರೇ ನನ್ನ ಬ್ಲಾಗಿಗೆ ನಿಮಗೆ ಸುಸ್ವಾಗತ ನಿಮ್ಮ ಪ್ರೋತ್ಸಾಹಕ್ಕೆ ಋಣಿಯಾಗಿದ್ದೇನೆ.

    ReplyDelete
  11. @ಮನಮುಕ್ತಾ ನಿಮಗೆ ಸ್ವಾಗತ . ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

    ReplyDelete
  12. @UMESH VASHIST H K.-ಸರ್ ನಿಮಗೆ ಧನ್ಯವಾದ. ಸ್ವಾಗತ......ಗದ್ಯ ಅಂತ ಹೇಳಿದ್ದೀರಿ ಅದನ್ನ ನಾನು ಪದ್ಯ ಅಂತ ತಿಳಿದು ಓದುಕೊಂಡೆ ಸರಿಯಷ್ಟೇ?

    ReplyDelete
  13. @Pradeep Rao- ನಿಮಗೆ ನನ್ನ ಬ್ಲಾಗ್ ಗೆ ಸ್ವಾಗತ ಮತ್ತು ಧನ್ಯವಾದ.. ನೀರನ ಅಲೆಗಳೇ ಹಾಗೆ ಸಾವಿರ ಭಾವನೆಯನ್ನ ಉಕ್ಕಿಸುತ್ತದೆ ಅಲ್ಲವೇ? ಅಂತಹ ಅಲೆಗಳ ಚಿತ್ರಲಹರಿಯ ಕೊಟ್ಟ ಹೆಗಡೆಯವರಿಗೆ ಈ ಕ್ರೆಡಿಟ್ ಹೋಗಬೇಕು.

    ReplyDelete
  14. ಕವನ ತುಂಬ ಚೆನ್ನಾಗಿದೆ. it has a nice tempo. ಹಾಡಿಗೆ ಹಾಕಬಹುದು ಅನ್ನಿಸುತ್ತೆ
    read ಜೀವಾತ್ಮನಾಲೇ ಅಡಗಿ.....thats also good. both the pics r super!!!

    ReplyDelete
  15. sorry”ಹಾಡಿಗೆ ಹಾಕಬಹುದು’ ಕ್ಕಿಂತ ’ಅಳವಡಿಸಬಹುದು’ is a better term ಅಲ್ಲವಾ??kindly excuse my kannada
    :-)
    malathi S

    ReplyDelete
  16. @malathi madam

    ಧನ್ಯವಾದ ನೀವು ಹೇಳಿದಂತೆ ಹಾಡಿಗೆ ಅಳವಡಿಸಬಹುದೇನೊ.......
    ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಆಭಾರಿಯಾಗಿದ್ದೇನೆ

    ReplyDelete
  17. ಸುತ್ತಿ ಸುತ್ತಿ ದೂರಸರಿವ ಅಲೆಯು ಕೊಳದಲಿ
    ಮತ್ತೆ ಮತ್ತೆ ಏರಿಬರುವ ನೆನಪು ಮನದಲಿ


    ಯಾವಾಗಲೂ ನೆನಪಿಗೆ ಬರುವ ಸಾಲುಗಳು ...

    ಆದರೆ ಭಾವ ಉತ್ಪ್ರೇಕದ ಬದಲು ,ಭಾವಪುಳಕಗೊಂಡೆ ಅಷ್ಟೆ!!!!
    http://chinmaysbhat.blogspot.com

    ReplyDelete
  18. ಗೇಯತೆಯ ಗುಣವನ್ನು ಹೊ೦ದಿರುವ ಸು೦ದರ ಪ್ರಾಸಬದ್ದ ಕವನ ಸೊಗಸಾಗಿ ಮೂಡಿಬ೦ದಿದೆ. ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

    ReplyDelete
  19. @shridhar&ಚಿನ್ಮಯ ಭಟ್ & prabhamani nagaraja,ಎಲ್ಲರಿಗೂ ಸ್ವಾಗತ ಮತ್ತು ಧನ್ಯವಾದ ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ........ಧನ್ಯವಾದ

    ReplyDelete
  20. ಇವತ್ತಿನ ದಿನಗಳಲ್ಲಿ ಗೇಯಗೀತೆಗಳನ್ನು ಬರೆಯುವ ಗೋಜಿಗೆ ಬಹಳಜನ ಹೋಗುವುದಿಲ್ಲ, ಕವನದಲ್ಲಿ ಪ್ರಾಸಕ್ಕಾಗಿ ತಡಕಾಡಿದರೂ ಚಿತ್ರಕ್ಕೆ ಅರ್ಥನೀಡುವ ಕವನ ಹೊರಬಂದಿದೆ, ಶುಭಾಶಯಗಳು.

    ReplyDelete
  21. Kavana ista aitu, ella saalugalu arthapurnavaagive....

    ReplyDelete
  22. ಸ್ಪೂರ್ತಿ ತುಂಬಿದ ಎಲ್ಲರಿಗೂ ಧನ್ಯವಾದಗಳು

    ReplyDelete
  23. ಸುತ್ತಿ ಸುತ್ತಿ ದೂರಸರಿವ ಅಲೆಯು ಕೊಳದಲಿ
    ಮತ್ತೆ ಮತ್ತೆ ಏರಿಬರುವ ನೆನಪು ಮನದಲಿ
    ಒಳ್ಳೆಯ ಸಾಲುಗಳು...
    ಜೀವನದ ನೆನಪುಗಳಿಗೆ ಅಲೆಯೇ ಮಾದರಿ
    ಉಕ್ಕಿ ಬರುವ ಭಾವಲಹರಿ ತೆರೆಯ ತರದಲಿ
    ಈ ಸಾಲುಗಳು ಇಷ್ಟವಾದವು...

    ReplyDelete