ಬಾನಾಡಿ ಬಾನಿನಲಿ ಭಾನುವಿನ ಮುಂದೆ
ಹಾರುತಿದೆ ನೋಡಲ್ಲಿ ಮುಂದೆ ಮುಂದೆ
ಗೂಡುಸೇರುವ ತವಕ ಮುಸ್ಸಂಜೆಯ ಪುಳಕ
ಹಾರಬೇಕಾಗಿದೆ ನಿಲುಗಡೆ ಸಿಗುವ ತನಕ
ಧಿವಾಕರನು ನಯವಾಗಿ ಕೆಂಪು ಗೋಲಕವಾಗಿ
ಸಂಧ್ಯಾ ಸಮಯದಿ ಶರಧಿಯೊಳು ಮುಳುಗತ್ತಲಿರಲು
ಭಾನುವೆದುರಲಿ ವಿಹಗ ಹಾರುತಿರುವದ ನೋಡಿ
ಮೂಡಿದವು ದೃಶ್ಯಗಳು ಚಿತ್ರಪಟದಲಿ ಸುಚಿತ್ರವಾಗಿ
ಇಂತಹ ಚಿತ್ರಗಳ ಮುಂದೆ ಮಾತು ಸೋಲುತ್ತದೆ.
ಅಂತಹ ಚಿತ್ರವನ್ನ ಕೊಟ್ಟ ಅಣ್ಣ ದಿಗ್ವಾಸ್ ಹೆಗ್ಡೆಯವರಿಗೆ ಧನ್ಯವಾದ.
(http://chithrapata.blogspot.com)
Chikka, chokka sundara saalugalu...innu munduvarisabahudittu...But Nice...
ReplyDeleteಚಿತ್ರಕ್ಕೆ ಸಮಂಜಸವಾದ ಕವನವನ್ನು ಬರೆದಿದ್ದೀರಿ.
ReplyDeleteಮಹಾಬಲ...
ReplyDeleteಸೊಗಸಾದ ಫೋಟೊಕ್ಕೆ...
ಅತ್ಯುತ್ತಮ ಕವನ....
ಅಭಿನಂದನೆಗಳು... ಜೈ ಹೋ !!
ಹಾರುತಿದೆ ಬಾನಿನಲಿ,
ReplyDeleteಗರಿಬಿಚ್ಚಿ ಸಿರಿಹಕ್ಕಿ,ಯಾರಿಗೂ ಮುಖತೋರಿಸದೇ...
ಯಾರಿಗೆ ಗೊತ್ತು,ಹೋಗುತಿರಬಹುದು
ತನ್ನವರಿಗೇ ಬೇಗ ಮುಖ ತೋರಿಸಲೆಂದೇ..
ಬಲುದೂರ ಸಾಗರದಿ ಹುಟ್ಟಿದ ರವಿ,
ಜಗವೆಲ್ಲ ನೋಡಿ,ತಿರುಗಿ ಹೊರಟಾಯ್ತು.
ಮುಂಜಾನೆ ಗರಿ ಬಿಚ್ಚಿ ಹಾರಿದ ಹಕ್ಕಿ,
ತನ್ನವರ ನೋಡಲು ವಾಪಸ್ಸು ಹೊರಟಾಯ್ತು.
ನಾನೂ ನಿಮ್ಮ ಚಿತ್ರ-ಕವಿತೆ ನೋಡಿ
ಖುಷಿಪಟ್ಟಿದ್ದಾಯ್ತು.
ಸರಿ,ಬನ್ನಿ ನಮ್ಮನೆಗೂ,ನಾ ಹೊರಡುವೆ ಇನ್ನು,
ನಂಗೆ ಕ್ಲಾಸಿಗೆ ಹೊತ್ತಾಯ್ತು!!!!!
shisya... adellitidyo ninna shabda bhandarana....
ReplyDeletevery good... i like it... :):)
ohohoho....kannada bhandarane hakki hekki tegadyalo.....mast ana...
ReplyDeleteಸ್ಪೂರ್ತಿ ತುಂಬಿದ ಎಲ್ಲರಿಗೂ ಧನ್ಯವಾದಗಳು
ReplyDelete