Sunday, March 20, 2011

ಮೆಲ್ಲ ಮೆಲ್ಲನೆ ಗಾಳಿ ತೂರಲು ಮೇಲ ಮೇಲಕೆ ಹಾರುವೆ





ಮೆಲ್ಲ ಮೆಲ್ಲನೆ ಗಾಳಿ ತೂರಲು ಮೇಲ ಮೇಲಕೆ ಹಾರುವೆ
ಗಿರಕಿ ಹೊಡೆದು ಬಾನ ಪಥದಲಿ ಸುತ್ತು ಸುತ್ತುತ ತೇಲುವೆ 
ಹಕ್ಕಿ ಪುಕ್ಕವೆ ಸೊಕ್ಕು ಎಷ್ಟಿದೆ ಹಿಡಿಯ ಹೋದರೆ ಜಾರುವೆ
ಭಾರವಿಲ್ಲವೂ ಹಗುರ ಹತ್ತಿಯು ಗಾಳಿ ಬಂದೆಡೆ ತೂರುವೆ

ಮನುಜಗಿಲ್ಲಿ ಸಂದೇಶವೂಂದಿದೆ  ನೋಡಿ ಅಂದದ ಚಿತ್ರದಿ 
ಗಾಳಿಬಂದೆಡೆ ತೂರಿಕೊಂಬುದು ಸೃಷ್ಟಿನಿಯಮವು ಜಗದಲಿ
ಹಗುರಮನವು ನಮ್ಮ ಬಳಿಯಿರೆ ತೇಲಬಹುದು ಚಂದದಿ
ಭಾರಹೄದಯವು ಕೆಲಸ ಮಾಡದು ತೇಲಲಾಗದು ಬಯಲಲಿ 


ಚಿತ್ರವನ್ನ ಕರುಣಿಸಿದವರು ದಿಗ್ವಾಸ್ ಹೆಗ್ಡೆ
 http://chithrapata.blogspot.com/

6 comments: