Monday, March 28, 2011

ಹೂ ಎನಗೆ ತಿಳಿಸುವೆಯ ನಿನ್ನ ಸೆಳೆವ ಮೋಹಕ ಗಟ್ಟು



ಸ್ಲಮ್ ಬಾಲೆ

ಕೆರೆಯ ದ೦ಡೆಯಲಿ ಹಸಿರ ಜೊ೦ಡಿನಲಿ
ಕುಸುಮಬಾಲೆಯೇ ನಿನ್ನ ಚೆಲುವಿಕೆ ಅನನ್ಯ
ನೇರಳೆಯ ಬಣ್ಣದಲಿ ಕಾಡುತಿದೆ ಹೊಳಪು
ನವಧುವಿನ೦ತಿಹುದು ನಿನ್ನ ಒನಪು

ಸ್ವಚ್ಛ೦ದ ಪರಿಸರದಿ ಚೆಲುವು ಅರಳುವುದು
ಸ್ನಿಗ್ಧ ಸೌಂದರ್ಯಕೆ ಮನವು ಕೆರಳುವುದು
ನಿನ್ನ೦ದಕಿಲ್ಲಿ ಸಾಟಿ ಯಾವುದೋ ಕಾಣೆ
ಮನಮೊಹಕವು ನಿನ್ನ ಅ೦ದಣದ ಬಣ್ಣ

ಅರಳಿ ಬಾಡುವ ಮುನ್ನ ನಿನ್ನೊಡಲ ಗ೦ಧವನು
ದು೦ಬಿ ಜೇನ್ನೊಣಗಳಿಗೆ ಧಾರೆ ಎರೆವೆ
ದು೦ಬಿಗಳು ಮುತ್ತಿಕ್ಕೆ ನಿನ್ನ ಬದುಕದು ಸಾರ್ಥ
ನಿನಗಿಲ್ಲ ಬೇರಾವ ಇಹದ ಸ್ವಾರ್ಥ


ಅಂದದ ಚಿತ್ರಕ್ಕೆ ಮೇಲಿನ ಕವನವನ್ನ ಬರೆದು ಕೊಟ್ಟವರು ಪರಾಂಜಪೆ ಸರ್ ರವರು. ಅಣ್ಣ ದಿಗ್ವಾಸ್ ಹೆಗ್ಡೆ ಹೂವಿನ ಚಿತ್ರವನ್ನ ಬ್ಲಾಗಿನಲ್ಲಿ  ಬಜ್ ಮತ್ತು ಪೇಸ್ ಬುಕ್ ನಲ್ಲಿ ಹಾಕಿ  ಇದರ ಹೆಸರನ್ನ ತಿಳಿಸಿ ಅಂತ ಕೇಳಿದ್ರು. ಈ ಅನಾಮಿಕ ಹೂವಿಗೆ ನೂತನವಾದ ಹೆಸರನ್ನ ಬಹಳ ತಮಾಷೆಯಾಗಿ ಸೂಚಿಸಿ ಅದಕ್ಕೆ ಒಂದು ಕವನವನ್ನ ರಚಿಸಿ ಕೊಟ್ಟ ಪರಾಂಜಪೆ ಸರ್ ರವರಿಗೆ ಅನಂತ ಕೋಟಿ ನಮನಗಳು.
ಇನ್ನೂ ಇದರ ಹೆಸರಿನ ಬಗ್ಗೆ ನಮ್ಮಲ್ಲಿ ಚರ್ಚಾಗೋಷ್ಠಿ  ನಡೆಯುತ್ತಲೇ ಇದೆ. ತಮಗೆ  ಗೊತ್ತಿದ್ದರೆ ಅದರ ಮೂಲ ಕನ್ನಡ ಹೆಸರನ್ನ ಸೂಚಿಸಬಹುದು,ಅಥವಾ ನಿಮ್ಮದೇ ಆದ ಸ್ವಂತಯಾವುದಾದರೂ  ಹೆಸರನ್ನ ತಿಳಿಸಬಹುದು.



ಧರಣಿಯೊಳು ಚೆಲುವೆಂಬ ಹೆಸರ ಪಡೆದೆ


ಅದೆಷ್ಟು ಚಂದವೆ ಹೂವೆ ನೀಲವರ್ಣದಿ ನೀನು
ಸೆಳೆಯುವೆಯ ಕಂಗಳನು ಮೋಡಿ ಮಾಡಿ
ಕೆಸರಕೆರೆಯಲಿ ಹುಟ್ಟಿ ಚೊಕ್ಕವಾಗಿಯೆ ಬೆಳೆದೆ
ಧರಣಿಯೊಳು ಚೆಲುವೆಂಬ ಹೆಸರ ಪಡೆದೆ  

ಪದ್ಮನಿನ್ನಯ ಚಲುವ ವರ್ಣಿಸಲು ಪದವಿಲ್ಲ
ಪಂಕಜವೆ ನಿನ್ನ ಚಲುವಿಗೆ ಸಾಟಿಯಿಲ್ಲ
ಹೂವೆನಿನ್ನಯ ನಗುವಕಡಲಲಿ ಬಿದ್ದೆ 
ತೇಲಿ ಹೋದೆನು ನಾನು ಇನ್ನು ಸಿಗದಂತೆ 

ಹೂ ಎನಗೆ ತಿಳಿಸುವೆಯ ನಿನ್ನ  ಸೆಳೆವ ಮೋಹಕ ಗಟ್ಟು 
ರಮಣಿಯದುರಲಿ ನಾ  ಹೂವಾಗಿ ನಿಲ್ಲುವೆನು ಸ್ವಲ್ಪ ಹೂತ್ತು
ಪಂಕಜದ ಹಸನವನು ಎನ್ನ ಮುಖದಲಿ ನೆಟ್ಟು 
ಮೋಹಿಪೆನು ನನ್ನವಳ ನಿನ್ನಂತೆ ಬಿಂಕ ಬಿಟ್ಟು  




ಚಿತ್ರ ಕೃಪೆ ದಿಗ್ವಾಸ ಹೆಗ್ಡೆ 
http://chithrapata.blogspot.com/

2 comments:

  1. ಚಿತ್ರ, ಚಿತ್ರಣ ಎರಡೂ ಚೆ೦ದವಿದೆ ಭಟ್ರೆ..

    ಅಭಿನ೦ದನೆಗಳು
    ಅನ೦ತ್

    ReplyDelete