
ಅದನ್ನೇ ತಿಳಿದವರು.... "ಅಲಸ್ಯಂ ಹಿ ಮನುಷ್ಯಾಣಾಂ ಶರೀರಸ್ಥೋ ಮಹಾನ್ ರಿಪುಃ" ಅಂತ ಹೇಳಿದ್ದು, ನಮ್ಮ ದೇಹದಲ್ಲಿರುವ ವೈರಿಗಳು ಆಲಸ್ಯವೇ ಹೂರತು ಮತ್ಯಾರು ಅಲ್ಲ........
ಎಂದೋ ಓದಲು ತಂದಿಟ್ಟ ಪುಸ್ತಕಕ್ಕೆ ಗೆದ್ದಲು ಹಿಡಿದಿರುತ್ತದೆ.ವಾರಕ್ಕೆರಡುದಿನ ನೀಟಾಗಿ ಕತ್ತರಿಸಿಕೊಳ್ಳಬೇಕಿದ್ದ ಮೀಸೆ ಅಸಡ್ಡೆಯ ಕೈಗೆಸಿಕ್ಕಿ ಉದ್ದುದ್ದ ಬೆಳೆದು ಕುಡಿದ ಮಜ್ಜಿಗೆಯಲ್ಲಿರುವ ಕೋತ್ತುಂಬರಿಸೂಪ್ಪು ಹಿಡೊದುಕೊಳ್ಳುವಸ್ಟರ ಮಟ್ಟಿಗೆ ಬೆಳೆದು ನಿಂತಿರುತ್ತದೆ.ಹಾಕಿಕೊಳ್ಳುವ ಶರಟಿನ ಕೊಲರಿನಲ್ಲಿ ದಪ್ಪಗೆ ಮಣ್ಣು ಮೆತ್ತಿಕೊಂಡಿರುತ್ತದೆ.ಹಾಕಿಕೊಳ್ಳುವ ಶೂ ಗೆ ಯಾವಾಗಲೋ ಅಂಟಿರುವ ಮಣ್ಣು ಹಾಗೆಯೇ ಇರುತ್ತದೆ.ತೂ.........
ಕಂಪ್ಯುಟರಿನ desktop ಮೇಲೆ ಬೇಡದ ಎಸ್ಟೋ ಪೈಲ್ ಗಳು ಬಿದ್ದುಕೊಂಡಿರುತ್ತದೆ.ಕಸದ ಡಬ್ಬದಲ್ಲಿ ತಿಂಗಳಾನುಗಟ್ಟಲೆಯಿಂದ ಕೊಳೆಯುತ್ತಿರುವ ಕಸ ಹಾಗೆಯೇ ಇರುತ್ತದೆ.ಮತ್ತೆ ಭಾನುವಾರ ಕತ್ತರಿಸಬೇಕಾದ ಉಗುರು ಕತ್ತರಿಸುವದನ್ನ ಮರೆತು ಅರ್ಜೆಂಟಿನಲ್ಲಿ ಹಲ್ಲಿನಲ್ಲಿ ಕಚ್ಚಿ ತುಂಡರಿಸಿರುತ್ತೇವೆ....ಯಾಕೋ ಈ ಆಲಸ್ಯದ ಪಟ್ಟಿಯನ್ನ ಮಾಡಲು ಹೋದರೆ ಉದ್ದವಾದೀತು....ಉಂ....! ಯಾರು ಬರಿತಾರೆ ಅದನ್ನೆಲ್ಲ ಅನ್ನೋ ಆಲಸ್ಯ ಮತ್ತೆ ಅಡರಿಕೊಳ್ಳುತ್ತೆ..... ನಿಮ್ಗೂ ಇಸ್ಟೊತ್ತಿಗೆ ಆಕಳಿಕೆ ಬರುತ್ತಿರಬಹುದು..... ಸಾಕು.....! ಈ ಎಲ್ಲ ಆಲಸ್ಯದ ಪರಮಾವಧಿಗಳನ್ನ ಮೀರಿ ನಿಲ್ಲಬೇಕೆಂದರೆ ಏನು ಮಾಡ್ಬೇಕು ಅದನ್ನ ಚಿಂತಿಸೋಣ .........! ನೆನಪಿದೆಯಲ್ಲಾ ದೊಡ್ಡವರು ಹೇಳಿದ ಮಾತು ......!! "ಅಲಸ್ಯಂ ಹಿ ಮನುಷ್ಯಾಣಾಂ ಶರೀರಸ್ಥೋ ಮಹಾನ್ ರಿಪುಃ ’
ಆಲಸ್ಯವಿಲ್ಲದೇ ಆಲಸ್ಯದ ಬಗ್ಗೆ ಒಳ್ಳೆಯ ಲೇಖನ ಬರೆದಿದ್ದೀರ.ಧನ್ಯವಾದಗಳು.ನನ್ನ ಬ್ಲಾಗಿಗೂ ಒಮ್ಮೆ ಭೇಟಿಕೊಡಿ.ನಮಸ್ಕಾರ.
ReplyDeletenice .........
ReplyDelete`ಆಲಸ್ಯ0 ಅಮ್ರುತ೦ ವಿಷ೦' ಎನ್ನುವ ಒ೦ದು ಉಕ್ತಿಯೂ ಇದೆ!
ReplyDeleteಆಲಸ್ಯದ ಪರಮಾವಧಿಗಳನ್ನ ಮೀರಿ ನಿಲ್ಲಬೇಕೆಂದರೆ...... ಆಲಸ್ಯಗಳ ಪಟ್ಟಿಯನ್ನು ಮಾಡಲೇ ಬಾರದು! ಅಲ್ಲವೇ?
ಆಲಸ್ಯವಿದ್ದರೆ ಇಂತಹ ಉತ್ತಮ ಲೇಖನ ಬರೆಯಲು ಸಾಧ್ಯವೆ?
ReplyDeleteಆಲಸ್ಯವಿಲ್ಲದೆ ಆಲಸ್ಯದ ಬಗ್ಗೆ ಚೆನ್ನಾಗಿ ವಿವರಿಸಿದ ಆಲಸಿ :D
ReplyDeleteಆಲಸ್ಯ ಪ್ರತಿಯೊಬ್ಬನ ಮನೆಮನದಲ್ಲಿ ಒ೦ದಿಲ್ಲೊ೦ದು ವಿಧದಲ್ಲಿ ಲಾಸ್ಯವಾಡು ತ್ತಿರುತ್ತದೆ. ಆಕಳಿಸುತ್ತಾ ಬರೆದ ಲೇಖನ ಆಲಸ್ಯದ ವ್ಯಾಖ್ಯೆಯನ್ನು ಚೆನ್ನಾಗಿ ಹಿಡಿದಿಟ್ಟಿದೆ. ಬೇಗ ಗೃಹಸ್ಥಾಶ್ರಮ ಸ್ವೀಕರಿಸಿ, ಆಲಸ್ಯ ತೊಲಗುತ್ತದೆ. ಮೈಮನಸ್ಸಿಗೆ ಬಿಡುವಿಲ್ಲದ ಕೆಲಸ ಸಿಗುತ್ತದೆ.
ReplyDeleteNice One Bhatre...
ReplyDelete