Tuesday, April 12, 2011

ಶುನಕವದು ಮಲಗಿಹುದು ಹುಸಿಯ ನಿದ್ದೆಯಲಿ



ಶುನಕವದು ಮಲಗಿಹುದು ಹುಸಿಯ ನಿದ್ದೆಯಲಿ 

ಬಿಸಿಲಝಳಕೆ ಭೂಮಿಯೊಡಲು ಕಾದ ಕಾವಲಿ
ನೆತ್ತಿಮೇಲಣ ಸೂರ್ಯ ಅದೆಷ್ಟು ನಿಷ್ಕರುಣಿ  
ಹೊತ್ತುಮುಳುಗುವ ವೇಳೆ ಅವ್ಯಕ್ತ ಸ೦ಭ್ರಮ
ಸಂಜೆಗತ್ತಲ ಮುಗಿಲಿನದು ಹೊಸ ಪರಿಕ್ರಮ

ರವಿಯು ಮರೆಯಾದಂತೆ ಬಿಸಿಲ ಧಗೆ ಕಳೆದು
ಗೋಧೂಳಿ ವೇಳೆಯಲಿ ತ೦ಗಾಳಿ ಸುಳಿದು
ಸುಪ್ತ ಕಾಮನೆಗಳ ಸುಖದ ಅನಾವರಣ
ತಪ್ತ ಮನಸಿನೊಳು ಖುಷಿಯ ಅನುರಣನ

ಏರುಬೆಟ್ಟದ ತುದಿಯ ಬಿಸಿಲು ಮಚ್ಚಿನಲಿ
ಶುನಕವದು ಮಲಗಿಹುದು ಹುಸಿಯ ನಿದ್ದೆಯಲಿ
ರವಿ ಮುಳುಗಿದ ಮೇಲೆ ಶಶಿಬರುವ ಆಗಸದಿ
ಬರಬಹುದೇ ಸಂಗಾತಿ ಒಂಟಿ ಇರುಳಿನಲಿ

(ಪ್ರೀತಿಯಿಂದ ಕವನ ರಚಿಸಿ ಕೊಟ್ಟವರು ಪರಾಂಜಪೆ ಸರ್ ರವರು )


ಚಿತ್ರ ತೆಗೆದಾತನಿಗೆ ನನ್ನ ನಮನವಿಹುದು

ಜಾರುತಿರುವನು ಸೂರ್ಯ ಪಡುವಣಕೆ ನಿಧಾನ
ನಿಶೆಯು ಮುಸುಕುತಿದೆ ತಳೆದು ದಿವ್ಯ ಮೌನ
ಮನದ ಆಗಸದಲ್ಲಿ  ನೀರವತೆ ಬಂಧಿಪುದು
ಸ೦ಗಾತಿ ಸನಿಹವನು ದೇಹ ಬಯಸಿಹುದು

ಮನದಿ ತಾ ನೂರೊಂದು ಯೋಚನೆಯ ತುಂಬಿ
ಸ೦ಗಾತಿ ನೆನಪಲ್ಲಿ ಮನವು ಹುರಿದು೦ಬಿ
ಗಿರಿತುದಿಯ ತಾಣದಲಿ ಭಷಕ ಮಲಗಿಹುದು
ಚಿತ್ರ ತೆಗೆದಾತನಿಗೆ ನನ್ನ ನಮನವಿಹುದು

ಗಿರಿಯ  ಸಾನ್ನಿಧ್ಯದಲಿ  ಕನಸುಗಳ ಕಂತೆ
ಬದುಕೆ೦ಬ  ಯಾತ್ರೆಯದು  ನಿತ್ಯ ಸ೦ತೆ
ಕನಸು  ಕಾ೦ಬವನಿ೦ಗೆ  ಬದುಕು  ಹಗುರ
ಕನಸಿಲ್ಲದಿರೆ  ಈ  ಜಗವು  ಎಷ್ಟು   ಘೋರ


ಚಿತ್ರ  ಪಾಲಚಂದ್ರರ ಕೃಪೆ
(http://palachandra.blogspot.com)



3 comments:

  1. waav........

    superb..........
    eraDU kavana superb......

    ಇದೇ ತಿಂಗಳ ೨೪ ಕ್ಕೆ ಮತ್ತೊಮ್ಮೆ ಎಲ್ಲರೂ ಸಿಗೋಣ.... ಪ್ರಕಾಶಣ್ಣನ ಪುಸ್ತಕ ಬಿಡುಗಡೆಯ ನೆವದಲ್ಲಿ ಎಲ್ಲಾ ಬ್ಲೊಗ್ ಗೆಳೆಯರು ಸೇರೋಣ......

    ReplyDelete