Saturday, May 28, 2011

ಹಳೆ ರೈಲುನಿಲ್ದಾಣ




ಮತ್ತೆ ಸುರುಳಿಸುರುಳಿಯಾಗಿ ಬಿಚ್ಚಿಕೊಳ್ಳುತ್ತದೆ ಆ ದಿನಗಳು
ನೆನಪದು ಚಿತ್ತ ಬಿತ್ತಿಲಿ ಹಾಯಾಗಿ ಅವಿತುಕೊಂಡಿದೆ
ಮಧ್ಯದಲಿ ಮೂಡುವಾ ಬಯಕೆ ಕಾತುರ ಬೇಕೆಂಬ ಹಟ
ನಯ ನಾಜೂಕು ಕುಡಿನೋಟ ಬಿಸಿಯುಸಿರು ಸಾವಿರ ತರಹ
ಭೋರ್ಗರೆದು ಅಲೆ ಅಲೆಯಾಗಿ ದಡಕೆರಗುವ ಆಸೆ
ಪ್ರಯಾಣಿಕರು ಕಿವಿಯಲ್ಲಿ ಹೇಳಿದ ಮಾತುಗಳೆಷ್ಟೋ
ಎಲ್ಲೆಲ್ಲಿಂದಲೋ ಬಂದು ನಿಂತುಹೋಗುವ ರೈಲುಗಳೆಷ್ಟೋ
ಕಬ್ಬಿಣದ ಕೈ ಬಳಸಿ ಕೆಡವಿದಾಗ ಕಟ ಕಟನೆ ಶಬ್ದ
ಮೈಯಲ್ಲಿರುವ ಮೂಳೆಗಳೆಲ್ಲವೂ ಮುರಿದು ನುಜ್ಜು ಗುಜ್ಜಾದ೦ತೆ
ಹಳಿಯ ತಿಕ್ಕಿಕೊಂಡು ನಿಲ್ಲುವಾ ರೈಲಿನದು ಕೀರಲು ಧ್ವನಿ
ಸಾಕು ನಿಷ್ಕ್ರಿಯಗೊಳ್ಳುತ್ತದೆ ಮನಸ್ಸು ನಿಲುಗಡೆ ಬಯಸುತ್ತದೆ
ಈಗ ರೈಲು ನಿಲ್ದಾಣಕ್ಕೆ ಬಂದು ನಿಂತಿದೆ
ಮತ್ತೆ ಶುರುವಾಗುತ್ತದೆ ಹತ್ತಿಕೊಳ್ಳುವವರ ನೂಕುನುಗ್ಗುಲು
ಮತ್ತೆ ಆಸೆ ಉತ್ಸಾಹ ಹಪಹಪಿ ಚಿಗುರೊಡೆದುಕೊಳ್ಳುತ್ತದೆ.
ಚುಕುಬುಕು ಶಬ್ದದೊಂದಿಗೆ ರೈಲು ಇಂಜಿನ್ ಚಾಲುಗೊಳ್ಳುತ್ತದೆ
ದೊಡ್ಡ ಸೈರಾನ್ ನೊಂದಿಗೆ ನಿಲ್ದಾಣದಿಂದ ದೂರಸರಿಯುತ್ತದೆ
ಆಗ ಬಂದು ಹೋದ ರೈಲುಗಳೆಷ್ಟೊ ಲೆಕ್ಕ ತಪ್ಪಿಹೋಗಿದೆ
ಇತ್ತೀಚೆಗೆ ಹೊಸನಿಲ್ದಾಣ ಬಂದಿದೆ ಹಳತು ಹಳತಾಗಿದೆ
ಈಗ ಖಾಲಿ ನಿಲ್ದಾಣ ಒಂದಿದೆ ಕೆಡಗುವ ಕಾರ್ಯ ಯಾವಗಲೋ...?

11 comments:

  1. I like 3-7th line . very good mood.

    ReplyDelete
  2. bhari cholo iddu. keep writing...all the best

    ReplyDelete
  3. ಕವನದ ಸಂಚಲನೆಯು ರೈಲಿನ ಸಂಚಲನೆಯನ್ನೇ ಅನುಸರಿಸುತ್ತಿದೆ. ಒಳ್ಳೆಯ ಕವನ.

    ReplyDelete
  4. ನವ್ಯ ಶೈಲಿಯ ಈ ಕಾವ್ಯ ತುಂಬ ಚನ್ನಾಗಿ ಮೂಡಿ ಬಂದಿದೆ.
    ಬರಹಗಳ ಹೆಜ್ಜೆ ಪಕ್ವತೆಯೆಡೆಗೆ ದ್ರಡವಾಗಿ ಸಾಗುತ್ತಿವೆ..........

    ಕೀಪ್ ಗೊಇಂಗ್ ಬಡ್ಡಿ ಆಲ್ ದಿ ಬೆಸ್ಟ್. : )

    ReplyDelete
  5. ಸುಂದರ ಸಾಲುಗಳು ...

    ReplyDelete
  6. ಇದು ಕವನ ಎನ್ನುವುದಕಿಂತ ಬರಹ ಎಂದರೆ ಉತ್ತಮ .....ಆದರೆ ಶಬ್ದ ಸಾಲುಗಳು ಚೆನ್ನಾಗಿ ಸಾಗಿವೆ ಕರಾವಳಿ ರೈಲಿನಲ್ಲಿ ....keep on writing

    ReplyDelete
  7. ಮಹಾಬಲರವರೇ ಮನುಷ್ಯನ ಜೀವನವನ್ನು ರೈಲು ನಿಲ್ದಾಣಕ್ಕೆ ಹೋಲಿಸಿ ಚೆಂದದ ಕವನ ಬರೆದಿದ್ದೀರಿ.. ಸಾಲುಗಳು ವಿಶಾಲ ಅರ್ಥಗಳನ್ನು ಹೊಂದಿವೆ. ತುಂಬಾ ಚೆನ್ನಾಗಿದೆ!

    ReplyDelete
  8. ಒಂಥರಾ ಚೆನ್ನಾಗಿದೆ..

    ReplyDelete
  9. Interesting MB...keep it up :)

    ReplyDelete