Tuesday, July 26, 2011

ನಡೆಯುತಿದೆ ಕನಕಾಭಿಷೇಕ
ಪರಾಂಜಪೆ  ಸರ್ ರವರು ಪ್ರೀತಿಯಿಂದ ಕೆಳಗಿನ  ಕವನವನ್ನ ಬರೆದು ಕೊಟ್ಟಿದ್ದಾರೆ 

-----------   ಹೇಮಜ್ಯೋತಿ ಚೆಲ್ಲಿದೆ  ---------------

ನೊರೆಯುಕ್ಕಿ ಮೈಮರೆತು ಮೊರೆಯುತಿಹಳು ವಾರಿಧಿ
ನಿಶಾಲೋಕದತ್ತ ಹೊರಟ ಮನೋರಥದ ಸಾರಥಿ
ಬಾನುಭುವಿಯ ಸಾ೦ಗತ್ಯಕೆ ಕಳಸವಿಟ್ಟ ಕು೦ದಣ
ರವಿಯ ಹೊನ್ನಬಣ್ಣದಲ್ಲಿ ಲಕಳಕಿಸುತಿದೆ ಬಾ೦ದಳ

ಹಿತವಾಗಿಹ ಸಂಜೆ ಬಿಸಿಲು ನೀಡಿದೆ ಮುದ ಮನಕೆ
ಮಿ೦ದು ನೆ೦ದು ಜಳಕವಾಡಿ ಹಗುರವಾಗೋ ಬಯಕೆ
ನೇಸರನು ನೇಪಥ್ಯಕ್ಕೆ ಸರಿವ ಗಳಿಗೆ ಬ೦ದಿದೆ
ದಿವಸ್ಪತಿಯ ದಿವ್ಯಪಥದಲಿ ಹೇಮಜ್ಯೋತಿ ಚೆಲ್ಲಿದೆ

ಪರಾಂಜಪೆ ಕೆ.ಏನ್
(ಚಿತ್ರದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ನೋಡಬಹುದು)  

4 comments:

  1. ದಿಗ್ವಾಸ್ ಹೆಗಡೆ ಯವರ ಈ ಚಿತ್ರವನ್ನು ಅವರ ಬ್ಲಾಗ್ ನಲ್ಲೇ ನೋಡಿ ಸ೦ತಸಪಟ್ಟಿದ್ದೆ. ಅದರಿ೦ದ ಪ್ರೇರಿತವಾಗಿ ಮೂಡಿ ಬ೦ದ ನಿಮ್ಮ ಕವನ ಹಾಗೂ
    ಪರಾಂಜಪೆ ಸರ್ ರವರು ಬರೆದು ಕೊಟ್ಟಿರುವ ಕವನ ಎರಡೂ ಬಹಳ ಚೆನ್ನಾಗಿ ಒಪ್ಪುವ೦ತಿವೆ. ಅಭಿನ೦ದನೆಗಳು.

    ReplyDelete