Monday, July 2, 2012

ಅತ್ತು ಬಿಡಬೇಕಾಗಿದೆ ನನಗೆ


 
ಅತ್ತು ಬಿಡಬೇಕಾಗಿದೆ ನನಗೆ
ಬರಿ ಬಿಕ್ಕಳಿಕೆಯಲ್ಲ
ಜೋರಾಗಿ ಅತ್ತುಬಿಡಬೇಕು
ಕಣ್ಣೀರು ಹಾಗೆ ಹರಿದು ಹರಿದು
ಒಳಗೆಲ್ಲ ಖಾಲಿಯಾಗಿಬಿಡಬೇಕು
ಘನ ದುಗುಡ ಕರಗಿ ನೀರಾಗಿ
ಹೊರಬಂದು ಹರಿದು ಬಿಡಬೇಕು
ಅತ್ತು ಅತ್ತು ನಾ ಬತ್ತಿ ಹೋಗಬೇಕು

ಉಹುಂ.,..
ಅಳಲಾಗುವದಿಲ್ಲ
ಎಲ್ಲಿಯೋ ಬಚ್ಚಿಟ್ಟ ಅಹಂಕಾರ ಬಿಡುವದಿಲ್ಲ
ಪ್ರತಿಷ್ಠೆ ಛಲ ಹುಂಬತನ
ಪ್ರತಿಸಲವು  ನನ್ನನ್ನ ಅಳಲು ಕೊಡುವದೇ ಇಲ್ಲ

ಗೊತ್ತು ನನಗೆ
ಅಳಲಾರದ ಮನುಷ್ಯ ಮನುಜನಾಗಿ ಬದುಕಲಾರ
ಆದರೂ  ಅಳಲಾಗುವದಿಲ್ಲ
ಜೋರಾಗಿ ಅತ್ತು ಅತ್ತು
ನನ್ನ ದುಗುಡವ ಹೊರಹಾಕಲಾಗುವದಿಲ್ಲ
ಒಳಗೆ ಬಚ್ಚಿಟ್ಟ  ಬೆಂಕಿಯು ಆರಿ
ಆರ್ಧತೆಯ ಭಾವನೆಯ ಹೊಂದಲಾಗುವದಿಲ್ಲ

ಅಳಬೇಕಾಗಿದೆ ನನಗೆ
ಬಿಟ್ಟುಬಿಡಿ ನನ್ನ
ಓ ಪ್ರತಿಷ್ಠೆಗಳೇ
ಅಹಂಕಾರಗಳೇ
ನನನ್ನ ಬಿಟ್ಟುಬಿಡಿ
ನಾನು ಭಾವಜೀವಿ
ನನಗೆ ಅಳಬೇಕಾಗಿದೆ
ಅತ್ತು ಅತ್ತು ಕರಗಬೇಕಾಗಿದೆ
ಕರಗಿ ಕರಗಿ ಹರಿಯಬೇಕಾಗಿದೆ ಮನುಷ್ಯತ್ವದೆಡೆಗೆ

2 comments:

  1. ಕರಗಿ ಕರಗಿ ಹರಿಯಬೇಕಾಗಿದೆ ಮನುಷ್ಯತ್ವದೆಡೆಗೆ rumba nalla iraku

    ReplyDelete
  2. ಅಳಿ ಅಳಿ, ಭಾವನೆಗಳ ಹಳಿಮೇಲೆ ಹೊರಳಾಡಿ ಅಳಿ, ಮನಸ್ಪೂರ್ತಿ ಅತ್ತು ಬೇಗನೆ ಹಗುರಾಗಿ-- ಎಂದು ಹಾರೈಸುವೆ :)

    ಥೂ, ಮತ್ತೊಂದು ದರಿದ್ರ doubtu.... :(

    'ಭಾವನೆಗಳು ಹಳಿ'ಯಾದರೆ ಅದರ ಮೇಲೆ ಓಡ್ತಾ ಇರೋ ರೈಲನ್ನ ಯಾವುದಕ್ಕೆ compare ಮಾಡಬಹುದು?? 'ದೇಹ'ಕ್ಕೆ ಹೋಲಿಸೋದೇ ಸೂಕ್ತ ಅಂತ ಅನ್ನಿಸ್ತಾ ಇದೆ. ಯಾಕಂದ್ರೆ ದೇಹದಲ್ಲಿ ಮನಸ್ಸಿರುತ್ತೆ, ಮನಸ್ಸಿನಲ್ಲಿ ಭಾವನೆಗಳಿರುತ್ತೆ ತಾನೇ? ದೇಹವಿಲ್ಲದಿದ್ದರೆ ಮನಸ್ಸಿರೋಲ್ಲ, ಮನಸ್ಸಿಲ್ಲದಿದ್ದಲ್ಲಿ ಭಾವನೆಗಳು zero. ಇನ್ನೊಂದು ಮಹತ್ತರ ವಿಷ್ಯ ಅಂದ್ರೆ ಭಾವನೆಗಳಿಲ್ಲದ ದೇಹ ಇರೋದಿಕ್ಕೆ ಸಾಧ್ಯ, ಆದರೆ ದೇಹವೇ ಇಲ್ಲದೆ ಭಾವನೆಗಳು ಇರೋದಿಕ್ಕೆ ಸಾಧ್ಯವೇ ಇಲ್ಲ, isn't it!? ಹಾಗೂ, ದೇಹ ಮತ್ತು ಮನಸ್ಸು (to make our lives easy, let's consider ಮನಸ್ಸು = ಭಾವನೆ in this case) ಒಂದಕ್ಕೊಂದು complementary ಆಗಿರೋದ್ರಿಂದ, ಭಾವನೆಗಳಿದ್ದಲ್ಲಿ ದೇಹ ಇರಲೇಬೇಕು (similar to ರೈಲಿದ್ದಲ್ಲಿ ಹಳಿಯಿದ್ದಂತೆ).

    ಆದರೆ, ದೇಹ ಒಂದು ಕಡೆ ನಿಲ್ಲಬಹುದು; but ಭಾವನೆಗಳು ನಿಲ್ಲೋದಿಲ್ಲ- ಅವು ಓಡ್ತಾನೇ ಇರ್ತಾವೆ. they keep changing (ಸುಮ್ಮನಿರೋದು ಕೂಡಾ ಒಂದು ರೀತಿಯಲ್ಲಿ ಒಂದು ಭಾವನೇನೆ - 'ನಿರ್ಲಿಪ್ತ ಭಾವ(ನೆ)' ಎಂಬುದು ನನ್ನ ಅಭಿಪ್ರಾಯ). as everyone knows, ಓಡೋದು ರೈಲು, ಒಂದೇ ಕಡೆ ಇರೋದು ಹಳಿ, correct?. ಆದುದರಿಂದ ಓಡೋದನ್ನ ರೈಲಿಗೂ, ನಿಂತಿರೋದನ್ನ ಹಳಿಗೂ ಹೋಲಿಸುವುದು ಹೆಚ್ಚು ಸಮಂಜಸ ಎಂದು ನನ್ನ ಅನಿಸಿಕೆ. ಆಕಾರಣ ನಿಮ್ಮ tagline ಆದ "ಭಾವನೆಗಳ ಹಳಿ"ಎಂಬುದು should either be "ಭಾವನೆಗಳೆಂಬ ರೈಲು," or "ಹಳಿಯೆಂಬ ದೇಹ," ಎನ್ನುವಂತಿದ್ದರೆ ಹೆಚ್ಚು ಸೂಕ್ತ ಎಂದು ನನ್ನ ಅನಿಸಿಕೆ, ಏನಂತೀರಿ!? :)

    (ಅಂದಹಾಗೆ ತಮ್ಮ "ಐಬು ತೆಗೆಯುವ ಐನಾತಿಗಳು" ಎಂಬ ಲೇಖನವನ್ನು ಓದಿಯೂ ನನ್ನ ಅಭಿಪ್ರಾಯವನ್ನು ಸೂಚಿಸುವ ಧೈರ್ಯ ಮಾಡಿದ್ದೇನೆ, ಸಹನೆಯಿರಲಿ!)

    regs,
    -ರಂಕುಸ

    ReplyDelete