Monday, June 25, 2012

ಹುಟ್ಟು ಸಾವಿನ ಮಧ್ಯೆ


ಹುಟ್ಟು ಸಾವಿನ ಮಧ್ಯೆ
ಹುಟ್ಟು ಸಾವಿನ ಮಧ್ಯೆ ಅದೆಷ್ಟು ಬದಲಾವಣೆಯು
ಹೂವ ಮೊಗ್ಗನು ನೋಡಿ ಇಲ್ಲಿ ತಿಳಿಯಬಹುದು
ದೇಹಕ್ಕೆ ಹೇಗೆ ಬಾಲ ಕೌಮಾರ್ಯ ವಾರ್ಧಿಕ್ಯ ಜರವು
ಮೊಗ್ಗಾಗಿ ಹೂವಾಗಿ ನಲಿದು ದಿನಕಳೆಯೇ ಸಾವು

ನಿನ್ನೆ ಇರಲಿಲ್ಲ ನಾಳೆ ತಿಳಿದವನೇ ಇಲ್ಲ
ಮಧ್ಯೆ ಬದುಕುವ ಜೀವ ಅದುಮಾತ್ರ ಬಲ್ಲ
ನಡುವೆ ಬದಲಾವಣೆಯು ನಿರಂತರ ನಿತ್ಯ
ಹುಟ್ಟುಸಾವಿನ ಮಧ್ಯೆ ಅದೆಷ್ಟು ವಿಚಿತ್ರ

ಬಿರಿದರಳಿ ಮಕರಂದ ಸೂಸುವದೆ ಗುರಿಯೊ
ಪ್ರಕೃತಿ ನಿಯಮವೇ ಹಾಗೆ ನಡೆಯುವದೆ ಹೀಗೊ
ಹೆತ್ತು ಹೊತ್ತು ಬೆಳೆದು ಅನುಭವಿಸಿ ಸಾಗುವದೆ ಜಗವೊ
ಮೂಲ ಆಶಯವೇನೋ ದ್ವಂದ್ವ ತಿಳಿಯುವದು ಹೇಗೊ ?
ಚಿತ್ರ ಕೃಪೆ
ಶ್ರೀವಿದ್ಯಾ.ಕೆ (http://www.facebook.com/shrividya.k.9)

2 comments: