Monday, July 9, 2012

ಮೇಟಿ ವಿದ್ಯೆಯೇ ಮೇಲು ಅಂದವರು ಯಾರು ?


ಅನ್ನದಾತನು ಭೂಮಿಯ ಹೂಳಿ ಬೆವರು ಹರಿಸಿಹನು
ಉತ್ತಿ ಬಿತ್ತಿ ಹದವ ಮಾಡಿ  ಮಳೆಗೆ ಕಾದಿಹನು
ಮಳೆಯು ಬಂದರೆ ಮಾತ್ರ ಹೊಟ್ಟೆಗೆ ಹಿಟ್ಟು ತಿನ್ನುವದು
ಇಲ್ಲದಿದ್ದರೆ ಕೊರಳ ಪಟ್ಟಿಗೆ ಹಗ್ಗ ಬೀಳುವದು

ಕೋಟಿ ವಿದ್ಯೆಗಳಲಿ ಮೇಟಿ ವಿದ್ಯೆಯೇ ಮೇಲು ಹೇಳಿದವನಾರು
ಹೇಳಿದವನಾ ತಲೆ ಸರಿ ಇದೆ ಅನ್ನಿಸುವದೇನು ?
ಟೆಕ್ಕಿಗಳು  ಕುಂತಲ್ಲೇ ಜಗವ ಆಳುತಿಹರಿಲ್ಲಿ
ರೈತ ವಿದ್ಯೆಗೆ ಸಿಗುವ ಗೌರವ ನಿಮಗೇ  ಗೊತ್ತಲ್ರಿ

ಹಸಿರು ಕ್ರಾಂತಿಯು ದೇಸಿ ತಳಿಗಳು ಪೇಪರುಗಳಲ್ಲಿ
ರೈತನ ಆಳುವವರು ಬೀಜ ಮಾರುವ ಕಂಪಯವರಿಲ್ಲಿ
ರೈತನ ಭೂಮಿ ಸರ್ಕಾರದವರು ಕೊಳ್ಳೆ ಹೊಡೆಯುತಿಹರಲ್ಲ
ಪ್ರತಿಭಟಿಸಲೇ ಬೇಕು ನಾವು ರೈತರ ಮಕ್ಕಳಹುದಲ್ಲ

ಕೃಷಿಕೋ  ನಾಸ್ತಿ ದುರ್ಭಿಕ್ಷಃ  ಎಂಬುದು ಶುಭಾಷಿತದಲ್ಲಿ
ಬರಗಾಲ ಭೂತ ಬೆಲೆಯ ಕುಸಿತ  ಕಾಡುತಿಹುದಿಲ್ಲಿ
ಅನ್ನದಾತೋ ಸುಖೀಭವ  ಎಂದು ಹರಸಿ ಸುಮ್ಮನಿರುವದಲ್ಲ
ಅನ್ನ ದಾತನ ಕೂಗಿಗೂ  ನಾವು ಕೈ ಜೋಡಿಸಬೇಕಲ್ಲ


ಚಿತ್ರ : ದಿಗ್ವಾಸ ಹೆಗ್ಡೆ

3 comments:

  1. ರೈತನೇ ಇಲ್ಲದಿದ್ದರೆ ತಿನ್ನುವುದೇನು ಹೊಟ್ಟೆಗೆ ?
    ತಲೆಬರಹ ಸರಿ ಇಲ್ಲ....

    ReplyDelete
  2. ಖರೇ ಹೇಳಿದಿರಿ. ಇದು ರೈತನ ಸ್ಥಿತಿಗೆ ಹಿಡಿರುವ ಕನ್ನಡಿಯಾಗಿದೆ.

    ReplyDelete
  3. ಚೆನ್ನಾಗಿದೆ ಭಟ್ರೇ.....ದಿಗ್ವಾಸ್ ಅವರ ಚಿತ್ರಾನೂ ಸೂಪರ್

    ReplyDelete