Wednesday, July 21, 2010

ಮತ್ತೆ ಮತ್ತೆ ಕಾಡುವ ಊರಿನ ನೆನಪು





















ಅದೋ... ಇಲ್ಲಿದೆಯಲ್ಲ ದೊಡ್ಡದಾದ ಗುಡ್ಡ, ಪರ್ವತ ,ಆ ಕಡಿದಾದ ಗುಡ್ಡದ ಕೆಳಗೇ ನಮ್ಮೂರು ಮಹಾರಾಯರೇ! ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತಾರಲ್ಲ ಹಾಗಲ್ಲ , ಅದ್ದನ್ನ ಹತ್ತಿರದಿಂದ ನೋಡಿದರೂ, ಕಣ್ಣಿಗೆ ಮಹದಾನಂದ! ಅದ್ಯಾಕೋ ನಮ್ಮ ಊರಿನ ಪರ್ವತದ ಬಗ್ಗೆ ನನಗ್ಯಾಕೋ ಯಾವಾಗಲೂ ಕುತೂಹಲ, ಅದ್ಯೆನ್ ವಿಶೇಷ ಅಂತೀರಾ ? ಕರಾವಳಿ ಮತ್ತು ಮಲೆನಾಡುಗಳಲ್ಲಿರುವ ಊರುಗಳೆಲ್ಲವೂ ಇದೇತರಹ ಗುಡ್ಡ ಬೆಟ್ಟಗಳ ಮಧ್ಯೆಯೇ ಇರುವದು ಅಂತೀರೆನೋ? ಅದೇನೆ ಅನ್ನಿ ನನಗ್ಯಾಕೋ ನಮ್ಮೂರ ಗುಡ್ಡಕ್ಕೆ ಮೌಂಟಯವರೆಸ್ಟ್ ಪರ್ವತದ ಅರ್ಧಭಾಗ ಆದ್ರೂ ಪ್ರಚಾರ ಸಿಗಬೆಕಿತ್ತು ಅನ್ನಿಸುತ್ತದೆ, ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ, ಅಂತ ರಾಮ ಶ್ರೀಲಂಕಾದಲ್ಲಿ ಹೇಳಿಕೆ ಕೊಟ್ಟಿದ್ದು ನಮಗೆಲ್ಲರಿಗೂ ಗೊತ್ತೇ ಇದೆ, ಹುಟ್ಟಿದ ಮಣ್ಣೀನ ಸೆಳತವೇ ಹಾಗೆ, ಅದು ನಾವು ಏಲ್ಲೇ ಇರಲಿ, ಯವುದೇ ಅಸ್ಟ ಭೋಗಗಳಲ್ಲಿ ತೇಲಿಸುವ ನಗರಗಳಲ್ಲಿರಲಿ, ಆದರೂ ನಮ್ಮ ಮನಸ್ಸು ನಮ್ಮ ಹುಟ್ಟೂರನ್ನ ಯಾವಗಲೂ ನೆನೆಯುತ್ತಲೇ ಇರುತ್ತದೆ. ಅದು ಅವಿನಾಭಾವ ಸಂಬಂದ, ಛೇ, ವಿಷಯಾಂತರ ಆಯ್ತು ಅಂತೀರಾ? ನಾನು ಹೇಳಲಿಕ್ಕೆ ಹೊರಟಿರುವದು ನಮ್ಮೂರ ಗುಡ್ಡದ ಬಗ್ಗೆ,

ಮಲೆನಾಡಿನ ಏಸ್ಟೊ ಪರ್ವತಗಳಿಗೆ ಹೆಸರುಗಳಿಲ್ಲ. ಕೆಲವೊಂದು ಪರ್ವತಗಳಿಗೆ ತನ್ನದೇ ಆದ ಹೆಸರುಗಳಿದೆ., ಆ ಯಾ ಹೆಸರುಗಳಿಗೆ ತಕ್ಕಹಾಗೆ ಸ್ಥಳ ಪುರಾಣಗಳಿದೆ, ನಮ್ಮೋರಿನ ಈ ಗುಡ್ಡಕ್ಕೆ ಭೂಸುರ ಗುಡ್ಡ ಅಂತ ಹೆಸರಿದೆ, ಅದ್ಯಾಕೆ ಹೀಗಂತಾರೋ ನನಗೆ ಗೊತ್ತಿಲ್ಲ, ಬೂಸ್ರ ಗುಡ್ಡೆ ಅನ್ನುವ ಜನರೂ ಇದ್ದಾರೆ, ಅವರ ಸ್ಥಳಪುರಾಣವನ್ನ ಅವರ ಮಾತಿನಲ್ಲಿಯೇ ನೀವು ಕೇಳಬೇಕು.

ಹಿಂದೊಮ್ಮೆ ತಿರುಪತಿ ಗಿರಿವಾಸ ಶ್ರೀನಿವಾಸನಿಗೆ ಈ ಪರ್ವತದ ಮೇಲೆ ಬಂದು ನೆಲೆಸಬೇಕೆಂಬ ಹಂಬಲ ಉಂಟಾಯಿತಂತೆ, ಹಾಗೆ ಅಲ್ಲಿ ಬಂದು ಕುಳಿತ ಕೂಡಲೆ ನಮ್ಮ ಪರ್ವತ ಕಂಪಿಸಿ ಬಿಟ್ಟಿತಂತೆ, ಶ್ರೀ ಶ್ರೀನಿವಾಸನಿಗೆ ತನ್ನ ಭಾರವನ್ನ ಹೊರಲಾಗದೆ ಕಂಪಿಸುತ್ತಿರುವ ಗುಡ್ಡದ ಮೇಲೆ ಕೂರುವ ಮನಸ್ಸಾಗಲಿಲ್ಲವಂತೆ,ಹಾಗೆ ಬಂದ ದಾರಿಗೆ ಸುಂಕವಿಲ್ಲದಂತೆ ಹೊರಟು ಬಿಟ್ಟನಂತೆ, ಅಗಣಿತ ಮಹಿಮ ಶ್ರೀಮನ್ ಮಹಾನಾರಾಯಣನ ಭಾರವನ್ನ ತಡೆಯಲಾಗದ ಗುಡ್ಡಕ್ಕೆ ಜನರು ಬೂಸ್ರ ಗುಡ್ಡೆ ಅನ್ನುವ ನಾಮಕರಣ ಮಾಡಿದರಂತೆ, ಬೂಸ್ರು ಅಂದರೆ, ಶಕ್ತಿ ಇಲ್ಲದ್ದು ಪೊಳ್ಳು ಅನ್ನುವ ಅರ್ಥದಲ್ಲಿ, ಆದರೆ ನಾನಂತೂ ಈ ಸ್ಥಳ ಪುರಾಣವನ್ನ ಒಪ್ಪುವದಿಲ್ಲ, ಈಗಲಾದರೂ ಯಾರಾದರು ಮನಸ್ಸುಮಾಡಿ ಗುಡ್ಡದ ತುತ್ತತುದಿಯಲ್ಲಿ ಒಂದು ಶ್ರೀನಿವಾಸನ ಗುಡಿಯನ್ನ ನಿರ್ಮಿಸಿದರೆ, ನಮ್ಮ ಕರ್ನಾಕದಲ್ಲೂ, ತಿರಿಪತಿಯನ್ನ ಕಾಣಬಹುದು, ತಿರುಪತಿ ಆಂದ್ರದಲ್ಲೋಂದೆ ಅಲ್ಲ ಕರ್ನಾಟಕದಲೂ ಇದೆ ಅಂತ ಹೆಮ್ಮೆ ಪಡಬಹುದು,

ಅದೇನೆ ಇರಲಿ, ನನಗಂತೂ ನಮ್ಮೂರ ಗುಡ್ಡದ ಸೌಂದರ್ಯ ನನ್ನಲ್ಲಿ ಯಂತಹದೋ ಭಾವನೆಯನ್ನ ಕಟ್ಟಿಕೊಡುತ್ತದೆ, ನಮ್ಮೂರನ್ನ ತನ್ನ ಬೆಚ್ಚನೆಯ ತನ್ನೊಡಲಲ್ಲಿ ಬಚ್ಚಿಕೊಂಡಿರುವ ಮೇರುವನ್ನ ನೋಡುತ್ತಿದ್ದರೆ ನೋಡುತ್ತಲೇ ಇರಬೇಕೆಂದೆನಿಸುತ್ತದೆ,

1 comment: