ಕಾಡುವ ದೂರದ ಒಂಟಿಯ ದೀಪ
ಆಸೆಗೆ ಜೀವವ ತುಂಬುವದು
ಹತ್ತಿರ ಹೋಗಿ ನೋಡಲು ನಾನು
ಬುಡದಲಿ ಕತ್ತಲೆ ಕಾಣುವೆನು
ಬುಡದಲಿ ಕತ್ತಲೆ ಒಟ್ಟಿಗೆ ದೀಪವು ದ್ವಂದ್ವಕೆ ಎಣೆಯನು ಮಾಡುವದು
ಹಾರುವ ಹಕ್ಕಿಗೆ ಗೂಡಲಿ ತಾನು
ಇಟ್ಟಿಹ ಮರಿಗಳ ಸೆಳೆಯುವಿಹುದು
ಹಕ್ಕಿಯ ಮರಿಗಳು ರೆಕ್ಕೆಯ ಬಡಿಯೇ
ತಾಯಿಯ ಮಮತೆಯ ಮರೆಯುವದು
ಕಾಲಿಯ ಗೂಡು ಕಾಯುವ ತಾಯಿ ದ್ವಂದ್ವಕೆ ಎಣೆಯನು ಮಾಡುವದು
nice bloging...:)
ReplyDeletethanks madam
ReplyDelete