Thursday, July 26, 2012

ಜಗತ್ತೇ ಇಷ್ಟು ಚೌಕಟ್ಟುಅದೋ ಅಲ್ಲಿ ಕಣ್ಣಿಗೆ ನಿಲುಕುವಷ್ಟೇ ದೂರ
ಅದರಾಚೆ ಏನಿದೆಯೋ ಬಲ್ಲವರು ಯಾರ
ಅದೆಷ್ಟು ಅಗಾದ ವಿಸ್ತಾರ ನೀಳ ಆಳ
ಬೊಗಸೆಯಲ್ಲಿ ಹಿಡಿದರೆ  ಮಾತ್ರ ಪರಿಧಿ
ಅನಂತಕ್ಕೆ ವ್ಯಾಪ್ತಿಯ ಚೌಕಟ್ಟು
ಹಿಗ್ಗಬಹುದು ಕುಗ್ಗಲೂ ಬಹುದು
ಗೆಲುವಿನ ಉತ್ಸಾಹದಲ್ಲಿ
ಜಗತ್ತನ್ನೇ ಹಿಡಿದಿದ್ದೇನೆ ಎಂಬ ಸಂಬ್ರಮದಲ್ಲಿ
ಬ್ರಮೆ ಕಳೆದಮೇಲೆ ಗೊತ್ತಾದೀತು
ಹಿಡಿದದ್ದು ಬೊಗಸೆ ನೀರು
ಆದರೆ ಪೊರೆ ಕಳಚದೆ ಇದ್ದರೆ
ಕಣ್ಣು ತೆರೆಯದಿದ್ದರೆ
ಶರಧಿಯೇ ಇಷ್ಟು ನಮ್ಮ ಬೊಗಸೆ ಇದ್ದಷ್ಟು
ಜಗತ್ತೇ ಇಷ್ಟು ಮುಷ್ಠಿಯಲ್ಲಿ ಕಟ್ಟುವಷ್ಟು

 
ಚಿತ್ರ ಕೃಪೆ – ದೀಪಕ್ ಭಟ್ 
http://chayachitragalu.blogspot.in

3 comments:

  1. ದೊಡ್ಡ ಸಂದೇಶವನ್ನು ಬೊಗಸೆಯಲ್ಲಿಯೇ ಹಿಡಿದು ಕೊಟ್ಟದ್ದೀರಿ!

    ReplyDelete