Monday, March 7, 2011

ಮೂರು ಚಿತ್ರ ನಾಲ್ಕು ಕವನ...

ನನ್ನ ಪ್ರೀತಿಯ ಛಾಯಾಚಿತ್ರಕಾರರೆ  ನಿಮ್ಮ ಚಿತ್ರಗಳನ್ನ ನೋಡಿ ಮನಸೋತು ಹೋಗಿದ್ದೇನೆ, ಅಂತಹ ಚಿತ್ರಗಳನ್ನ ಸೆರೆಹಿಡಿಯಲು ನೀವು ವ್ಯಯಿಸಿದ ಸಮಯವೆಸ್ಟೋ.ಮತ್ತೆ ಪಟ್ಟ ಕಷ್ಟವೆಸ್ಟೋ ... ನಾನು ನನ್ನ ಮನದ ವಾಂಛಲ್ಯಕ್ಕೆ ನಿಮ್ಮ ಮೂರು ಚಿತ್ರಗಳನ್ನಿಟ್ಟುಕೊಂಡು ನಾಲ್ಕು ವಿರಹಗೀತೆಯನ್ನ ಬರೆದಿದ್ದೇನೆ ..........,ಗೊತ್ತು ನನಗೆ ನನ್ನ ಮಾತುಗಳು ಅಥವಾ ಶಬ್ಧಗಳು ನಿಮ್ಮ ಚಿತ್ರದಮುಂದೆ ಸೋಲುತ್ತದೆ. ಆದರೂ ಈ ಪ್ರಯತ್ನ ಮಾಡಿದ್ದೇನೆ, ಪ್ಲೀಸ್ ಸಹಿಸಿಕೊಳ್ಳಿ....ಧನ್ಯವಾದಗಳು ದಿಗ್ವಾಸಣ್ಣ ಮತ್ತೆ ಗಣಪತಿ ಅಣ್ಣನಿಗೆ. ನಾಲ್ಕೂ ಕವನಗಳ ವಿಷಯಾರ್ಥ ಒಂದೇ ಇದೆ. ನಿಮಗಿಷ್ಟವಾದದ್ದನ್ನ ಓದಿ ಹಾರೈಸಿ.............

ಹನಿ ಹನಿ ಹನಿಯಾಗಿ ಸನಿಹವು ನೀನಾಗಿ


ಹಸಿರು ಪರ್ಣದಮೇಲೆ  ಜಾರುತಿರುವದು ಹನಿಯು
ಹನಿ ತಾ ಸನಿಹವನು ತೊರೆದು ಹೋಗುತಲಿಹುದು
ನಯವಾಗಿ ಎದೆಯಲಿ ಸೇರಿ ನೂರು ಕಲ್ಪನೆ ನೆಟ್ಟು
ಬಿಟ್ಟು ಹೋಗುವೆಯಲ್ಲ ಮನದಂಗಳದಲ್ಲಿ  ನೆನಪನಿಟ್ಟು

ಹನಿ ಹನಿ ಹನಿಯಾಗಿ ಸನಿಹವು ನೀನಾಗಿ
ಹೊಳೆ ಹೊಳೆ ದು ಸ್ಪಟಿಕದಂತೆಯೆ ಆಗಿ
ಸೆಳೆ ಸೆಳೆದು ವಿರಹವನು ತಂದಿಟ್ಟು ಜಾರುವೆಯೇಕೆ
ಸರ ಸರನೆ ಜಾರುವಾ ನಿನಗೆ ಗೊತ್ತಿಲ್ಲವೇ ನನ್ನ ಬಯಕೆ

ಹನಿಯಿದ್ದರೇನೆ ಅದು ಹಸಿರಿಗೆ ಸಂಪು
ನಿನ್ನ ಸನಿಹವು  ನನಗೆ ನೀಡುವದು  ತಂಪು  
ನೀನಿಲ್ಲದಾ ಬಾಳು ಹನಿಯಿಲ್ಲದಾ ಹಸಿರು
ನಿನ್ನನೆನಪಲೆ ಸಾಗುತಿದಿದೆ  ನನ್ನ ಉಸಿರು


ಚಿತ್ರ ಕೃಪೆ ದಿಗ್ವಾಸ್ ಹೆಗ್ಡೆ 
(http://chithrapata.blogspot.com)

ಒಂಟಿ ಪಾದಪದಂತೆ 

ತನುವಿಲ್ಲಿ ಬಳಲಿಹುದು ಬಳಲಿ ಬೆಂಡಾಗಿಹುದು 
ಬಯಲ ತರುವಿನತೆರದಿ  ತಲ್ಲಣಿಸುತಲಿಹುದು
ಲತೆಯಂತೆ ಬಳಿಬಂದು ಬಿಗಿದಪ್ಪಿ ಆಶ್ರಯಿಸಿ
ನಡೆದುಬಿಟ್ಟೇಯಲ್ಲಾ  ಪೂರ್ಣವಿರಾಮವಿರಿಸಿ

ನೋಡಲ್ಲಿ ನಾನು ಕಟ್ಟಿದಾ ಪ್ರೇಮಗೋಪುರವು
ಪಾಳುಬಿದ್ದಿಹುದಿಲ್ಲಿ ಗತಕಾಲ ಪ್ರೀತಿ ನೆನವು
ಒಂಟಿ ಪಾದಪದಂತೆ ನಾ ನಿಂತಿಹೆನು ನೋಡಲ್ಲಿ 
ಲತೆಯು ತಾ ತರುವನ್ನ ಬಿಟ್ಟುಹೋಗಿಹುದಿಲ್ಲಿ

ಆ ಮರ ಈ ಮರ ಜಪಿಸಿ ರಾಮಮಂತ್ರವು ಮೂಡೆ
ನಿನ್ನ ಭಜಿಸಿದ ನನಗೆ ಪ್ರೇಮಮಂತ್ರವು ಕಾಡಿ
ಬಯಲಿನಲ್ಲಿಯೆ ನಿಂತು ಜಪಿಸುತಿರುವೆನು ಭ್ರಾಂತು
ತಿರುಗಿ ಬರುವೆಯಾ ಗೆಳತಿ  ನೀ ಸನಿಹವಾಂತು

ಚಿತ್ರ ಕೃಪೆ ಗಣಪತಿ ಹೆಗ್ಡೆ ಕಲಾವಿದ 
(http://kalaavida-hegde.blogspot.com)



ಮನದಲಿಟ್ಟಿಹ ಹೆಜ್ಜೆ ಅಳಿಸಲಾಗದು ಮತ್ತೆ

ನಾ ತಿರುಗಿ ನೋಡಲು ನಿನ್ನದೇ ಹೆಜ್ಜೆಗಳು
ಅಚ್ಚುಬಿದ್ದಿದೆ ನನ್ನ ಮನದ ಮೂಲೆಯಲ್ಲಿ
ಅಳಿಸಲಾಗದ ಗುರುತು ನನ್ನ ಚಿತ್ತದೊಳಿಟ್ಟು
ಹೋದೆಯಲ್ಲಾ ಸನಿಹವಾ ತೊರೆದುಬಿಟ್ಟು
  
ನಾ ನದಿಯು ಅ೦ಬುಧಿಯ ನೀನೆಂದು ಹೇಳಿಲ್ಲವೇ 
ಕಣ್ಣಲ್ಲಿ ಸೆಳೆದೆನ್ನ ಸನಿಹದಲಿ  ಕೈಹಿಡಿದು ನಡೆದಿಲ್ಲವೇ
ಮಾಸದ ಗುರುತಿಟ್ಟು ತಿರುಗಿನೋಡದೆ ನೀನು ನಡೆದುಬಿಟ್ಟೆ 
ಕಾಲದಲೆಯಲಿ  ಮರೆತುಹೋಗಬಹುದೆಂದು ನಾ ಇದ್ದುಬಿಟ್ಟೆ 

ನಾ ಕಲ್ಪಿಸಿದಾ ಪ್ರೀತಿ ಉಸುಬು ಗೋಪುರವಾಯ್ತು
ಮರಳಿನಲಿ ಬರೆದಿಟ್ಟ ಪ್ರೇಮ ಬರಹಗಳಾಯ್ತು 
ಅಲೆಗಳು ಬರದಿರಲಿ ನಿನ್ನ ಹೆಜ್ಜೆಯಗುರುತು ಹಾಗೇಯೇ ಇರಲಿ
ಮರೆಯಲಾಗದ ಒಲವಿನ ಕುರಹು ಮನದಿ  ಜಿನುಗಿತ್ತಲಿರಲಿ


ಚಿತ್ರ ಕೃಪೆ ಗಣಪತಿ ಹೆಗ್ಡೆ ಕಲಾವಿದ 
(http://kalaavida-hegde.blogspot.com)



ಮರಳಲರಳಿದ ಹೆಜ್ಜೆ


ಮರಳಲಿ ಮೂಡಿದ ನಿನ್ನಯ ಪಾದವು
ಸಾವಿರ ನೆನಪನು ಸಾರುವದು 
ನೆನಪಿನ ಹರಿವಲಿ ತೇಲುವ ಭಾವನೆ 
ದೂರದ ತೀರಕೆ ಒಯ್ಯುವದು 

ದೂರದಿ ಕಾಣುವ ಬಯಲಿನತಾಣ 
ಮೌನಕೆ ದಾರಿಯ ಮಾಡುವದು 
ಸಾಗುತ ನಿನ್ನಯ ಪ್ರೀತಿ ಮಾಯೆಯನು 
ಮನದಲೆ ಚಿಂತಿಸಿ ನುಲುಗುವೆನು 

ಮೂಡಿದ ಹೆಜ್ಜೆಯ ಗುರುತಲಿ ನಾನು 
ಗತಕಾಲದ ಪ್ರೀತಿಯ ನೆನೆಯುವೆನು 
ಸಾವಿರ ಯೋಚನೆ ಮನದಲಿ ತುಂಬಿ 
ನಯನಾಂಗಿಯ ಸುಳಿಯಲಿ ಸಿಲುಕುವೆನು 


ಚಿತ್ರ ಕೃಪೆ ಗಣಪತಿ ಹೆಗ್ಡೆ ಕಲಾವಿದ
(http://kalaavida-hegde.blogspot.com)



7 comments:

  1. ಮಹಾಬಲಗಿರಿ ಭಟ್ಟರೆ,
    ಸುಂದರವಾದ ಕವನಗಳಿಗೆ ಸ್ಫೂರ್ತಿ ನೀಡಿದ ಕಲಾವಿದರಾದ ದಿಗ್ವಾಸ ಹಾಗು ಗಣಪತಿ ಹೆಗಡೆಯವರಿಗೂ ಸಹ ನಾವು ಕೃತಜ್ಞರಾಗಿರಲೇ ಬೇಕು!

    ReplyDelete
  2. ನೂರು ಮಾತಲಿಹೇಳುವ ಕಥೆಯನ್ನ ಒಂದೆ ಚಿತ್ರದಿಂದ ಹೇಳಬಹುದು

    ಸುನಾಥ್ ಸರ್ ನಿವೆಂದಿದ್ದು ನಿಜ. ಚಿತ್ರ ಕಲಾವಿದರಿಗೆ ನೂರು ಕೋಟಿ ಕೃತಜ್ನತೆಗಳು......

    ReplyDelete
  3. Bhattare,

    Tumbaa sundaravada kavanagalannu chitragalige purakavaagi barediddiri, Very nice, Chitrakaararigu dhanyvadgalu...

    ReplyDelete
  4. ಮೂರು ಕವನಗಳು ಆದ್ಭುತ

    ReplyDelete
  5. ಸುಂದರವಾದ ಸಾಲುಗಳು.....

    ನೀನಿಲ್ಲದಾ ಬಾಳು ಹನಿಯಿಲ್ಲದಾ ಹಸಿರು
    ನಿನ್ನನೆನಪಲೆ ಸಾಗುತಿದಿದೆ ನನ್ನ ಉಸಿರು

    ಮಾಸದ ಗುರುತಿಟ್ಟು ತಿರುಗಿನೋಡದೆ ನೀನು ನಡೆದುಬಿಟ್ಟೆ
    ಕಾಲದಲೆಯಲಿ ಮರೆತುಹೋಗಬಹುದೆಂದು ನಾ ಇದ್ದುಬಿಟ್ಟೆ

    ತುಂಬಾ ಇಷ್ಟವಾಯಿತು.

    ReplyDelete
  6. ಪ್ರೋತ್ಸಾಹಿಸಿದ ನಿಮಗೆಲ್ಲ ಅನಂತಾನಂತ ವಂದನೆಗಳು

    ReplyDelete
  7. ಸುಂದರವಾದ ಸಾಲುಗಳು...ಕವನಗಳು ತುಂಬಾ ಇಷ್ಟವಾದವು.

    ReplyDelete