Monday, March 21, 2011

ಶೃಂಗಾರ ಚಿತ್ರ ........



ನೆನಪಿದೆಯಾ ಗೆಳತಿ .....ಅಂದು......  ನಿನ್ನ ಕಿರು ಬೆರಳನ್ನ ನನ್ನ ಕಿರುಬೆರಳಿಗೆ ಕೊಂಡಿಯಾಗಿಸಿ ಜೋಡಿಯಾಗಿ  ಸೂರ್ಯಾಸ್ತ ನೋಡುವ  ಸಲುವಾಗಿ ಬೆಟ್ಟದ ತುದಿ ಏರುತ್ತಿದ್ದೆವಲ್ಲ .......  ನೆನಪು ನನಗೆ ಇನ್ನೂ ಸದಾ ನೆನಪಿದೆ.  ಅಂದು ನಿನ್ನ ಒಂದೊಂದು ಸ್ಪರ್ಶಕ್ಕೂ ನನ್ನ ಮನಸ್ಸು ಹಾತೊರೆಯುತ್ತಾ ಇತ್ತು......ಆದರೆ.... ಯಾಕೋ ಆ ದಿನಗಳಲ್ಲಿ ನಿನ್ನ ಕಣ್ಣ ತೀಕ್ಷ್ಣತೆಗೆ ನಾನು ಹೆದರಬೇಕಿತ್ತು . ಅಷ್ಟು  ಹೆದರಿಕೆ ಬೇಕಿತ್ತು ಅಲ್ವಾ? ಇಲ್ಲ ಅಂದರೆ ನನ್ನ ನಿನ್ನ ಪ್ರೀತಿ ಕಾಮದ ಕೈ ಸೇರಿ ನುಚ್ಚಿ ನೂರಾಗಿ ಪ್ರವಾಹದಲ್ಲಿ ತೇಲಿ ಹೋಗುವ ಭಯವಿತ್ತು ..ಹೂಮ್...........  ನೀವು ಸೂಕ್ಷ್ಮ ಮನಸ್ಸಿನವರು ಮಹಾರಾಯತಿ. ಎಲ್ಲವನ್ನ ಸರಿಯಾಗಿ ಗೃಹಿಸಿ ಆಲೋಚಿಸೆಯೇ ಇರುತ್ತೀರಿ. ನಾವು ಹುಡುಗರು ಸ್ವಲ್ಪ ಮುಂದಾಲೋಚನೆ ಕಡಿಮೆ. ಆದರೂ ನಿನ್ನಂತಹ ಒಬ್ಬ ಸಹನಾಮಯಿ ಸಿಕ್ಕಿದರೆ ಮಾತ್ರ ಪ್ರೀತಿ ಹಸನಾಗಲು ಸಾಧ್ಯ ಅಲ್ವಾ.....?


ಸೂರ್ಯನು ಭೂಮಿಯ ತೊರೆಯುವ ಹೊತ್ತು 
ರಂಗು ರಂಗಾಗುತಿದೆ  ಬಾನು  ಮುಸ್ಸಂಜೆ ಹೊತ್ತು 
ಪ್ರೀತಿಯಲಿ ನಿನ್ನಯ ಕಣ್ಣಲಿ ಕಣ್ಣನು  ನೆಟ್ಟು 
ಬಣ್ಣ ಬಣ್ಣದ ಚಿತ್ರವು ನಮ್ಮ ಮನದಲಿ ಮೂಡಿತ್ತು





ಆ ದಿನ ಸೂರ್ಯಾಸ್ತ ನೋಡಲು ನಾನು ನೀನು ಕೈ ಕೈ ಹಿಡಿದು ಹೋಗಿದ್ದೆವಲ್ಲ...... ಅಲ್ಲಿ  ನಾನು ಚಿಗುರೆಲೆ ಕುಯ್ದು ಚಿಗುರೆಲೆಯ ತುದಿಯಿಂದ ನಿನ್ನ ನವಿರಾದ ಕೆನ್ನೆಯ ಮೇಲೆ ಹಾಗೆ ಸ್ಪರ್ಶಿಸಿದೆನಲ್ಲಾ ............ ಆಗ ನಿನ್ನ ಮುಖದಲ್ಲಿ ನಾಚಿಕೆ, ಕಚಗುಳಿ, ಎಲ್ಲವೂ ಸೇರಿ ಅದೆಷ್ಟು ಮುದ್ದಾಗಿ ಕಾಣಸ್ತಾ ಇದ್ದೆ ಹುಡುಗೀ..  ..."ಎ"...... "ಕಚಗುಳಿ ಆಗುತ್ತೆ ಬಿಡೋ " ಅಂತ ನೀನು ನಿನ್ನ ಮುಖವನ್ನ ತಿರುಗಿಸಿ ಕೊಳ್ಳುತ್ತಿದ್ದರೆ, ನಿನ್ನ ಮುಖದಲ್ಲಿ ಶೃಂಗಾರ ರಸಾಭಾವವನ್ನ ನಾನು ಗುರುತಿಸಿದ್ದೆ.... ಹಾಗೆ ಒಮ್ಮೆ ನಾನು ಯಾವುದೋ ಕಲ್ಪನೆಯ ಸಾಮ್ರಾಜ್ಯದಲ್ಲಿ  ತೇಲುತ್ತಾ ಮೈಮರೆತು ಯೋಚಿಸುತ್ತಿರುವಾಗ ಸದ್ದಿಲ್ಲದೆ ಹಿಂದಿನಿಂದ ಬಂದು ನಿನ್ನ ಉದ್ದವಾದ ಜಡೆಯ ತುದಿಯನ್ನ ನನ್ನ ಮುಖದ ಮೇಲೆ ಹರವಿ ಕಚಗುಳಿ ಇಟ್ಟೆಯಲ್ಲ........ ನನ್ನ ಭಾವನಾ ಲೋಕದಿಂದ ವಾಸ್ತವಕ್ಕೆ ಕರೆತಂದೆಯಲ್ಲ....... ಇಂದಿಗೂ ಆ ನಿನ್ನ ಕೂದಲ ಘಮ ನನ್ನ ಮನದಲ್ಲಿ ಕಂಪ ಚಲ್ಲುತ್ತಲೇ ಇರುತ್ತದೆ .


ತಂಗಾಳಿ ಬಂದು ಮುದ್ದಿಸಲು ಹಸನಾದ ಚಿಗುರ
ಬಳುಕಿ ತಾ ಪತ್ರ ತೋರುವದು ಶೃಂಗಾರದೊಲವ
ಮೆಲುಗಾಳಿ ತೆರದಿ ನಾ ನಿನ್ನತ್ತ ಸರಿದೆ 
ನೀರೆ ನೀ ಸರಿಸುವೆಯ ನಾಚಿಕೆಯ ಪರದೆ



ಸಹಜ... ಹೆಣ್ಣಿಗೆ ಹೂವೆಂದರೆ ಬಲು ಇಷ್ಟ.ಅದರೆ ನಿನಗೆ ಹೂವಿನ ಹುಚ್ಚು ಸ್ವಲ್ಪ ಹೆಚ್ಚೆ ಬಿಡು.ಅಂದು ನೀ ನಗಾಗಿ ಕಾದಿರಲು ಎಲ್ಲಿಂದಲೋ ಕುಯ್ದು ತಂದಿದ್ದೆನಲ್ಲ ಆ ಕೆಂಪು ಹೂವ.  ಅದನ್ನ ತೆಗೆದುಕೊಂಡು "ಇದು ಮುಡಿಯುವ ಹುವಲ್ಲ ಮಹಾರಯ" "ನಿನಗೆಲ್ಲಿ ಸಿಕ್ಕಿತು ಈ ಕಾಬಾಳೆ ಹೂ" ".ನನಗೋಸ್ಕರ  ಒಂದು ಗುಲಾಬಿ ಹೂ ತರಲಾಗಲಿಲ್ಲವೆ" ಅಂದು ನಗುನಗುತ್ತಾ ಆ ದೊಡ್ಡದಾದ ಹೂವನ್ನೆ ಮುಡಿದುಕೊಂಡು "ಈಗ ಸಮಾಧಾನ ಆಯ್ತಾ " ಅಂತ ನನ್ನನೇ ಗುರಿಯಾಗಿಸಿ ಕಣ್ಣರಳಿಸಿ  ಕೇಳಿದೆಯಲ್ಲ......... ಅದು ನೀನು ಸಾನುರಾಗವ ತೋರಿಸುವ ಕುರುಹು ಅಲ್ಲವೇ ?
ನೀನು ನನ್ನೆಡೆಗೆ ಬೀರುವ ನೋಟ ಇದೆಯಲ್ಲ, ಅದರಲ್ಲಿ ನಾ ಎಂತಹದೋ ಲೋಕದಲ್ಲಿ ಇದ್ದುಬಂದಂತೆ.ಅದು ಪ್ರೇಮದ ಲೋಕ ಆಗಿರಬೇಕು ಗೆಳತಿ ಅಲ್ಲಿ ಯಾವುದೇ ವ್ಯವಹಾರಿಕತೆಗೆಳಿಗೆ ಅಸ್ಪದ ಇರಲಿಲ್ಲ. ಅಲ್ಲಿ ಭೂತ ವರ್ತಮಾನ ಭವಿಷ್ಯತ್ ಎಲ್ಲ ಕಾಲಗಳೂ ಒಂದೇ. ಅಲ್ಲಿ ಕಾಲದ ಮಿತಿ ಇರಲಿಲ್ಲ.ನಿರಂತರವೂ ಹರಿಯುವ ಪ್ರೀತಿಯೊಂದೇ ಇತ್ತು.



ಸೃಷ್ಠಿವನದಲಿ ನೋಡು ಬಗೆ ಬಗೆಯ ಪುಷ್ಪ 
ಕಾದಿಹುದು ಮಧುಕರಗೆ ಚೆಲ್ಲುತ್ತ ಕಂಪ ತಂಪ 
ಗೆಳತಿ ನೀ ಹೂವಾಗು ಪ್ರೀತಿ ಒಲವಿಂದ 
ಬಳಿಬರುವೆ ಭೃಂಗರಾಜನ ತೆರದಿ ಪ್ರೀತಿಯಿಂ




 ಚಿತ್ರವನ್ನ ಕರುಣಿಸಿದವರು ದಿಗ್ವಾಸ್ ಹೆಗ್ಡೆ ಮತ್ತು ಗಣಪತಿ ಹೆಗ್ಡೆ (ಕಲಾವಿದ)
http://chithrapata.blogspot.com/
http://kalaavida-hegde.blogspot.com/





5 comments:

  1. ಭಟ್ಟರೇ,
    ಚಿತ್ರಗಳನ್ನು ಪಕ್ಕಕ್ಕಿಟ್ಟು ಶೃ೦ಗಾರ ರಸಕಾವ್ಯ ಹರಿಸಿದ್ದೀರಿ. ತು೦ಬ ಚೆನ್ನಾಗಿದೆ. ಇನ್ನು ಗೆಳತಿಯೇ ಪಕ್ಕಕ್ಕಿದ್ದರೆ ಇನ್ನೆ೦ತಹ ಕವನ ಹುಟ್ಟೀತು !!!!

    ReplyDelete
  2. MB, ninna kaavyagalige inspire aada aa "gelati" yaaru ? :)

    ReplyDelete
  3. @PARAANJAPE ಸರ್........ ಧನ್ಯವಾದಗಳು ಮೆಚ್ಚಿದ್ದಕ್ಕೆ ........ಸಧ್ಯಕ್ಕೆ ಗೆಳತಿ ಪಕ್ಕದಲ್ಲಿಲ್ಲ ಅದಕ್ಕಾಗಿ ಕಲ್ಪನಾ ಲೋಕದಲ್ಲಿ ವಿರಹಿಸಲು ಅನುಕೂಲವಾಗಿದೆ...... ಪಕ್ಕದಲಿ ಅವಳಿದ್ದರೆ ಕಲ್ಪನಾ ಲೋಕ ವಾಸ್ತವ್ಯಕ್ಕೆ ಇಳಿದು ಕವನ ಬರೆಯುವ ಸಮಯದಲ್ಲಿ ದಿನಸಿ ಪಟ್ಟಿಯನ್ನ ತಯಾರುಮಾಡುವ ಸಂದರ್ಭ ಒದಗಿಬರಬಹುದೇನೊ............ ನಿಮ್ಮ ಆಶೀರ್ವಾದ ಹೀಗೆ ಇರಲಿ ................................ಧನ್ಯವಾದಗಳು

    ReplyDelete
  4. @ಪ್ರೀತಿಯ ಕಲಾವಿದಾ :- ನನ್ನ ಕವನಗಳಿಗೆ ಸ್ಪೂರ್ತಿ ಅದ ಆ ಗೆಳತಿಯರು ನಿಮ್ಮ photo ಗಳೆ ಹೊರತು ಯಾವ ಗೆಳತಿಯೂ ಇಲ್ಲ.......ಯದ್ಭಾವಂ ತದ್ಭವತಿ ಅನ್ನುವಂತೆ ..... ನಿಮ್ಮ ಅಂದವಾದ ಚಿತ್ರದಲ್ಲಿ ಯಾವಾಗಲೂ ಕಲ್ಪನಾ ಲೋಕದ ಕನ್ಯೆಯರನ್ನ ಕಾಣುತ್ತಲೇ ಇರುತ್ತದೆ ನನ್ನ ಮನ ........... ಇಂತಹ ಚಿತ್ರಗಳನ್ನ ಕರುಣಿಸಿದ್ದಕ್ಕೆ ......ನಿಮಗಿದೋ ನಮನ ...............:)

    ReplyDelete
  5. tumbaa tumbaa chennaagide....

    phoTo noDine inthaha kavana huTTidare..... geLati noDi innentha kavite bareyabahudu bhaTTare.../

    ReplyDelete