Saturday, March 26, 2011

ಅಘನಾಶಿನಿ


ಗಿರಿಶಿಖರ ಕ೦ದರದ ಹಸಿರ ತೊರೆಯಲಿ ಜನಿಸಿ
ಹರಿಯುತಿಹೆ ಬಳುಬಳುಕಿ ಜಗಕೆ ನೀರುಣಿಸಿ
ಕ್ಷೀರಸಾಗರದ೦ತೆ  ನೊರೆನೊರೆಯ  ಜಲರಾಶಿ
ಪೊರೆದು  ಪೋಷಿಸುತಿರುವೆ  ಸಸ್ಯಕಾಶಿ 


ಅಘನಾಶಿನಿಯೇ ನೀನು ಜನಮನದ ಜೀವನದಿ
ನಿನ್ನ ನ೦ಬಿದ ಜನರು ಬದುಕುವರು ಸುಖದಿ 
ಸಾಗರವ ಸೇರಲಿಕೆ ಎನಿತು ಆತುರ ನಿನಗೆ  
ನಿನ್ನ ನಿನಾದವದು ಮುದವು ಮನಕೆ


 ನಿನ್ನ ಸಾ೦ಗತ್ಯದಲಿ ಹಸನು ರೈತನ ಬಾಳು
  ಉಣಿಸುವೆಯ ನೀರನ್ನು ಕಳೆದು ಗೋಳು
ಪ್ರತಿಫಲಾಪೇಕ್ಷೆಯನು ಬಯಸಿಲ್ಲ ನೀನೆ೦ದೂ     
ಹಸಿರು ನಳನಳಿಸುತಿಹುದು ನಿನ್ನ ದಯದಿ೦ದ

ಪ್ರೀತಿಯಿಂದ ಮೇಲಿನ
 ಕವನವನ್ನ ನನಗಾಗಿ ಮತ್ತು ಗಣಪತಿಗಾಗಿ(ಕಲಾವಿದ) ಬರೆದು ಕೊಟ್ಟವರು ಪರಾಂಜಪೆ ಸರ್ ರವರು. ಅವರಿಗೆ ಋಣಿಯಾಗಿದ್ದೇವೆ



ಹರಿಯುತಿರುವೆಯು ನದಿಯೆ ಬಳುಕಿ ನೀ ಪರ್ವತದಿ
ತಿರುವು ಮುರುವಲಿ  ಹರಿದು ಸೇರುವೆಯು ಸಾಗರದಿ
ಶ್ವೇತ ಬಣ್ಣವತಳೆದು ಕ್ಷೀರನದಿ ನೆನಪಿಸುವೆ  
 ಅಘನಾಶಿನಿಯು ನೀ ಜನಮನವ ಪೊರೆವೆ    


ಜಲದರಾಶಿಯಕಾಣೆ  ಹಾಲಂತೆ ತೋರುವದು
ನದಿಯು ತಾ ಕ್ಷೀರ ಬಣ್ಣವತಳೆದು  ಓಡುತ್ತಲಿಹುದು
ಬಳುಕಿ ಓಡುವ ನದಿಯ ದೂರದಿಂದಲಿ ಕಂಡು
ಸಂದೇಹ ಮೂಡುವದು ಹಾಲೋ ನೀರೋ  ಎಂದು

ಚಿತ್ರ - ಗಣಪತಿ ಹೆಗ್ಡೆ (ಕಲಾವಿದ)
http://kalaavida-hegde.blogspot.com/





4 comments: