Tuesday, April 19, 2011

ಗೇಣು ನೇಯುವ ತನಕ ಮಾರು ಹರಿದು ಹೋಗುತ್ತದೆ................ ಒಮ್ಮೊಮ್ಮೆ ಯಾಕೆ ಹೀಗಾಗುತ್ತದೆ. ಗೇಣು ನೇಯುವ  ತನಕ ಮಾರು ಯಾಕೆ ಹರಿದು ಹರಿದು  ಹೋಗುತ್ತದೆ.  ಕೃಷ್ಣ ಭಗವದ್ಗೀತೆಯಲ್ಲಿ ಕರ್ಮಣ್ಯೇವಾಧಿಕಾರಾಸ್ತೆ ಮಾ ಫಲೇಷು ಕದಾಚನ ಅಂತ ಹೇಳಿದ್ದಾನೆ. ನಿಜ ...! ಹಾಗಂತ ಮಾಡುವ ಕೆಲಸವನ್ನೆಲ್ಲ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಲು ನಮ್ಮಿಂದ ಸಾಧ್ಯವೇ. ...? ಇಲ್ಲ ಅಲ್ವಾ...! ನಾವು ಮಾಡುವ ಪ್ರತಿಯೊಂದು ಕೆಲಸವನ್ನ  ಯಾವುದಾದರೂ ಒಂದು ಫಲಾಪೇಕ್ಷೆ ಇಟ್ಟುಕೊಂಡೇ ಮಾಡುತ್ತೇವೆ ಅಲ್ಲವೇ...? ಹೀಗೆ ಫಲಾಪೇಕ್ಷೆ ಇಟ್ಟುಕೊಂಡು ಮಾಡುವ ಕೆಲಸಗಳನ್ನ ಸರಿಯಾಗಿ ಮಾಡಿದಾಗಲೂ ನಿರೀಕ್ಷಿತ ಫಲ ಬೇಡ, ಕಿಂಚಿತ್ತಾದರೂ ಫಲಿಸ ಬೇಕಲ್ಲ. ಎಲ್ಲಾ ಶ್ರಮ ವ್ಯಯವಾದಮೇಲೂ ಏನು ಫಲ ಸಿಕ್ಕಿಲ್ಲ ಅಂದರೆ ಬೇಜಾರಾಗೊಲ್ವಾ....? ಬೇಜಾರಾಗುವದು ಮನುಷ್ಯನ ಸಹಜ ಗುಣ. ಯಾಕೆ ಹೀಗಾಗುತ್ತೆ ನನಗೂ ಗೊತ್ತಿಲ್ಲ. ಒಮೊಮ್ಮೆ ಹೀಗಾಗಿಬಿಡುತ್ತದೆ. ಪ್ರಯತ್ನವೆಲ್ಲವೂ ನೀರಿನಲ್ಲಿ ಮಾಡಿದ ಹೋಮವಾಗಿ ಬಿಡುತ್ತೆ. ಇಂತಹ ಸಂದರ್ಭದಲ್ಲೇ  ಇಂತಹ ಜೀವನದ ಕೊಂಡಿಯ ಮಧ್ಯದಲ್ಲೇ ಯಾರೋ ಜ್ಯೋತಿಷಿಯ ಮನೆಯ ಮುಂದೆ ನಿಂತಿರ್ತೇವೆ. ನಮ್ಮ ನಿಡುಸೊಯ್ದ ಮುಖಭಾವನೆಯನ್ನ ಗೃಹಿಸಿಯೇ ಅವನು ಈ ಮಾತು ಹೇಳಿರ್ತಾನೆ."ಸ್ವಾಮಿ ನಿಮ್ಮ ಗ್ರುಹಚಾರ ಎಡಕ್ಕಿದೆ"  ಅಂತಾನೆ. ನಮಗೂ ಅಹುದೌದೆನಿಸುತ್ತೆ. ಇಂತಹ ಮನಸ್ಥಿತಿಯಲ್ಲಿರುವಾಗ ಅಥವಾ ಸೋಲನ್ನ ಮೈಮೇಲೆ ಎಳೆದುಕೊಂಡಿರುವಾಗ ನಾವೂ ಕೂಡ ಇಂತಹದ್ದನ್ನೆಲ್ಲ ನಂಬಿಬಿಡ್ತೇವೆ. ಜೇಬಿನಲ್ಲಿದ್ದ ದುಡ್ಡೆಲ್ಲವನ್ನ ಅಂತಹವರ ಮುಂದೆ ಧಕ್ಷಿಣೆಯ ರೂಪದಲ್ಲಿ ಕರ್ಚುಮಾಡಿ ಬಂದಿರ್ತೇವೆ. ಅದಕ್ಕಾಗಿಯೇ ಇಂತಹ ಮನಸ್ಥಿತಿಯವರನ್ನ ಗುರಿಯಾಗಿಸಿಕೊಂಡು ಇಂತಹ ಜನರನ್ನೇ ಉಪಯೋಗಿಸಿಕೊಂಡು ನಮ್ಮ ಸಮಾಜದಲ್ಲಿ ಅನೇಕಾನೇಕ ಪುಂಗಿ ಜ್ಯೋತಿಷಿಗಳು, ಡೋಂಗಿ ಸನ್ಯಾಸಿಗಳು,  ಹುಟ್ಟಿಕೊಂಡಿದ್ದಾರೆ. ಜನರ ಪರಿಸ್ಥಿತಿಯ ಲಾಭ ಪಡೆಯಲು ಅನೇಕ ಸಂಘ ಸಂಸ್ಥೆಗಳು, ಕಂಪನಿಗಳು, ಹುಟ್ಟಿಕೊಳ್ಳುತ್ತದೆ.

ಅದಲ್ಲಾ  OK ತಮ್ಮಾ ಗೇಣು ನೇಯುವ ತನಕ ಮಾರು ಯಾಕೆ ಹರಿದು ಹೋಗುತ್ತದೆ..........? ಅದು ನಿಮ್ಮ  ಪ್ರಶ್ನೆ ಅಲ್ವಾ...?  ಇಂತಹ ಸಂನ್ನಿವೇಶದಲ್ಲಿ ಛಲಬಿಡದೆ ಗುರಿಯನ್ನ ತಲುಪುವದು ಹೇಗೆ ಅಂತ ನಮ್ಮಲ್ಲಿ ಪ್ರಶ್ನೆ ಹುಟ್ಟಿಕೊಳ್ಳುವದು ಸಹಜ. ಗೇಣು ನೇಯುವ ತನಕ ಮಾರು ಯಾಕೆ ಹರಿದು ಹೋಗುತ್ತದೆ ಎ೦ಬ  ಜಿಜ್ಞಾಸೆಗೆ ಖಚಿತ ಉತ್ತರ ನನ್ನ ಬಳಿ ಇಲ್ಲ. ಆದರೆ ಕಷ್ಟ ಪಡುವವನಿಗೆ ಕಷ್ಟಗಳು ಜಾಸ್ತಿ ಬರುವುದು ಜೀವನ ನಿಯಮ ಇರಬೇಕು.ಆತನಿಗೆ ಕಷ್ಟವನ್ನು ತಾಳಿಕೊಳ್ಳುವ ಸಾಮರ್ಥ್ಯ ಇದೆಯಲ್ಲ ಅದಕ್ಕೆ ಮತ್ತೆ ಮತ್ತೆ ಅವನಿಗೆ ತೊ೦ದರೆಗಳು ಅಡ್ಡ ಬರುತ್ತವೆ. ಬದುಕು ಹಸನಾಗ್ತಿದೆ  ಅಂದುಕೊಳ್ತೇವೆ. ಆದರೆ ಜೊತೆಗಿದ್ದ ಹೆಂಡತಿ ವಿವಾಹ ವಿಚ್ಛೇದನಕ್ಕೆ ಲಾಯರನ್ನ  ಸಂಪರ್ಕಿಸುತ್ತಿರುತ್ತಾಳೆ. ಒಹ್.......! ಒಳ್ಳೆ ಹುದ್ಧೆ ಸಿಕ್ಕಿದೆ ಕೈತುಂಬಾ ಸಂಬಳ ಅಂದುಕೊಳ್ಳುತ್ತೇವೆ. ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಕಿರಿಕ್ ಆಗಿ ಕೆಲಸದಿಂದ ಹೊರಗೆ ಬರುವ ಪರಿಸ್ಥಿತಿ ನಿರ್ಮಾಣ ಆಗಿಬಿಟ್ಟಿರುತ್ತದೆ. ಈ ವರ್ಷ ಭಾರಿ ಬೆಳೆ ಬರಬಹುದು ಅಂತ ನಿರೀಕ್ಷೆಯಲ್ಲಿರ್ತೇವೆ ಅತಿಯಾದ ಮಳೆಯಿಂದ ಫಲಿಸಿದ ಫಲವೆಲ್ಲವೂ ನೀರು ಪಾಲಾಗಿರುತ್ತೆ.ಇನ್ನೇನು ಜೀವನ ವ್ಯಾಪಾರದಲ್ಲಿ  ಒಂದು ಹಂತಕ್ಕೆ ಬಂತು ಅಂತ ಅಂದು ಕೊಂಡಿರ್ತೇವೆ. ಹಾಕಿದ ಬಂಡವಾಳವೂ ವಾಪಸ್ ಬರದ ರೀತಿಯಲ್ಲಿ ವ್ಯವಹಾರ ಮುಗ್ಗರಿಸಿರುತ್ತದೆ.ಮತ್ತೆ ಶುರುವಾಗುತ್ತದೆ ನಮ್ಮ ನೇಯುವ ಕೆಲಸದ ಆರಂಭ. ಹೊಸ ಸಂಗಾತಿಯನ್ನ ಹುಡುಕಿಕೊಳ್ಳುವದು ಅನಿವಾರ್ಯ. ಮತ್ತೆ ಉದ್ಯೋಗ ಬೇಟೆ ಶುರು. ನೀರಿನಲ್ಲಿ ಮುಳುಗಿಹೋದ ಕೃಷಿಭೂಮಿಯಲ್ಲಿ ಮತ್ತೆ ನೇಗಿಲ ಕಾಯಕ ಆರಂಭಿಸಬೇಕು. ಹಾಗಂತ ನಾವು ತಲುಪಬೇಕಾದ ಗಮ್ಯವು ಸಿಗುವ ತನಕ ಪ್ರಯತ್ನಿಸುತ್ತಲೇ ಇರಬೇಕು. ಸಾಧನೆಯ ಹಾದಿಯಲ್ಲಿ ವಿಘ್ನಗಳು ಬಹಳ. ಒಂದು ಗೆಲುವು ನಿಮ್ಮದಾಗುವವರೆಗೆ ನಾವು ಶ್ರಮಿಸುತ್ತಲೇ ಇರಬೇಕು.ಯಾವಾಗ ನೀವು ಗೆಲುವಿನ ಸೂತ್ರವನ್ನ ಹಿಡಿತ್ತೀರೋ ಆಗ ನಮಗೆ ವಿಘ್ನಗಳ ನಂಟು ಕಡಿಮೆ. ಸಾವಿರ ಸುತ್ತು ನಾವು ಪ್ರಯತ್ನಿಸಿದರೂ ಒಮ್ಮೋಮ್ಮೆ ಕೆಲಸ ಆಗದೆ ಇರಬಹುದು. ಹಾಗಂತ ಛಲವನ್ನ ಬಿಡಬಾರದು ಅಲ್ವಾ? ನಮ್ಮ ಜಯ ಸಾವಿರದ ಒಂದನೇ ಬಾರಿಯ ಪ್ರಯತ್ನದಲ್ಲಿ ಅಡಗಿರಬಹುದು.ಮಾಡಿದ ಮೂರುಮುಕ್ಕಾಲು ಪ್ರಯತ್ನ ಕೈ ಕೊಟ್ಟಿತೆಂದು ಅಧರಿ ಕುಳಿತರೆ ಆಗದು. ಮತ್ತೆ ನಾಲ್ಕನೇ ಪ್ರಯತ್ನಕ್ಕೆ ನಮ್ಮನ್ನ ನಾವು ಅಣಿಯಾಗಿಸಿಕೊಂಡಿರಬೇಕು. ಜೀವನವೇ ಹಾಗೆ ಗೇಣು ನೇಯುವ  ತನಕ ಮಾರು ಹರಿದು ಹೋಗುತ್ತದೆ. ಹಾಗಂತ ನೇಯುವಿಕೆಯನ್ನ ಬಿಡಬಾರದು. ಯಾವುದೋ ಸಂದಿಯಲ್ಲಿನ ಜ್ಯೋತಿಷಿಯ ಮಾತು ನಂಬಿ ಮುಂದಿನ ವರ್ಷ ಗ್ರಹಗತಿ ಬದಲಾಗುತ್ತದೆ ಅಂತ ಕಾಯ್ದು ಕುಳಿತುಕೊಳ್ಳಬಾರದು. ನಮ್ಮಲ್ಲಿರುವ ತುಡಿತಗಳಿಗೆ  ಬಣ್ಣವನ್ನ ಹಚ್ಚುತ್ತಲೇ ಇರಬೇಕು. 

ಅಂತ್ಯಾಕ್ಷರ
ಗೆಳೆಯರೇ ಜೀವನದಲ್ಲಿ  ಒಂದಲ್ಲಾ ಒಂದು ತರಹದಲ್ಲಿ  ಗೇಣು ನೇಯುವ ತನಕ ಮಾರು ಹರಿದು ಹೋಗುತ್ತಲೇ ಇರುತ್ತದೆ.ಹಾಗಂತ ನೇಯುವದನ್ನ ನಿಲ್ಲಿಸಲೇ ಬಾರದು. ಜೀವನ ಸೂತ್ರವನ್ನ ನೇಯುತ್ತಲೇ ಇರುವ ಕೆಲಸ ನಮ್ಮದು. ಸಾವಿರದ ಒಂದನೆ ಪ್ರಯತ್ನದಲ್ಲಾದರೂ ಯಷಸ್ಸು ನಮ್ಮದಾಗಿಯೇ ಆಗುತ್ತದೆ. ಇಂತಹ ಜಯವು ನನಗೂ ನಿಮಗೂ ಜೀವನದಲ್ಲಿ ಬರಲೆಂದು ಶುಭಕೋರುತ್ತೇನೆ.

12 comments:

 1. viju ಅವರೇ ಧನ್ಯವಾದಗಳು.ನನ್ನ ಬ್ಲಾಗಿಗೆ ನಿಮಗೆ ಸ್ವಾಗತ ................. ಜೀವನವೇ ಹಾಗಲ್ಲವೇ ಅದು ನಿರಂತರ ಬದಲಾವಣೆಯನ್ನ ಬೇಡುತ್ತಿರುತ್ತದೆ. ಅದರಮಧ್ಯದಲ್ಲಿ ಕೆಲವೊಂದುಬಾರಿ ನಮ್ಮ ಪ್ರಯತ್ನವೆಲ್ಲವೂ ಯಾಕೋ ಫಲವನ್ನ ಕೊಡುವದೇ ಇಲ್ಲ. ಮತ್ತೆ, ಮತ್ತೆ ಪ್ರಯತ್ನ ಮಾಡುತ್ತಲೇ ಇರಬೇಕಾಗುತ್ತದೆ ಅಲ್ಲವೇ.............................................

  ReplyDelete
 2. ಲೇಖನ ಆತ್ಮೀಯವಾಗಿ ಧೈರ್ಯ ಹೇಳುತ್ತಿದೆ...ತುಂಬ ಚೆನ್ನಾಗಿದೆ..

  ReplyDelete
 3. ನಾರಯಣ ಭಟ್ಟರೇ ಧನ್ಯವಾದ .... ಮನಸ್ಸಿನ ಮೂಲೆಯಲ್ಲಿ ಅವಿತಿರತಕ್ಕಂತಹ ನನ್ನ ಅನುಭವವನ್ನ ಹಂಚಿಕೊಂಡಿದ್ದೇನೆ... ಧನ್ಯವಾದ

  ReplyDelete
 4. ಈ ಜೀವನ ಅಸ್ಟು ಸುಲಭವಾಗಿ ಅರ್ಥವಾಗುವಂತಿದ್ದರೆ ಜೀವನದಲ್ಲಿನ ಆಸಕ್ತಿಯೇ ಹೊರಟು ಹೋಗುವುದೇನೊ ಅಲ್ಲವೇ.... ಸೋಲು ಗೆಲುವು.. ಹೊಸ ಹೊಸ ತಿರುವುಗಳು... ಎಲ್ಲವುದಕ್ಕೂ ನಾವು ಕಾಯಲೇಬೇಕು.ಪ್ರಯತ್ನವಸ್ಟೇ ನಮ್ಮದು....
  ಬರಹ ಚೆನ್ನಾಗಿದೆ...
  ಸೋಲಿಗೆ ಕುಗ್ಗದ.. ಗೆಲುವಿಗೆ ಹಿಗ್ಗದ ಮನಸ್ಸು ನಿಮ್ಮದಾಗಲಿ....

  ReplyDelete
 5. ಗುರು ಉದಯ ಧನ್ಯವಾದ - ಕಷ್ಟಗಳು ಬಂದಂತೆಲ್ಲ ಮನಸ್ಸು ಬಂಡೆಗಲ್ಲಿನಂತಾಗುತ್ತದೆ. ನೀನೆಂದಿದ್ದು ನಿಜ ಜೀವನವು ಅಷ್ಟು ಸುಲಭವಾಗಿ ಅರ್ಥವಾಗುವಂತದ್ದಲ್ಲ

  ReplyDelete
 6. ಸಮುಚಿತವಾದ ಹಿತವಚನ. ಬಾಳಿನಲ್ಲಿ ಧೈರ್ಯ ತುಂಬುವ ಲೇಖನ.

  ReplyDelete
 7. Olleya Baraha MB, jeevanave haage...ellinda elligo karedukondu hoguttade.

  ReplyDelete
 8. olle article.. sole geluvina sopana.. dukade nade nee jopana...

  ReplyDelete
 9. ಉತ್ತಮ ಬರಹಕ್ಕೆ ಅಭಿನಂದನೆಗಳು ಭಟ್ಟರೇ.ಕರ್ಮ ಸಿದ್ಧಾಂತದ ಉತ್ತಮ ವಿಶ್ಲೇಷಣೆ.

  ReplyDelete
 10. Ha...... to over come this kind of situation, people developed 2 stretagies, 1 Probability and 2 Contingency plans.

  Probabality : to understand the risk factor, that effect ........
  Contingency plans: a plan to over come from above insident.......
  ;-)

  ReplyDelete