ಕುಂಚ ಚಿತ್ರವು ಸಾರಿ ಹೇಳಿದೆ ನೂರು ಕಥೆಗಳನು
ಮನದ ಭಾವವು ಕೈಯ್ಯ ಚಳಕದಿ ಮೂಡಿ ಬಂದಿಹುದು
ಸೂಕ್ಷ್ಮವಾಗಿ ಗೃಹಿಸಿ ನೋಡಲು ಮನವು ತುಡಿಯುವದು
ಹಸಿರು ಮಚ್ಚಿನ ನನ್ನ ಊರಿನ ನೆನಪು ಸುಳಿಯುವದು
ಅಲ್ಲಿ ಅಲ್ಲಿ ತಲೆಯನೆತ್ತಿಹ ಹಂಚು ಮನೆಯಿಹುದು
ಹಸಿರನುಟ್ಟ ಪ್ರಕೃತಿಯಲ್ಲಿ ಎಷ್ಟು ಚಲುವಿಹುದು
ಪಕ್ಕದಲ್ಲೆ ಹಸಿರುವಾಣಿಯ ಸಾಲು ಸಾಲಿಹುದು
ತಂಪ ನೀಡಿ ಮಳೆಯ ಬರಿಸುವ ಮರವು ಅಲ್ಲಿಹುದು
ಕೈಯ್ಯ ಚಳಕದಿ ಹಳ್ಳಿ ಚಿತ್ರವು ರಚನೆಗೊಂಡಿಹುದು
ಹಳ್ಳಿವಾಸದ ನೆನಪು ಬಂದು ಮನವು ಕೊರಗುವದು
ಹಸಿರುಇಲ್ಲದ ಪ್ಯಾಟೆ ಸಂಧಿಲಿ ಏನು ಸುಖವಿಹುದು
ಹಳ್ಳಿ ವಾಸವು ಪರಮಸುಖವದು ಸ್ವರ್ಗ ಅಲ್ಲಿಹುದು
(ಪ್ರೀತಿಯಿಂದ ಚಿತ್ರವನ್ನ ಕರುಣಿಸಿದವರು ಅಕ್ಕ ರಂಜಿತಾ ಭಟ್ )
ಹಳ್ಳಿ ವಾಸವು ಪರಮಸುಖವದು ಸ್ವರ್ಗ ಅಲ್ಲಿಹುದು....ನಿಜ
ReplyDeleteಸುಂದರ ಸಾಲುಗಳು ..ಹಳ್ಳಿ ವಾಸದ ನೆನಪು ಬಂದು ಮನವು ಕೊರಗುವುದು...ಸತ್ಯವಾದ ಮಾತು.
ReplyDeleteಹಳ್ಳಿಯ ಜೀವನದಲ್ಲಿ ಪರಮ ಸ್ವರ್ಗವಿರುವುದು..ಅಕ್ಷರಶಃ ನಿಜವಾದ ನುಡಿಗಳು.
ReplyDeletechitra nODidre svarga khanDita houdu... ashTondu hasiru ide alli...
ReplyDeletechandada kavana , chitrakke dhanyavaada...