Thursday, April 21, 2011

ಕುಂಚ ಚಿತ್ರವು ಸಾರಿ ಹೇಳಿದೆ ನೂರು ಕಥೆಗಳನು





ಕುಂಚ ಚಿತ್ರವು ಸಾರಿ ಹೇಳಿದೆ ನೂರು ಕಥೆಗಳನು 
ಮನದ ಭಾವವು ಕೈಯ್ಯ ಚಳಕದಿ ಮೂಡಿ ಬಂದಿಹುದು
ಸೂಕ್ಷ್ಮವಾಗಿ ಗೃಹಿಸಿ ನೋಡಲು ಮನವು ತುಡಿಯುವದು 
ಹಸಿರು ಮಚ್ಚಿನ ನನ್ನ ಊರಿನ ನೆನಪು ಸುಳಿಯುವದು 

ಅಲ್ಲಿ ಅಲ್ಲಿ ತಲೆಯನೆತ್ತಿಹ ಹಂಚು ಮನೆಯಿಹುದು 
ಹಸಿರನುಟ್ಟ ಪ್ರಕೃತಿಯಲ್ಲಿ ಎಷ್ಟು ಚಲುವಿಹುದು  
ಪಕ್ಕದಲ್ಲೆ ಹಸಿರುವಾಣಿಯ ಸಾಲು ಸಾಲಿಹುದು
ತಂಪ ನೀಡಿ ಮಳೆಯ ಬರಿಸುವ ಮರವು ಅಲ್ಲಿಹುದು  

ಕೈಯ್ಯ ಚಳಕದಿ ಹಳ್ಳಿ ಚಿತ್ರವು ರಚನೆಗೊಂಡಿಹುದು 
ಹಳ್ಳಿವಾಸದ ನೆನಪು ಬಂದು ಮನವು ಕೊರಗುವದು 
ಹಸಿರುಇಲ್ಲದ ಪ್ಯಾಟೆ ಸಂಧಿಲಿ ಏನು ಸುಖವಿಹುದು 
ಹಳ್ಳಿ ವಾಸವು ಪರಮಸುಖವದು ಸ್ವರ್ಗ ಅಲ್ಲಿಹುದು 


(ಪ್ರೀತಿಯಿಂದ ಚಿತ್ರವನ್ನ ಕರುಣಿಸಿದವರು ಅಕ್ಕ ರಂಜಿತಾ ಭಟ್ )

4 comments:

  1. ಹಳ್ಳಿ ವಾಸವು ಪರಮಸುಖವದು ಸ್ವರ್ಗ ಅಲ್ಲಿಹುದು....ನಿಜ

    ReplyDelete
  2. ಸುಂದರ ಸಾಲುಗಳು ..ಹಳ್ಳಿ ವಾಸದ ನೆನಪು ಬಂದು ಮನವು ಕೊರಗುವುದು...ಸತ್ಯವಾದ ಮಾತು.

    ReplyDelete
  3. ಹಳ್ಳಿಯ ಜೀವನದಲ್ಲಿ ಪರಮ ಸ್ವರ್ಗವಿರುವುದು..ಅಕ್ಷರಶಃ ನಿಜವಾದ ನುಡಿಗಳು.

    ReplyDelete
  4. chitra nODidre svarga khanDita houdu... ashTondu hasiru ide alli...
    chandada kavana , chitrakke dhanyavaada...

    ReplyDelete