Thursday, September 23, 2010

ನಿನಗೇನಿದೆ ಹಕ್ಕು ?



ಇಂದವಳು ಸಿಕ್ಕಿದಳು ಮಾತನಾಡಿದಳು
ಹೇಗಿದ್ದವನು ಹೇಗಾದೆ ಎಂದಳು
ಅಡಿಯಿಂದ ಮುಡಿಗೊಮ್ಮೆ ದಿಟ್ಟಿಸಿದೆ
ಮತ್ತೆ ಮೌನವ ತಾಳಿ ಸುಮ್ಮನೆ ನಿಟ್ಟುಸಿರ ಬಿಟ್ಟೆ
ನನ್ನಲ್ಲೂ ಪ್ರಶ್ನೆ ಉದ್ಭವಿಸಿತ್ತು ನೀನ್ಯಾಕೆ ಹೀಗೆ ಮಾಡಿದೆ ಎಂದು
ಮೌನವು ಮುರಿದು ಮಾತಾಗಿ ಹದವಾಗಿ ಪ್ರೀತಿಯು ಬಲಿತು
ನನ್ನ ನೀ ನೀನ್ನ ನಾ ಹೊಕ್ಕು ಅರಿಯುವ ವೇಳೆ
ತಿರುವಿನಲ್ಲಿ ಕೈ ಬೀಸಿ ಒಳಸರಿದು ಮತ್ತಾರಿಗೋ ಒಲಿದೆಯಲ್ಲ
ಕೊಂಕುಳಲಿ ಅದಾರದೋ ಗುರುತು ಮತ್ತಾರಿಗೋ ವಿಧೇಯ
ಮತ್ತೆಲ್ಲಿಗೋ ಸರಿದು ಒಂದು ಎರಡಾಗಿ ಅಲ್ಲ ಮೂರಾಗಿ
ಮತ್ತೆ ನಿನಗೇನಿದೆ ಹಕ್ಕು ನನ್ನ ಕೇಳಲು ಹೇಗಿದ್ದವನು ಹೇಗಾದೆ ಯಂದು

ನನ್ನದು ಸತ್ತು ಮಲಗಿದ ಪ್ರೀತಿ ಎಲ್ಲೆಲ್ಲೂ ಒಬ್ಬಂಟಿ ಸುತ್ತ ಕೊಳೆಯುವ ಗತನೆನಪು
ಬಿಟ್ಟುಹೋದರೆ ಸತ್ತುಬಿಡಬೇಕಿತ್ತೆಂಬ ಭಾವ ಆದರು ಉಳಿದುಕೊಂಡಿದೆ ಜೀವ
ನೀನಿಲ್ಲದಾ ಗಳಿಗೆ ಅನಾಥವಾದೇನೆಂಬ ಭಾವ ಒಳಸರಿದು ಮುದುಡಿ ಕೊಂಡಿಹ ಜೀವ
ಮತ್ತೆ ಹೇಗಿರಬಹುದು ಬದುಕು ಬೆಳೆಸಿದ ಪ್ರೀತಿಯನು ನೀನೆ ಚೂಟಿ ಹಿಸುಕಿದ ಮೇಲೆ
ಮತ್ತೆ ನಿನಗೆನಿದೆ ಹಕ್ಕು ನನ್ನ ಕೇಳಲು ಹೇಗಿದ್ದವನು ಹೇಗಾದೆ ಯಂದು
*(ಚಿತ್ರ ಯಾರೋ ಅಂತರ್ ಜಾಲದಲ್ಲಿ ಪ್ರೀತಿ ಕೈ ಕೊಟ್ಟವರ ಕೃಪೆ )

1 comment:

  1. Abba....... Hrudaya kalkro......!!!!!!! ಮತ್ತೆ ನಿನಗೇನಿದೆ ಹಕ್ಕು ನನ್ನ ಕೇಳಲು ಹೇಗಿದ್ದವನು ಹೇಗಾದೆ ಯಂದ
    idu ondu saalu saaku...!!!! hrudayakke naatalu....!!! Dhanyavaadagalu.......Preeti Heege irali...

    Santosh bhat

    ReplyDelete