ಕಟ್ಟಿರುವ ಮೋಡಗಳೆಲ್ಲವೂ ಮಳೆ ಸುರಿಸಲೇ ಬೇಕಾ
ಕೂಡಿರುವ ಮನಸುಗಳು ಮುಂದೆ ಒಂದಾಗಿ ಬಾಳಲೇ ಬೇಕಾ
ಕರಿಮೋಡ ಅಬ್ಬರಿಸಿ ಮಿಂಚಿ ಗಾಳಿಗೆ ತೇಲಿ ಎಲ್ಲಿಯೋ ಬೀಳುವ ಹಾಗೆ
ಹೆಪ್ಪುಗಟ್ಟಿದ ಪ್ರೀತಿ ರಮಿಸಿ ಮತ್ತೆಲ್ಲಿಗೋ ಹೋಗಿ ಯಾರ ತೆಕ್ಕೆಗೋ ಸೇರುವ ಹಾಗೆ
ಮೆಲ್ಲ ಗಾಳಿ ತುಂತುರು ಹನಿ ಕಾಮನ ಬಿಲ್ಲು ಸ್ವಲ್ಪ ಚಳಿ ಮಂಜು
ಮಾತು ಕಣ್ಣ ನೋಟ ಕಚಗುಳಿ ಹಸಿ ನಗು ಆಲಿಂಗನ ಹಾರೈಕೆ
ಕಪ್ಪು ಮೋಡ ಸಿಡಿಲ ಅಬ್ಬರ ಮಿಂಚು ಗುಡುಗು ಚಂಡಮಾರುತ
ಬಸಿಯಪ್ಪುಗೆ ಚುಂಬನ ತವಕ ಮುತ್ತೆ ಸುಖದ ಉತ್ತುಂಗ ಏರಿಳಿತ
ಅದ್ಯಾಕೋ ಇಂದು ನೆನಪಾಗುತಿದೆ ಇವುಗಳೆಲ್ಲವೂ ಬಯಲಿನಲ್ಲಿ ಮಳೆ ನಿಂತ ಮೇಲೆ
No comments:
Post a Comment