Saturday, January 15, 2011

ಹಳ್ಳಿ ಹಾದಿಗೂ ಪ್ಯಾಟೆ ರೋಡಿಗೂ ವ್ಯತ್ಯಾಸವುಂಟು

ಹಳ್ಳಿ ಹಾದಿಗೂ ಪ್ಯಾಟೆ ರೋಡಿಗೂ ವ್ಯತ್ಯಾಸವುಂಟು
ಹಳ್ಳಿಯ ದಾರಿಯಲಿ ಸಿಕ್ಕುವವರು 
ಪಕ್ಕದ ಮನೆಯ ಚಿಕ್ಕಮ್ಮನೋ
ಮತ್ತಲ್ಲ ಆಚೆಯ ಮನೆಯ ದೊಡ್ಡಪ್ಪನೊ
ಮೇಲಿನ ಕೇರಿಯ ಶೆಟ್ಟರೋ
ಬಸ್ಸು ತಪ್ಪಿಸಿಕೊಂಡು ನಡೆದೇ ಬರುವ ಹೆಗಡೆಯವರೊ
ಅಂಗಳದಿ ಎತ್ತಾಡಿಸಿದ ರಾಮಜ್ಜನೋ
ಮಣ್ಣಾಟವಾ ಜೊತೆಯಲಾಡಿದ ಸ್ನೇಹಿತನೊ
ಮತ್ತೆ ಕಲಿಸಿದಾ ಅಕ್ಕೊರೊ ಮಾಸ್ತರರೋ
ಪೆಪ್ಪರ ಮೆಂಟ ಕೊಡುವ ಮೇಲಿನಂಗಡಿಯ ಸಾಹೇಬನೊ
ಸಿಕ್ಕುವರೆಲ್ಲರೂ ಗುರುತಿರುವವರು,ಪರಿಚಿತರು,ಪ್ಯಾಟೆಯಾ ದಾರಿಯಲಿ ಸಿಕ್ಕುವವರು
ಚಿತ್ರಾನ್ನ ಬೋಂಡ ಬಜ್ಜಿಯಗಾಡಿಯಲಿ ಮಾರುವರು 
ದಿನಸಿ ಅಂಗಡಿಯವನು,ಹೂಮಾರುವವರು
ಮಾಂಸಮಾರುವವರು ,ಬೇಕರಿಯವನು
ಹಣ್ಣಮಾರುವವನು ಹೆಣ್ಣಮಾರುವ ಎಜೆಂಟರು
ನೀರು ಮಾರುವರು,ಪಾನಮಾರುವವರು
ಮಯ್ಯಮಾರಲು ನಿಂತಿಹರು ಕೆಲವರು
ಕುಡಿದು ಬಿದ್ದಿಹ ಕುಡುಕರು ತೂರಾಡುವವರು
ಹೊಡೆದಾಟ ಮಚ್ಚು ಲಾಂಗಹಿಡಿದಿಹ ಜನರು
ಈಗತಾನೆ ಗುಜ್ಜು ನುಜ್ಜಾದ ಬೈಕುಸವಾರನು
ದೈತ್ಯಾಕಾರದ ಶಬ್ಧವ ಮಾಡುವ ವಾಹನವು
ಹೋರಾಟದಾ ಬಾವುಟವ ಹಿಡಿದು ಕೂಗುವವರು
ಶೋಕಿ ವಾಲರು ,ಮತ್ತೆ ಕಿಸೆಕಳ್ಳರು
ಹೊತ್ತಾಯಿತೆಂದು ಓಡುವ ನೌಕರರು
ಪಟ್ಟಿಮಾಡಲು ಹೊರಟರೆ ಉದ್ದವಾಗ ಬಹುದು
ಅದರೆ ಇವರೆಲ್ಲರೂ ನಮಗೆ ಅಪರಿಚಿತರು 

11 comments:

 1. ಮಹಾಬಲ ಗಿರಿ ಭಟ್ಟರೇ, ಶ್ರೀಸುಬ್ರಹ್ಮಣ್ಯದಲ್ಲಿ ನಿನ್ನೆಯೇ ಸಂಕ್ರಾಂತಿ ಎಂದು ಕೇಳಿದೆ. ನಮ್ಮಲ್ಲೆಲ್ಲಾ ನಿನ್ನೆಯೇ ನಡೆಯಿತು. ಸಂಕ್ರಾಂತಿ ಹಬ್ಬ ನಿಮ್ಮ ಜೀವನದಲ್ಲಿ ಆಯುರಾರೋಗ್ಯ ಐಶ್ವರ್ಯ,ಜ್ಞಾನ,ಸಮೃದ್ಧಿ ತರುವ ಮೂಲಕ ಜಗನ್ನಿಯಾಮಕ ನಿಮ್ಮ ಮನೋಭೀಷ್ಟಗಳನ್ನು ನೆರವೇರಿಸಲಿ ಎಂದು ಹಾರೈಸುತ್ತಿದ್ದೇನೆ, ಶುಭಮಸ್ತು.

  ReplyDelete
 2. This comment has been removed by the author.

  ReplyDelete
 3. @ಭಟ್ ಸರ್ ಧನ್ಯವಾದ ಸಂಕ್ರಾಂತಿ ಶುಭಾಶಯ

  @ದಿನಕರ ಸರ್ ಧನ್ಯವಾದ ಮೆಚ್ಚಿದ್ದಕ್ಕೆ, ಸಂಕ್ರಾಂತಿ ಶುಭಾಶಯ

  ReplyDelete
 4. ಹಳ್ಳಿಗೂ ಪ್ಯಾಟೆಗೂ ಎಂಥಾ ವ್ಯತ್ಯಾಸವಲ್ಲವೇ?!

  ನನ್ನ ಬ್ಲಾಗ್ www.nallanalle.blogspot.com ಗೆ ತಮಗೆ ಸ್ವಾಗತ.

  ReplyDelete
 5. ಹಳ್ಳಿ ಹಾದಿಗೂ ಪ್ಯಾಟೆ ರೋಡಿಗೂ ಇರುವ ವೆತ್ಯಾಸ ಚೆನ್ನಾಗಿ ಬರೆದಿದ್ದೀರಿ.ಹಾಗೆ ಹಳ್ಳಿ ಹಾದಿಯಲ್ಲಿ ಉಸಿರಿಗೆ ಶುದ್ದ ಗಾಳಿ ,ಪ್ಯಾಟೆ ರೋಡಿನಲ್ಲಿ ಉಸಿರಿಗೆ ವಿಷಗಾಳಿ,ಅನ್ನೋದನ್ನೂ ಸೇರಿಸಿಬಿಡಿ. ನಿಮಗೆ ಶುಭಾಶಯಗಳು .

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 6. @ನಿಮ್ಮಳಗೊಬ್ಬ ಬಾಲು ............ಅಲ್ಲಲ್ಲ ನಮ್ಮೊಳಗೊಬ್ಬ ಬಾಲು ಅವರೇ.... ನನ್ನ ಬಾಲ ಬಾಷೆಯನ್ನ ಓದಿ ಪ್ರೀತಿಯಿಂದ ಶುಭ ಹಾರೈಸಿದ್ದಕ್ಕೆ ಧನ್ಯವಾದ.
  ಪ್ರೀತಿ ಇರಲಿ .....
  @ಸತೀಶ್... ನಿಜ ಸತೀಶ್ ಸರ್.. ಹಳ್ಳಿಗೂ ಪೇಟೆಗೂ ವ್ಯತ್ಯಾಸ ಬಹಳ. ಯಾಕೋ ಹಳ್ಳಿಯಿಂದ ಬಂದ ನಾವು ಪ್ಯಾಟೆಯ ಅಪರಿಚಿತ ಜನರ ನಡುವೆ ಕಳೆದು ಹೊಗ್ತೀವೇನೊ ಅನ್ನುವ ಭಾವನೆ ಒಮ್ಮೊಮ್ಮೆ ಅಡರಿ ಕೊಳ್ಳುತ್ತದೆ.ಆದ್ರೂ ನಿಮ್ಮಂತ ಸಹೃದಯರು ದಾರಿಯಲ್ಲಿ ಸಿಗ್ತೀರಿ ಅಂತ ಬರವಸೆ ನನಗೆ.....
  ನಿಮ್ಮ ಗುಬ್ಬಚ್ಚಿ ಗೂಡಲಿರುವ ಚಂದದ ಕವನಗಳ ಓದಿ ಸಂತೋಷಪಟ್ಟಿದ್ದೇನೆ ............ಧನ್ಯವಾದಗಳು

  ReplyDelete
 7. ಭಟ್ಟರೆ,
  ಹಳ್ಳಿಯ ಹಾಗು ಪ್ಯಾಟೆಯ ವ್ಯತ್ಯಾಸವನ್ನು ತುಂಬ ಚೆನ್ನಾಗಿ ಗುರುತಿಸಿದ್ದೀರಿ, ತುಂಬ ಚೆನ್ನಾಗಿ ಕವನಿಸಿದ್ದೀರಿ.

  ReplyDelete
 8. ಸುನಾಥ್ ಸರ್ ನನ್ನ ಚಿತ್ತಕ್ಕೆ ಹೊಳೆದದ್ದನ್ನ, ಬ್ಲಾಗಿನಲ್ಲಿ ಮೆತ್ತಿದ್ದನ್ನ, ನೀವು ಮೆಚ್ಚಿದ್ದಕ್ಕೆ................ಧನ್ಯವಾದ

  ReplyDelete
 9. ನಮಸ್ತೆ!!!
  ನಮ್ಮ ತೀರ್ಥಹಳ್ಳಿಯೂ ಒಂದು ಕಾಲಕ್ಕೆ ಹಳ್ಳಿಯ ರಸ್ತೆಯ ಹಾಗೇ ಇತ್ತು. ಈಗ ಯಾವಾಗ ನೋಡಿದರೂ traffic ಜ್ಯಾಮ್.
  ಕವನ ಒಂದು ತರಹ ಚೆನ್ನಾಗಿದೆ
  :-)
  ಮಾಲತಿ ಎಸ್.

  ReplyDelete
 10. @ಮಾಲತಿ ಮೇಡಮ್
  ನಮಸ್ಕಾರ ......

  ನೀವು ಹೇಳಿದ ಹಾಗೆ ತೀರ್ಥ ಹಳ್ಳಿ ಒಂದೇ ಅಲ್ಲ ನಗರೀಕರಣದ ಕಪ್ಪು ಛಾಯೆ ಎಲ್ಲಾಕಡೆಯಲ್ಲೂ ವ್ಯಾಪಿಸುತ್ತಾ ಇದೆ.
  ಕಾಲಾಯ ತಸ್ಮೈನಮಃ

  ಧನ್ಯವಾದ

  ReplyDelete