ಐಬು ತೆಗೆಯುವ ಐನಾತಿಗಳು
ಇಂತವರು ನಮ್ಮ ಸುತ್ತಲೂ ಇರುತ್ತಾರೆ .ಅವರಲ್ಲಿ ನೀವು ಯಾವುದೇ ವಿಷಯವನ್ನ ಹೇಳಿ ಸರಕ್ಕನೆ ಉತ್ತರವನ್ನ ಅವರದ್ದೇ ಆದ ದಾಟಿಯಲ್ಲಿ ಹೇಳಿ ಬಿಡುತ್ತಾರೆ.ಇಂತವರ ಮೇಲೆ ಸರಕ್ಕನೆ ಕೋಪ ಬಂದು ಬಿಡುತ್ತದೆ. ಕೋಪವನ್ನಾದರೂ ಯಾಕೆ ಮಾಡ್ಕೊಬೇಕು? ಅವರಿರುವದೆ ಹಾಗೆ! ಅವರು ಮಾತಾಡುವದೆ ಹಾಗೆ.
ಅವರಹತ್ತಿರ ವಾದಕ್ಕೆ ಬಿದ್ದು ಪ್ರಯೋಜನವಿಲ್ಲ. ನೀವು ಒಮ್ಮೆ ಅವರ ಮುಂದೆ ಒಂದು ಬೈಕಿನ ಸುದ್ಧಿ ಹೇಳಿ ನೋಡಿ, ಮ್ಯಕಾನಿಕ್ ತರಾ ಮಾತಾಡಿ ಬಿಡ್ತಾರೆ. ಇಂಜಿನ್ ಸರಿಇಲ್ಲ ಬೇಗ ಬೋರಿಗೆ ಬಂದುಬಿಡುತ್ತದೆ ಅಂತಲೋ, ಟ್ಯಾಂಕ್ ಚನ್ನಾಗಿ ಕೊಟ್ಟಿಲ್ಲಾ ಅಂತನೊ,ಅದರೋಳಗಿರುವ ನಮಗೆ ಗೊತ್ತಿರದ ಯಾವುದೋ ಒಂದು ಪಾರ್ಟ್ ಬಗ್ಗೆ ಮಾತಾಡಿಬಿಡ್ತಾರೆ. ನಾವಾದರೋ ಬಾಯಿ ಬಿಟ್ಕಂಡು ಕೇಳಿರ್ತೀವಿ. ಕೆಲವೊಮ್ಮೆ ಹೂಂ ಹಾಕಿರ್ತೇವೆ.ಒಮ್ಮೆ ಅವರ ಮುಂದೆ ಎಸ್. ಎಲ್ ಬೈರಪ್ಪನ ಕಾದಂಬರಿ ಇಷ್ಟ ಆಯ್ತು ಅಂತ ಹೇಳಿ ನೋಡಿ. ಅವ್ರಿಗೆ ನೀವು ಓದಿದ್ದು ಬೈರಪ್ಪನವರ ಯಾವ ಕಾದಂಬರಿ ಅಂತಾನೂ ಕೇಳುವ ಕುತೂಹಲ ಇರುವದಿಲ್ಲ. ತಮ್ಮ ಎಂದಿನ ಪೂರ್ವಾಗ್ರಹ ಪೀಡಿತ ದಾಟಿಯಿಂದ ಓ ಬೈರಪ್ಪನವರ ಕಾದಂಬರಿನಾ! ಎಲ್ಲ ಕಾದಂಬರಿ ಕಥೇನೂ ಒಂದೇ ದಾಟಿಯಲ್ಲಿರ್ತದೆ ಅಂತ ತಟ್ಟನೆ ಹೇಳಿ ಬಿಡ್ತಾರೆ. ಅಸಲಿಗೆ ನಾವು ಅವ್ರು ಬೈರಪ್ಪನ ಎಲ್ಲಾ ಕದಂಬರಿಯನ್ನ ಓದಿದವರು ಅಂತ ತಿಳಿದುಕೊಳ್ಳಬೇಕು.ಕೆದಕಿ ಪ್ರಶ್ನಿಸಿದರೆ ಅವರು ಯಾವ ಕಾದಂಬರಿಯನ್ನೂ ಓದಿರುವದೇ ಇಲ್ಲ. ಅದೆಲ್ಲೊ ಯಾರೋ ಬರೆದ ಒಂದು ವಿಮರ್ಶೆ ತುಂಡನ್ನ ತಮ್ಮ ತಲೆಯಲ್ಲಿ ಇಳಿದು ಬಿಟ್ಟು ಕೊಂಡಿರುತ್ತಾರೆ.ಇನ್ನು ಯಾವುದೋ ಕನ್ನಡದ ಉತ್ತಮ ಚಿತ್ರದ ಬಗ್ಗೆ ಮಾತಾಡಿ ನೋಡಿ ಓ ಕನ್ನಡ ಚಿತ್ರನಾ ಯಾರ್ ನೋಡ್ತಾರೆ ಗುರೂ? ಕನ್ನಡದವ್ರಿಗೆ ಸಿನೆಮಾನೆ ಮಾಡೋಕ್ ಬರೊದಿಲ್ಲ ಅಂತಾರೆ. ಪಕ್ಕದ ತೆಲ್ಗಿನವರ ಸಿನ್ಮಾಬಗ್ಗೆ ಹೊಗಳ್ತಾರೆ. ಅವರಿಗೆ ಅಸಲಿಗೆ ತೆಲ್ಗು ಅರ್ಥವಾಗೊಲ್ಲ. ಕನ್ನಡದ ಉತ್ತಮ ಸಿನಿಮಾ ನೋಡಿರೋದಿಲ್ಲ. ಇಂತಹ ಐನಾತಿಗಳಿಗೆ ಉತ್ತರ ಎನ್ ಹೇಳ್ತೀರಿ?ಏನ್ ಮಾಡ್ತೀರಿ?
ಯಾವುದೋ ಒಬ್ಬ ಸಂಗೀತ ಹಾಡುಗಾರನ ಬಗ್ಗೆ ಪ್ರಸ್ತಾಪಿಸಿ. ನೀವು ಮೆಚ್ಚುವ ಯಾವುದೇ ಹಿಂದುಸ್ಥಾನಿ ಸಂಗೀತದವರ ಅಥವಾ ಕರ್ನಾಟಕೀಯ ಸಂಗೀತಗಾರರ ಹೆಸರನ್ನ ಅವನ ಮುಂದೆ ಹೇಳಿ ನೋಡಿ.ತಮ್ಮ ಏಂದಿನ ದಾಟಿಯಲ್ಲೇ ಓ ಅವ್ರಾ ಬೇಸೂರ್ ಹಾಡ್ತಾರೆ ಅಂದು ಬಿಡ್ತಾರೆ. ಅಸಲಿಗೆ ಅವರಿಗೆ ಸಂಗೀತದ ಗಂಧ ಗಾಳಿ ಗೊತ್ತಿರುವದಿಲ್ಲ.ಯಾವ್ಯಾವ ಕಲಾವಿದರು ಹ್ಯಾಗ್ಯಾಗೆ ಹಡ್ತಾರೆ ಅಂತ ಕೇಳಿದಿರುವದಿಲ್ಲ.ಬೇಸೂರ ಹಾಡುವದು ಅಂತ ಅಂದ್ರೇನು ಅಂತ ತಿಳಿದಿರುವದಿಲ್ಲ .ಆದರೆ ಅವರ ಮುಂದೆ ನೀವು ಯಾವುದೇ ಸಂಗೀತಗಾರನ ಹೆಸರನ್ನ ಪ್ರಸ್ತಾಪಿಸಿದರೂ ಅವರ ಉತ್ತರ ಸಿದ್ಧವಾಗಿರುತ್ತದೆ. ತಮ್ಮ ದಾಟಿಯ ಮಾತಲ್ಲೇ ಎಲ್ಲವೂ ಗೊತ್ತಿದ್ದವರಂತೆ ಶರಾ ಬರ್ದು ಬಿಡ್ತಾರೆ.ಅವ್ರಿಗೆ ಒಪ್ಪಿಕೊಳ್ಳೊ ಮನಸ್ಥಿತಿನೇ ಇಲ್ವಾ ಅಂತ ಬೇಸರ ಅಗುತ್ತೆ ಅಲ್ವಾ?
ಇನ್ನು ಇವ್ರ ಜೊತೆಗೆ ತಿಂಡಿ ಕಾಫೀ ಊಟ ಅಂತ ಯಾವ್ದಾದ್ರು ನಮ್ಮ ರೇಂಜಿನ ಹೋಟೆಲ್ ಗೆ ಹೋದರಂತೂ ಮುಗಿತು .ಭಕಾಸುರನ ಹಾಗೆ ತಿಂದುಕೊಂಡು ಹೇಳುವದೇನು ಗೊತ್ತಾ? ಹೋಟೆಲ್ ನವರು ಸೋಡಾಹಾಗ್ತಾರೆ ಗುರೂ, ಆಯಿಲ್ ಹೆಚ್ಚಾಕಿಬಿಡ್ತಾರೆ ಗೂರೂ,ನೀರು ನಲ್ಲಿದು ಅಣ್ಣಯ್ಯಾ. ಬಿಲ್ಲು ಕೊಡುವವರು ನಾವೇ ಆದರೂ, ಒಂದಕ್ಕೆ ಎರಡು ಜಡಿತಾರೆ ಬ್ರದರ್ರೂ ಅಂತಾನೆ. ಲೋಟ ಕ್ಲೀನಿಲ್ಲ ಅಂತಾನೆ.ಚಟ್ನಿ ಕಸರು ಅಂತಾನೆ, ಅದ್ರೆ ಮತ್ತೋಂದು ಪ್ಲೇಟು ಮಸಾಲಾ ದೋಸೆಗೆ ಆರ್ಡರ್ ಮಾಡ್ತಾನೆ.ನಾವು ಹೋಗಿರುವದೆ ನಮ್ಮ ಕಿಸೆಯ ಭಾರದ ರೇಂಜಿನ ಹೋಟೆಲ್ಗೆ ಅಂತ ಗೊತ್ತಿದ್ದೂ ಕೂಡ ಅವ್ನಿಗೆ ಐಬು ಹೇಳದೆ ಅನ್ನ ಹೊಟ್ಟೆಗೆ ಹೋಗುವದಿಲ್ಲ.ಹಾಗಂತ ಫೈವ್ ಸ್ಟಾರ್ ಹೋಟೆಲ್ಲಿನಲ್ಲಿಯೇ ಅವ್ನಿಗೆ ಬೆಕಾದಹಾಗೇ ಅವನ ಮಾತಿನ ರೇಂಜಿನ ಹಾಗೆ ಮುಕ್ಕಿದರೆ ನಾವು ಬೇಡಾ ಅಂತಿದ್ವಾ ಸ್ವಾಮೀ.ಇನ್ನು ಕ್ರಿಕೆಟ್ ಆಟದ ಬಗ್ಗೆ ಅವರ ಮುಂದೆ ಒಂದು ಮಾತನ್ನ ಆಡಿ ನೋಡಿ. ನಿಮ್ಮ ಮಾತು ನೆಲಕ್ಕೆ ಬೀಳಲು ಕೊಡುವದೇ ಇಲ್ಲ. ಎಲ್ಲ ದುಡ್ಡು ತಗೊಂಡು ಅಡ್ತಾರೆ ಮಹರಾಯ್ರೆ ಅಂತಾನೆ.ಅವನಿಗೆ ನೀವು ಕ್ರಿಕೆಟ್ ಆಟದ ರೋಚಕತೆಯಾಗಲಿ,ಆಥವಾ ನಿಮ್ಮ ನೆಚ್ಚಿನ ಪ್ಲೇಯರ್ ಬಗ್ಗೆ ಯಾಗಲೀ, ರೆಕಾರ್ಡ್ಸ್ ಬಗ್ಗೆ ಯಾಗಲಿ, ಮಾತಾಡಿ ಪ್ರಯೋಜನವಿಲ್ಲ. ಮಾತಾಡಿದರೂ ಏನಂತಾನೆ ಗೊತ್ತಾ ಗವಾಸ್ಕರ ಮತ್ತೆ ಬಾರ್ಡರ್ ತರಾ ಕ್ಲಾಸಿಕಲ್ ಆಡೋರು ಈಗ ಯಾರೂ ಇಲ್ಲ ಬಿಡು ಅಂತ ನಿಮ್ಮ ಕ್ರಿಕೆಟ್ ಮೂಡನ್ನ ಕೆಡಿಸಿ ಬಿಡ್ತಾನೆ. ಅವ್ನೇನೂ ಗವಾಸ್ಕರ್ ಮತ್ತು ಬಾರ್ಡರ್ ಆಡುವಾಗ ಲೈವ್ ಮ್ಯಾಚ್ ನೋಡಿದ್ದಾನೆ ಅಂನ್ಕೊಂಡ್ರಾ ? ಇಲ್ಲ! ನೀವು ಮಾತಿಗೆ ನೀಂತಿರುವದು ಶುದ್ಧ ಐಬು ಐನಾತಿ ಎದುರು.ವಾದ ಮಾಡಿ ಅಥವಾ ಸುದ್ಧಿ ಹೇಳಿ ಪ್ರಯೋಜನವಿಲ್ಲ.
ಇನ್ನು ಯಾವುದಾದ್ರು ಹುಡ್ಗೀರ ಬಗ್ಗೆ ಮಾತಾಡ್ದ್ರಂತೂ ಮುಗಿತು ಕಥೆ.ಅವ್ಳು ಅಹಂಕಾರದ ಗೂಬೆ ಅಂತಾನೆ. ಒಂದಿನಾ ಆದ್ರೂ ಅವ್ಳಲ್ಲಿ ಪ್ರೀತಿಯಿಂದ ಹಾಯ್ ಅಂದ ದಾಖಲೆ ಸಿಕ್ಕಿರುವದಿಲ್ಲ. ಅಸಲಿಗೆ ಅವ ಹೇಳುವ ಯಾವ ಹೆಣ್ಣು ಮಕ್ಳೂ ಅಹಂಕಾರದ ಮೂಟೆ ಆಗಿರುವದಿಲ್ಲ. ಇಂತವರನ್ನ ಕಂಡರೆ ದೂರಸರಿದು ನಿಂತಿರುತ್ತಾರೆ ಅಷ್ಟೇ.....! ಇನ್ನು ಕೆಲವರಿರ್ತಾರೆ ಯಾರೋ ಒಬ್ಬ ಯಾವುದೋ ಬ್ಯುಸಿನೆಸ್ಸಿನಲ್ಲಿ ಪಾಪರ್ ಆದ ಅಂತಿಟ್ಟು ಕೊಳ್ಳಿ.ಈ ಐಬು ಐನಾತಿಗಳು ಹೇಳುವದು ಏನು ಗೊತ್ತಾ?ಅವ್ನಿಗೆ ಬಹಳ ಹೆಣ್ಮಕ್ಕಳ ಸಂಗ ಇತ್ತು ಅಂತಾನೋ ಅಥವಾ ಇಸ್ಪೀಟು ಚಟ ಇತ್ತು ಅಂತನೂ, ಎಗ್ಗಿಲ್ಲದೇ ಹೇಳಿ ಬಿಡ್ತಾರೆ.. ಪಕ್ಕದ್ಮನೆ ಹೆಣ್ಣುಮಗಳು ಜ್ವರಾ ಅಂತ ಸರ್ಕಾರಿ ಅಸ್ಪತ್ರೆಯ ಬೇಂಚಿನ ಮೇಲೆ ಕೂತಿರುವದ ನೋಡಿದ್ರೆ,ಅವ್ಳು ಬಸ್ರ ತೆಗಿಸ್ಲಿಕ್ಕೆ ಹೋಗಿದ್ಲು ಅಂತ ಹೇಳಿ ಬಿಡ್ತಾರೆ.ಬೇಜಾರಾಗೊಲ್ವಾ ಇಂತವರ ಬಗ್ಗೆ.
ಕೊಂಡುಕೋಳ್ಳುವ ಹಾಲಿನ ಬಗ್ಗೆ,ಅನ್ನದ ಬಗ್ಗೆ, ಕೇಳುವ ಸಂಗೀತದ ಬಗ್ಗೆ,ಪಕ್ಕದಮನೆಯ ಹೆಣ್ಣುಮಕ್ಕಳಬಗ್ಗೆ,ಒಂಟಿ ಹೆಣ್ಣಿನ ಬಗ್ಗೆ,ಓದುವ ಪೇಪರ್ ಬಗ್ಗೆ,ಹಾಕಿಕೊಳ್ಳುವ ವಸ್ತ್ರದಬಗ್ಗೆ,ಬಳಸುವ ಪೇಸ್ಟ್, ಹಲ್ಲುಜ್ಜುವ ಬ್ರಶ್ , ನೋಡುವ ಚಾನೆಲ್,ಹಾಕಿಕೊಳ್ಳುವ ಫರ್ಪೂಮ್, ತಿನ್ನುವ ಹೋಟೆಲ್ ಬಗ್ಗೆ,ಬಳಸುವ ನೀರು,ಉಳಿಯುವ ಮನೆ, ನೋಡುವ ಸಿನಿಮಾ ಕೇಳುವ ಹಾಡು, ಇಷ್ಟ ಪಡುವ ಲೇಖಕ,ಕಲಿಯುವ ಶಾಲೆ.ಕಲಿಸುವ ಮಾಸ್ತರರಬಗ್ಗೆ .ಕೊಂಡುಕೊಳ್ಳುವ ದಿನಸಿ,ಬರೆಯುವ ಲೇಖನಿಯ ಬಗ್ಗೆ , ಇನ್ನೂ ಎಷ್ಟೋ ಬಳಸುವ ಬಳಕೆಯಲ್ಲಿರುವ, ನೋಡುವ ಕೇಳುವ ವಸ್ತುಗಳಬಗ್ಗೆ, ಧರ್ಮದ ಬಗ್ಗೆ ಭಾಷೆಯ ಬಗ್ಗೆ, ದಿನಾ ದಿನಾ ಯಾವಾಗಲೂ ಐಬನ್ನೇ ತೆಗೆಯುತ್ತ ಕುಳಿತುಕೊಳ್ಳುವವರಿದ್ದಾರೆ.... ಏನು ಮಾಡೊಣ ಸ್ವಾಮೀ ನಾವಿರುವದೇ ಹೀಗೆ. ..........
(ಚಿತ್ರ ಅಂತರ್ಜಾಲ ಕೃಪೆ)
ವಾಹ್..ತುಂಬ ಚೆನ್ನಾಗಿದೆ.
ReplyDeleteಎಲ್ಲರಿಗೂ ಸಂಕ್ರಮಣದ ಶುಭಾಶಯಗಳು.
hoy mablanna neevu hingella nanna inathi anta bayyuda marayre che.... che..
ReplyDelete@narayana bhat-
ReplyDeleteಧನ್ಯವಾದಗಳು ಮತ್ತು ಸ್ವಾಗತವು
@Anonymous ನೀವು ಕುಂಬಳಕಾಯಿ ಕಳ್ಳರಾ ಮರಾರ್ಯೆ?:)(ತಮಾಷೆಗೆ)
ನೀವು ಹೀಗೆ ಅನಾಮಧೇಯರಾಗಿ ಆಭಿಪ್ರಾಯ ಅಂಟಿಸ್ತಾ ಇದ್ರೆ ನಿಮ್ಗೆ ಐನಾತಿ ಅಂತ ಹೆಸ್ರಿಡ್ತೇನಿ:)
<3
Hey ni nanna tappag arthamadkande iiiriti anumana saru\i alla bitbidu....
ReplyDeleteGiriyavare, naveeno coment madiddakke beejaragi blogging anne bittiruva thara ide........
ReplyDeletePriti iddalli../ abipraya bhedha iddalli.. kalaha, vagvada samanya neevu mundu varisi sir.