ಮಳೆ ಮುಗಿದ ಮೇಲೆ
ತಿಳಿಯಾಯ್ತು ಬಾನು ಮಳೆ ನಿಂತ ಮೇಲೆ
ಬೆಳಕಾಯ್ತು ಭೂಮಿ ತೆರೆ ಸರಿದ ಮೇಲೆ
ಹಗುರಾಗಿ ಮನವು ನಾ ಬರಿದಾದ ಹಾಗೆ
ಇಷ್ಟೆಲ್ಲಾ ಮಾತು ನಿನ್ನಲ್ಲಿ ಬಿಚ್ಚಿಟ್ಟ ಮೇಲೆ
ಮಳೆ ನಿಂತ ಮೇಲೆ ಹನಿ ಉಳಿಯುವಂತೆ
ತಂಗಾಳಿ ಬೀಸಿ ಚಳಿ ಕಾಡುವಂತೆ
ನವಿರಾದ
ಕನಸು ನಾ ಹೇಳಿದಂತೆ
ತಲೆ ತೂಗಿ
ನೀನು ತುಸು ನಾಚಿದಂತೆ
ಎಷ್ಟೆಲ್ಲಾ ಮಾತು ನಾ ಕೂಡಿಟ್ಟ ಒಲವು
ಮಳೆಯಂತೆ ಸುರಿದು ಕಾರ್ಮೋಡ ಸರಿದು
ಹೀಗೊಂದು ಕನಸು ನನಸಾದ ಹಾಗೆ
ಮಳೆ ಮುಗಿದ ಮೇಲೆ ಬೆಳಕಾದ ಹಾಗೆ
(ಚಿತ್ರ ಅಂತರ್ಜಾಲ ತಾಣದಿಂದ ಆಯ್ದದ್ದು )
kavana thumbaa chennaagi moodibandide.baravanige heege munduvariyali.
ReplyDeleteBhatre,
ReplyDeleteLaik itt..Odi Kushi aith....